twitter
    For Quick Alerts
    ALLOW NOTIFICATIONS  
    For Daily Alerts

    ನಟ, ಹೋರಾಟಗಾರ ಆರ್.ನಾರಾಯಣಮೂರ್ತಿ ಬಂಧನ

    |

    ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ, ಸಂಗೀತ ನಿರ್ದೇಶಕ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಗುರುತು ಹಾಗೂ ಪ್ರತ್ಯೇಕ ಅಭಿಮಾನಿ ಬಳಗವನ್ನೂ ಹೊಂದಿರುವ ಆರ್.ನಾರಾಯಣಮೂರ್ತಿ ಅನ್ನು ಪೊಲೀಸರು ಬಂಧಿಸಿದ್ದಾರೆ.

    ಸಿನಿಮಾ ಸೆಲೆಬ್ರಿಟಿ ಆಗಿರುವ ಜೊತೆಗೆ ಅಪ್ಪಟ ಹೋರಾಟಗಾರರೂ ಆಗಿರುವ ಆರ್.ನಾರಾಯಣಮೂರ್ತಿ ಹೊಸ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಬಳಿ ರೈತರು ನಡೆಸುತ್ತಿರುವ ಅವಿರತ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜಭವನ ಛಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರೊಂದಿಗೆ ಸೇರಿ ಹೈದರಾಬಾದ್‌ನಲ್ಲಿನ ರಾಜಭವನಕ್ಕೆ ನುಗ್ಗಲು ಯತ್ನಿಸಿದರು. ಆ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

    ಬಂಧನದ ಸಮಯ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಆರ್.ನಾರಾಯಣಮೂರ್ತಿ, ''2006ರಲ್ಲಿ ಬಿಹಾರದಲ್ಲಿ ಹೊಸ ಕೃಷಿ ಕಾಯ್ದೆ ತಂದ ನಂತರ ಅಲ್ಲಿ ರೈತರೇ ಇಲ್ಲದಂತೆ ಆಗಿಬಿಟ್ಟಿತು. ಈಗಲೂ ಸಹ ಈ ಹೊಸ ಕೃಷಿ ಕಾಯ್ದೆಗಳು ರೈತರನ್ನು ಕಾರ್ಮಿಕರನ್ನಾಗಿ ಮಾಡಲಿದೆ'' ಎಂದಿದ್ದಾರೆ.

    Actor, Activist R Narayana Murthy Arrested By Hyderabad Police

    ಹೋರಾಟದ ಮೂಲಕ ಹೆಚ್ಚು ಗುರುತು ಪಡೆದಿರುವ ಆರ್.ನಾರಾಯಣಮೂರ್ತಿ ಅವರನ್ನು 'ಎರ್ರಣ್ಣ' (ಕೆಂಪಣ್ಣ) ಎಂದೇ ಜನರು ಪ್ರೀತಿಯಿಂದ ಕರೆಯುತ್ತಾರೆ. ಅವರ ಸಿನಿಮಾಗಳು ಸಹ ಸದಾ ದಲಿತರು, ದಮನಿತರ ಪರವಾಗಿಯೇ ಇರುತ್ತವೆ. ಕಮ್ಯೂನಿಸ್ಟ್ ಪ್ರೀತಿಯುಳ್ಳ ಆರ್.ನಾರಾಯಣಮೂರ್ತಿ ಹಣಕ್ಕಾಗಿ ಅಲ್ಲದೆ ಜಾಗೃತಿಗಾಗಿ ಸಿನಿಮಾ ಮಾಡಲು ಅತ್ಯಂತ ವಿರಳ ಸಿನಿ ಕರ್ಮಿಗಳಲ್ಲಿ ಒಬ್ಬರು.

    Recommended Video

    ಸಂಚಾರಿ ವಿಜಯ್ ಗೆ ದೊಡ್ಡ ಗೌರವ ಸಲ್ಲಿಸಿದ ಅಮೇರಿಕ ಚಿತ್ರಮಂದಿರ | Filmibeat Kannada

    30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಆರ್.ನಾರಾಯಣಮೂರ್ತಿ ಅವರ 'ದಂಡೋರ', 'ಎರ್ರ ಸೈನ್ಯಂ', 'ಚೀಕಟಿ ಸೂರ್ಯುಲು', 'ಅಡವಿ ಬಿಡ್ಡಲು', 'ವೀರ ತೆಲಂಗಾಣ', 'ಪೋರು ತೆಲಂಗಾಣ', 'ಸಿಂಗಣ್ಣ', 'ಎರ್ರೋಡು', 'ತೆಲುಗೋಡು', 'ಭೀಮುಡು' ಇನ್ನೂ ಹಲವಾರು ಸಿನಿಮಾಗಳು ಮುಖ್ಯವಾದುವು.

    English summary
    Actor, Activist R Narayana Murthy arrested by Hyderabad police. He tried enter to Raj Bhavan with farmers.
    Tuesday, June 29, 2021, 18:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X