For Quick Alerts
  ALLOW NOTIFICATIONS  
  For Daily Alerts

  'ಯುವರತ್ನ' ಸುಂದರಿ ಸಯೇಶಾ ಹುಟ್ಟುಹಬ್ಬ: ನಾನು ತುಂಬಾ ಅದೃಷ್ಟವಂತ ಎಂದ ಪತಿ ಆರ್ಯ

  |

  ಬಹುಭಾಷಾ ನಟಿ ಸಯೇಶಾ ಸೈಗಲ್ ಗೆ ಇಂದು (ಆಗಸ್ಟ್ 12) ಹುಟ್ಟುಹಬ್ಬದ ಸಂಭ್ರಮ. 24ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಸಯೇಶಾಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಂದಹಾಗೆ ಸಯೇಶಾಗೆ ಡಬಲ್ ಸಂಭ್ರಮ. ಇತ್ತೀಚಿಗಷ್ಟೆ ಸಯೇಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿಯಾದ ಬಳಿಕ ಸಯೇಶಾ ಮೊದಲ ಬಾರಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಸಯೇಶಾಗೆ ತುಂಬಾನೇ ವಿಶೇಷವಾಗಿದೆ.

  ಮುಂಬೈ ಮೂಲದ ಸಯೇಶಾ ತಮಿಳು ನಟ ಆರ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ತಮಿಳು ಸೊಸೆಯಾಗಿರುವ ಸಯೇಶಾ ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಯೇಶಾ ಹುಟ್ಟುಹಬ್ಬಕ್ಕೆ ಪತಿ ಆರ್ಯ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಸಯೇಶಾ ಜೊತೆ ಇರುವ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ನಿನ್ನನ್ನು ಹೆಂಡತಿಯಾಗಿ ಪಡೆದಿರುವುದು ನಾನು ತುಂಬಾ ಅದೃಷ್ಟವಂತ ಎಂದು ಟ್ವೀಟ್ ಮಾಡಿದ್ದಾರೆ.

  ಮದುವೆಯಾಗುವುದಾಗಿ ಯುವತಿಗೆ ವಂಚನೆ ಪ್ರಕರಣ: ವಿಚಾರಣೆಗೆ ಹಾಜರಾದ ನಟ ಆರ್ಯಮದುವೆಯಾಗುವುದಾಗಿ ಯುವತಿಗೆ ವಂಚನೆ ಪ್ರಕರಣ: ವಿಚಾರಣೆಗೆ ಹಾಜರಾದ ನಟ ಆರ್ಯ

  "ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಹೆಂಡ್ತಿ. ನೀನು ನನ್ನ ಮೇಲೆ ಹೊಂದಿರುವ ವಿಶೇಷ ಪ್ರೀತಿ ಪ್ರತಿದಿನ ಹೆಚ್ಚಾಗುತ್ತಿರಲಿ. ನೀನು ಅತ್ಯಂತ ಪ್ರೀತಿಯ ವ್ಯಕ್ತಿ. ನನ್ನ ಜೀವನದಲ್ಲಿ ನಿನ್ನನ್ನು ಹೆಂಡತಿಯಾಗಿ ಪಡೆದಿರುವುದು ನಾನು ತುಂಬಾ ಅದೃಷ್ಟವಂತ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ನಟಿ ಸಯೇಶಾ ಸದ್ಯ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ತಾಯಿಯಾಗುತ್ತಿರುವ ವಿಚಾರವನ್ನು ಸಯೇಶಾ ಅಥವಾ ಆರ್ಯ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಮಗುವಿನ ಜನ್ಮ ನೀಡಿದ ಬಳಿಕ ಆರ್ಯ-ಸಯೇಶಾ ತಂದೆ-ತಾಯಿಯಾದ ವಿಚಾರ ಬಹಿರಂಗವಾಗಿದೆ. ಜುಲೈ 24ರಂದು ಸಯೇಶಾ ಮಗುವಿಗೆ ಜನ್ಮ ನೀಡಿದ ವಿಚಾರವನ್ನು ತಮಿಳು ನಟ ವಿಶಾಲ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ತಿಳಿಸಿದ್ದರು.

  ತೆಲುಗು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಯೇಶಾ ಬಳಿಕ ಹಿಂದಿ, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಹಿಂದಿಯಲ್ಲಿ ಅಜಯ್ ದೇವಗನ್ ಜೊತೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಯುವರತ್ನ' ಸಿನಿಮಾದಲ್ಲಿ ಬಣ್ಣಹಚ್ಚುವ ಮೂಲಕ ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಳಿಕ ಸಯೇಶಾ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

  ಇನ್ನು ನಟ ಆರ್ಯ ಇತ್ತೀಚಿಗಷ್ಟೆ ಸರ್ಪಟ್ಟ ಪರಂಬರೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾದಲ್ಲಿ ಆರ್ಯ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಒಟಿಟಿಯಲ್ಲಿ ಬಿಡುಗಡೆಯಾಗಿರುವ ಸರ್ಪಟ್ಟ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಪಟ್ಟ ಯಶಸ್ಸು, ತಂದೆಯಾದ ಸಂಭ್ರಮ ಆರ್ಯ ಖುಷಿಗೆ ಪಾರವೇ ಇಲ್ಲದಂತೆ ಆಗಿದೆ.

  ಇದೇ ಖುಷಿಯಲ್ಲಿದ್ದ ಆರ್ಯಗೆ ವಂಚನೆ ಪ್ರಕರಣ ಶಾಕ್ ನೀಡಿದೆ. ಜರ್ಮನಿ ಮೂಲದ ಯುವತಿ ನಟ ಆರ್ಯ ವಿರುದ್ಧ ಮದುವೆಯಾಗುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಆರ್ಯಗೆ ಸಮನ್ಸ್ ಜಾರಿಯಾಗಿದ್ದು, ಇತ್ತೀಚಿಗಷ್ಟೆ ಚೆನ್ನೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

  ಆರ್ಯ ಮತ್ತು ಸಯೇಶಾ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಮದುವೆ ಸಮಾರಂಭದಲ್ಲಿ ಸ್ನೇಹಿತರು, ಕುಟುಂಬದರು ಮತ್ತು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಮದುವೆಯಾಗಿ 2 ವರ್ಷದ ಬಳಿಕ ಮೊದಲ ಮಗುವನ್ನು ಸ್ವಾಗತಿಸಿರುವ ಸಯೇಶಾ ಸದ್ಯದಲ್ಲೇ ಮತ್ತೆ ಬಣ್ಣ ಹಚ್ಚುವ ಸಾಧ್ಯತೆ ಇದೆ.

  English summary
  Yuvarathnaa Actress Sayyeshaa celebrating her birthday today. Actor Arya Birthday wishes to his wife Sayyeshaa

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X