For Quick Alerts
  ALLOW NOTIFICATIONS  
  For Daily Alerts

  ವಿವಾಹಿತ ಹೀರೊಗಳಿಗೆ ಸಂಭಾವನೆ ಯಾಕೆ ಕಡಿಮೆ ಮಾಡಲ್ಲ? 'ಆ ದಿನಗಳು' ಖ್ಯಾತಿಯ ಅರ್ಚನಾ ಗುಡುಗು!

  |

  ಯಾವುದೇ ಸಿನಿಮಾರಂಗವಿರಲಿ ಗಾಢ್ ಫಾದರ್ ಇದ್ದರೆ ಬೇಗನೇ ಯಶಸ್ಸು ಕಾಣಬಹುದು. ಇದು ಹಿಂದಿನಿಂದಲೂ ಸಾಬೀತಾಗುತ್ತಲೇ ಬಂದಿದೆ. ಆದರೂ, ಯಾರ ಸಪೋರ್ಟ್ ಇಲ್ಲದೆನೇ ಬೆಳೆದು ನಿಂತಿರೊ ನಟ-ನಟಿಯರಿಗೇನು ಕಮ್ಮಿಯಿಲ್ಲ. ಇಂತಹ ಒಬ್ಬ ನಟಿ ಅರ್ಚನಾ ಶಾಸ್ತ್ರಿ ( ವೇದಾ).

  ಅಂದ್ಹಾಗೆ ಅರ್ಚನಾ ಶಾಸ್ತ್ರಿಯನ್ನು ಸಿನಿಪ್ರಿಯರು ಮರೆಯೋಕೆ ಸಾಧ್ಯವೇ ಇಲ್ಲ. ಅದರಲ್ಲೂ 15 ವರ್ಷಗಳ ಹಿಂದೆ ಬಂದ ಎವರ್‌ ಗ್ರೀನ್ ಸಿನಿಮಾ 'ಆ ದಿನಗಳು' ಮರೆಯೋಕೆ ಸಾಧ್ಯವೇ ಇಲ್ಲ. ಅದೇ ಸಿನಿಮಾ ಹೀರೊಯಿನ್ ಅರ್ಚನಾ ಶಾಸ್ತ್ರಿ. ಇದೇ ನಟಿಯೀಗ ವಿವಾಹದ ಬಳಿಕ ಮತ್ತೆ ಸುದ್ದಿಯಲ್ಲಿದ್ದಾರೆ.

  ಅರ್ಚನಾ ಶಾಸ್ತ್ರಿ ಗಾಢ್ ಫಾದರ್ ಇಲ್ಲದೆನೇ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಆದರೆ, ಇವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ. ಆದರೂ ಪ್ರಯತ್ನ ಬಿಟ್ಟಿರಲಿಲ್ಲ. ಇದೇ ನಟಿಯೀಗ ತೆಲುಗು ನಿರ್ಮಾಪಕರ ಬಗ್ಗೆ ಶಾಕಿಂಗ್ ಕಮೆಂಟ್ ಕೊಟ್ಟು ಸುದ್ದಿಯಾಗಿದ್ದಾರೆ. ಕಳೆದರೆಡು ದಿನಗಳಿಂದ ಅರ್ಚನಾ ಕೊಟ್ಟ ಹೇಳಿಕೆಗಳು ಟಾಲಿವುಡ್‌ನಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

  ನಟಿ ಅರ್ಚನಾ ಶಾಕಿಂಗ್ ಹೇಳಿಕೆ

  ನಟಿ ಅರ್ಚನಾ ಶಾಕಿಂಗ್ ಹೇಳಿಕೆ

  ಸಿನಿಮಾರಂಗದಲ್ಲಿ ಗಾಡ್ ಫಾದರ್ ಇಲ್ಲದೆ ಬೆಳೆದಿದ್ದು ಬೆಳೆದ ಪ್ರತಿಭೆಗಳು ತೀರಾ ಅಪರೂಪ. ಅಂತಹವರಲ್ಲಿ 'ಆ ದಿನಗಳು' ಖ್ಯಾತಿಯ ಅರ್ಚನಾ ಶಾಸ್ತ್ರಿ ಕೂಡ ಒಬ್ಬರು. ಯಾರ ಇಲ್ಲದೆ ಚಿತ್ರರಂಗಕ್ಕೆ ಬಂದು ತನ್ನದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಸ್ಟಾರ್ ಹೀರೊಯಿನ್ ಅಲ್ಲದೆ ಹೋದರೂ, ತೆಲುಗು ಸಿನಿಮಾ ಪ್ರೇಕ್ಷಕರಿಗೆ ಇವರು ಚಿರಪರಿಚಿತ. ತನ್ನ ಸೌಂದರ್ಯದ ಜೊತೆ ಜೊತೆಗೆ ಪ್ರತಿಭೆಯೂ ಇದೆ ಎಂದು ಸಾಬೀತು ಮಾಡಿದ್ದಾರೆ. ಇದೇ ನಟಿ ಈಗ ದಿಢೀರನೇ ತೆಲುಗು ನಿರ್ಮಾಪಕರ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.

