For Quick Alerts
  ALLOW NOTIFICATIONS  
  For Daily Alerts

  ಯುವತಿ ಜೊತೆ ರಸ್ತೆಯಲ್ಲಿ 'ಸೆಕ್ಸ್ ಟಾಕ್': ಯೂಟ್ಯೂಬರ್ಸ್ ಬಂಧನ

  By ಫಿಲ್ಮ್ ಡೆಸ್ಕ್‌
  |

  ಯುವತಿಯೊಬ್ಬಾಕೆ ಜೊತೆ ರಸ್ತೆಯಲ್ಲಿ ನಿಂತು ಸೆಕ್ಸ್ ಬಗ್ಗೆ ಮಾತನಾಡಿದ್ದ ಯೂಟ್ಯೂಬ್ ಚಾನೆಲ್ ನಿರೂಪಕ ಹಾಗೂ ಇನ್ನೂ ಇಬ್ಬರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

  'ಚೆನ್ನೈ ಟಾಕ್ಸ್' ಹೆಸರಿನ ಯೂಟ್ಯೂಬ್ ಚಾನೆಲ್‌ ಯುವತಿಯೊಬ್ಬರ ಜೊತೆ ಮಾಡಿದ ಸಂದರ್ಶನವನ್ನು ತಮ್ಮ ಚಾನೆಲ್‌ನಲ್ಲಿ ಪ್ರಕಟಿಸಿತ್ತು. ಆ ಸಂದರ್ಶನದಲ್ಲಿ ತೀರಾ ಖಾಸಗಿ ವಿಷಯಗಳ ಬಗ್ಗೆ ಯುವತಿ ಮಾತನಾಡಿದ್ದಳು. ಅತಿಯಾದ 'ಸೆಕ್ಸ್ ಟಾಕ್' ಇದ್ದ ಸಂದರ್ಶನ ಚೆನ್ನೈ ಪೊಲೀಸರ ಕಣ್ಣು ಕೆಂಪಗೆ ಮಾಡಿದ್ದು, ಚಾನೆಲ್ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

  ವಿಡಿಯೋದಲ್ಲಿ ಯುವತಿಯೊಬ್ಬಾಕೆ ಲೈಂಗಿಕತೆ ಬಗ್ಗೆ ರೋಚಕವಾಗಿ ಮಾತನಾಡಿದ್ದಾರೆ. ಹಲವು ಖಾಸಗಿ ವಿಷಯಗಳನ್ನು ಹೇಳಿದ್ದಾರೆ. ಯುವತಿಯ ಮಾತುಗಳಿಗೆ ಸಂದರ್ಶಕ ನಗುತ್ತಾ, ಆಕೆಯ ಬಳಿ ಇನ್ನಷ್ಟು ಖಾಸಗಿ ವಿಷಯಗಳನ್ನು ಕೇಳುತ್ತಾ, ಇನ್ನಷ್ಟು 'ವಲ್ಗರ್' ರೀತಿಯಲ್ಲಿ ಮಾತನಾಡಲು ಪ್ರೇರೇಪಿಸುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ.

  ಸಖತ್ ವೈರಲ್ ಆಗಿತ್ತು ಈ ವಿಡಿಯೋ

  ಸಖತ್ ವೈರಲ್ ಆಗಿತ್ತು ಈ ವಿಡಿಯೋ

  ಈ ವಿಡಿಯೋ ಸಖತ್ ವೈರಲ್ ಆಗಿತ್ತು. ವಿಡಿಯೋಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಡಿಯೋದಲ್ಲಿ ಯುವತಿಯು ಲಾಕ್‌ಡೌನ್ ಸಮಯದಲ್ಲಿ ಸಿಗರೇಟು-ಮಧ್ಯ ಸಿಗದೆ ಪಟ್ಟ ಪಾಡುಗಳ ಬಗ್ಗೆಯೂ ಹೇಳಿದ್ದಾಳೆ. ವೈರಲ್ ಆದ ಈ ವಿಡಿಯೋ ಇನ್ನೂ ಚೆನ್ನೈ ಟಾಕ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿದೆ.

  ಮೂವರನ್ನು ಬಂಧಿಸಿರುವ ಪೊಲೀಸರು

  ಮೂವರನ್ನು ಬಂಧಿಸಿರುವ ಪೊಲೀಸರು

  'ಚೆನ್ನೈ ಟಾಕ್ಸ್‌' ಯೂಟ್ಯೂಬ್ ಚಾನೆಲ್‌ನ ಮಾಲೀಕ ದಿನೇಶ್, ವಿಜೆ ಅಸೀನ್ ಬಾದ್‌ಶಾ, ವಿಡಿಯೋ ನಿರ್ವಾಹಕ ಅಜಯ್ ಬಾಬು ಅನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಸಾರ್ವಜನಿಕ ಅಶ್ಲೀಲತೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಲಾಗಿದೆ.

  ಸಾಕಷ್ಟು ಯೂಟ್ಯೂಬ್‌ ಚಾನೆಲ್‌ಗಳಿವೆ

  ಸಾಕಷ್ಟು ಯೂಟ್ಯೂಬ್‌ ಚಾನೆಲ್‌ಗಳಿವೆ

  'ಚೆನ್ನೈ ಟಾಕ್ಸ್' ಯೂಟ್ಯೂಬ್ ಚಾನೆಲ್‌ನಲ್ಲಿ ಸಾರ್ವಜನಿಕರ ಚುಟುಕು ಸಂದರ್ಶನ ಮಾಡಲಾಗುತ್ತದೆ. ಜನರ ಬಳಿ ವಿಶೇಷವಾಗಿ ಯುವತಿಯರ ಬಳಿ ಖಾಸಗಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಗುತ್ತದೆ. ಈ ರೀತಿ ಚುಟುಕು ಸಂದರ್ಶನ ಮಾಡುವ ಯೂಟ್ಯೂಬ್‌ ಚಾನೆಲ್‌ಗಳು ಹಿಂದಿಯಲ್ಲಿ ಅತಿ ಹೆಚ್ಚಿಗಿವೆ.

  ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಸಲಾರ್ ಮುಹೂರ್ಥ | Filmibeat Kannada
   ಪ್ರಶ್ನೆಗಳು ಸಾಮಾನ್ಯವಾಗಿ ಲೈಂಗಿಕತೆ ಕುರಿತಾಗಿಯೇ ಇರುತ್ತವೆ

  ಪ್ರಶ್ನೆಗಳು ಸಾಮಾನ್ಯವಾಗಿ ಲೈಂಗಿಕತೆ ಕುರಿತಾಗಿಯೇ ಇರುತ್ತವೆ

  'ಚೆನ್ನೈ ಟಾಕ್ಸ್' ಮಾತ್ರವೇ ಅಲ್ಲದೆ ಭಾರತದಲ್ಲಿ ಹಲವು ಯೂಟ್ಯೂಬ್ ಚಾನೆಲ್‌ಗಳು ಈ ರೀತಿಯ ಚುಟುಕು ಸಂದರ್ಶನಗಳನ್ನು ಮಾಡುತ್ತವೆ. ಈ ರೀತಿಯ ಚುಟುಕು ಸಂದರ್ಶನದಲ್ಲಿ ಸಾಮಾನ್ಯವಾಗಿ ಸೆಕ್ಸ್ ಕುರಿತಾದ ಪ್ರಶ್ನೆಗಳೇ ಇರುತ್ತವೆ.

  English summary
  Three men arrested who runs 'Chennai Talks' you tube channel. They interviewed a girl and ask her very personal questions. Video went viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X