  ಸ್ಥಾನಮಾನ ಸಿಗಲಿಲ್ಲ

  ಸ್ಥಾನಮಾನ ಸಿಗಲಿಲ್ಲ

  ಅರ್ಚನಾ ಶಾಸ್ತ್ರಿ ತೆಲುಗು ಸಿನಿಮಾದಿಂದಲೇ ಟಾಲಿವುಡ್‌ಗೆ ಪ್ರವೇಶ ಮಾಡಿದ್ದರು. ಆದರೂ, ಸ್ಟಾರ್ ಪಟ್ಟ ಮಾತ್ರ ಸಿಕ್ಕಿರಲಿಲ್ಲ. ಆದರೂ, 'ನುವ್ವೊಸ್ತಾನಂಟೆ ನೇನೊದ್ದಂಟಾನಾ', 'ಪೌರ್ಣಮಿ', 'ಶ್ರೀರಾಮರಾಜ್ಯಂ' ಅಂತಹ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ 'ಆ ದಿನಗಳು' ಸಿನಿಮಾವನ್ನಂತೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಇನ್ನು ತೆಲುಗು ಬಿಗ್‌ಬಾಸ್‌ಗೂ ಪ್ರವೇಶ ಮಾಡಿದ್ದರು. ಆದರೆ, ಅಲ್ಲೂ ವರ್ಕ್‌ಔಟ್ ಆಗಲಿಲ್ಲ. ಸರಿಯಾದ ಅವಕಾಶ ಸಿಗದ ಕಾರಣ ಸಿನಿಮಾರಂಗದಿಂದಲೇ ದೂರವಾಗಿದ್ದರು.

  ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ

  ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ

  ಅರ್ಚನಾ ಶಾಸ್ತ್ರಿಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗುತ್ತಿತ್ತು. ಸಿಕ್ಕರೂ ಸರಿಯಾದ ಆಫರ್ ಯಾರೂ ಕೊಡಲಿಲ್ಲ. ಇದರಿಂದ ನಿಧಾನವಾಗಿ ಸಿನಿಮಾದಿಂದ ದೂರವಾಗ ತೊಡಗಿದ್ದರು. ಮೂರು ವರ್ಷಗಳ ಹಿಂದಷ್ಟೇ ಗೆಳೆಯ ಜಗದೀಶ್ ಎಂಬುವವರನ್ನು ವಿವಾಹವಾಗಿದ್ದಾರೆ. ಈಗ ಮತ್ತೆ ಸಿನಿಮಾರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡುವ ಯತ್ನದಲ್ಲಿದ್ದಾರೆ. ಈ ವೇಳೆನೇ ತೆಲುಗು ಚಿತ್ರರಂಗದಲ್ಲಿ ಪುರುಷ ಪ್ರಾಬಲ್ಯವೇ ಹೆಚ್ಚಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹೀರೊ ಹಾಗೂ ಹೀರೊಯಿನ್‌ಗೆ ಸಮಾನತೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

  ವಿವಾಹಿತ ಹೀರೊಗಳಿಗೆ ಸಂಭಾವನೆ ಕಡಿಮೆ ಯಾಕಿಲ್ಲ?

  ವಿವಾಹಿತ ಹೀರೊಗಳಿಗೆ ಸಂಭಾವನೆ ಕಡಿಮೆ ಯಾಕಿಲ್ಲ?

  ವಿವಾಹದ ಬಳಿಕ ನಾಯಕಿಯರು ಚಿತ್ರರಂಗಕ್ಕೆ ಮರಳು ಹಲವು ಅಡೆತಡೆಗಳಿವೆ. ಮದುವೆಯಾದ ಹೀರೊಯಿನ್‌ಗಳ ಸಂಭಾವನೆ ಮೇಲೆ ನಿರ್ಮಾಪಕ ಕಣ್ಣಿರುತ್ತೆ. ಅವರು ನಮಗೆ ಕಡಿಮೆ ಸಂಭಾವನೆ ನೀಡಲು ಬಯಸುತ್ತಾರೆ. ಆದೇ ಇಬ್ಬರು ಮಕ್ಕಳನ್ನು ಹೊಂದಿರೋ ಹೀರೊಗಳಿಗೆ ಈ ರೀತಿ ಹೇಳುತ್ತಾರಾ? ಎಂದು ಕಟುವಾಗಿ ಪ್ರಶ್ನೆ ಮಾಡಿದ್ದಾರೆ. ಈ ರೀತಿ ತಾರತಮ್ಯ ಯಾಕೆ ತೋರುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

  English summary
  Aa Dinagalu Fame Archana Shastry Made Controversial Comments About Telugu Producers, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X