Don't Miss!
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- News
Indira Canteens: ಇಂದಿರಾ ಕ್ಯಾಂಟೀನ್ಗಳಲ್ಲಿ ಕುಡಿಯಲು ನೀರಿಲ್ಲ, ಬಿಲ್ ಕಟ್ಟಿಲ್ಲ ಎಂದು ಸಂಪರ್ಕ ಕಡಿತ
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ದೊಡ್ಡತನದ ಬಗ್ಗೆ ಉದಾಹರಣೆ ಕೊಟ್ಟ ನಟ ಜಗಪತಿ ಬಾಬು
ತೆಲುಗು ನಟ ಜಗಪತಿ ಬಾಬು ನಾಯಕನ ಪಟ್ಟ ಕಳಚಿ ವಿಲನ್ ಪಟ್ಟ ತೊಟ್ಟ ನಂತರ ಹೆಚ್ಚು ಖ್ಯಾತಿ, ಹಣ ಗಳಿಸಿದ್ದಾರೆ. ತೆಲುಗು ಗೆ ಮಾತ್ರವೇ ಸೀನಿಮತವಾಗಿದ್ದ ನಟ ಜಗಪತಿ ಬಾಬು ವಿಲನ್ ಪಾತ್ರಗಳು ಒಪ್ಪಿಕೊಳ್ಳಲು ಆರಂಭಿಸಿದ ನಂತರ ಬಹುಭಾಷಾ ನಟನರಾಗಿದ್ದಾರೆ.
ಕನ್ನಡದಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಜಗಪತಿ ಬಾಬು, ಇದೀಗ ರಾಬರ್ಟ್ ಸಿನಿಮಾದಲ್ಲಿಯೂ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೆಚ್ಚಾಗಿ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸದ ಜಗಪತಿ ಬಾಬು ನಿನ್ನೆ ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದರ್ಶನ್ ಬಗ್ಗೆ ಜಗಪತಿ ಬಾಬು ಆಡಿದ ಮಾತುಗಳು ದರ್ಶನ್ ಅವರ ಅಭಿಮಾನಿಗಳು ಏಕೆ ದರ್ಶನ್ ಅನ್ನು ಅಷ್ಟಾಗಿ ಆರಾಧಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ದರ್ಶನ್ ಅವರ ದೊಡ್ಡತನಗಳ ಬಗ್ಗೆ ಉದಾಹರಣೆ ನೀಡಿ ವಿವರಿಸಿದರು ಜಗಪತಿ ಬಾಬು.

ದರ್ಶನ್ ನಿಜಜೀವನದಲ್ಲೂ ಹೀರೋ: ಜಗಪತಿ ಬಾಬು
'ದರ್ಶನ್ ಕಾಲ ಮಾತ್ರ ನೆಲದಲ್ಲಿರುತ್ತದೆ ಎಂದಲ್ಲ ಅವರ ತಲೆ ಕೂಡ ನೆಲದ ಮೇಲೆಯೇ ಇರುತ್ತದೆ ಆದರೆ ಆತನ ವ್ಯಕ್ತಿತ್ವ ಮಾತ್ರ ಆಕಾಶದಲ್ಲಿರುತ್ತದೆ. ಆದ ಸ್ಟಾರ್, ಆತನೊಬ್ಬ ರಿಯಲ್ ಸ್ಟಾರ್. ನಟರು ಸಾಕಷ್ಟು ಮಂದಿ ಇರುತ್ತಾರೆ. ನಟನಾಗುವುದು ದೊಡ್ಡದಲ್ಲ, ಆದರೆ ಜೀವನದಲ್ಲಿ ಒಬ್ಬ ಹೀರೋ ದೊಡ್ಡದು' ಎಂದರು ಜಗಪತಿ ಬಾಬು.

ಯಾರೇ ಸಹಾಯ ಕೇಳಿದರೂ ಮಾಡುತ್ತಾರೆ ದರ್ಶನ್: ಜಗಪತಿ ಬಾಬು
'ಯಾರಿಗೆ ಏನು ಬೇಕೆಂದರೆ ಹಾಗೆ ಕೊಟ್ಟುಬಿಡುತ್ತಾರೆ. ಏನು ಸಹಾಯ ಕೇಳಿದರು ಮಾಡಿಬಿಡುತ್ತಾರೆ. ಕೊಟಿಗಳಾದರು ಪರ್ವಾಗಿಲ್ಲ ಹಾಗೆ ಕೊಟ್ಟುಬಿಡುತ್ತಾರೆ. ಅದು ಆತನ ದೊಡ್ಡ ಗುಣ ಅದನ್ನು ನಾನೇ ಕಣ್ಣಾರೆ ನೋಡಿದ್ದೇನೆ' ಎಂದರು ಜಗಪತಿ ಬಾಬು.

ನಾನು ಸುಳ್ಳು ಹೇಳುವವನಲ್ಲ: ಜಗಪತಿ ಬಾಬು
'ನಾನು ಬೇರೊಂದು ಸಿನಿಮಾದ ಚಿತ್ರೀಕರಣಕ್ಕೆ ಮೈಸೂರಿಗೆ ಹೋಗಿದ್ದೆ. ನನ್ನನ್ನು ಹುಡುಕಿಕೊಂಡು ಮೈಸೂರಿಗೆ ಬಂದ ದರ್ಶನ್ ನನ್ನನ್ನು ಸ್ವಾಗತಿಸಲೆಂದು ವಿಶೇಷವಾಗಿ ಎಲ್ಲರನ್ನೂ ಕರೆಸಿ ಒಂದು ಕಾರ್ಯಕ್ರಮವನ್ನೇ ಮಾಡಿದರು. ಆ ಘಟನೆಯೇ ನಿಮಗೆ ದರ್ಶನ್‌ನ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ನಾನು ಸುಳ್ಳು ಹೇಳುವವನಲ್ಲ' ಎಂದರು ಜಗಪತಿ ಬಾಬು.
Recommended Video

'ನಮ್ಮ ಮನೆಗೆ ಅವರು ಬಂದಿದ್ದಾರೆ, ಅವರನ್ನು ಸ್ವಾಗತಿಸಬೇಕಿದೆ'
'ಇದೀಗ ದರ್ಶನ್ ಹಾಗು ರಾಬರ್ಟ್ ತಂಡ ನಮ್ಮ ಊರಿಗೆ ಬಂದಿದೆ. ನಮ್ಮ ಹೊಸಲು ತುಳಿದು ಅವರು ಇಲ್ಲಿಗೆ ಬಂದಿದ್ದಾರೆ, ಅವರನ್ನು ನಾವು ಎದೆಯಲ್ಲಿಟ್ಟುಕೊಂಡು ನೋಡಿಕೊಳ್ಳಬೇಕು. ಈ ಸಿನಿಮಾ ಹಿಟ್ ಆಗಿಯೇ ಆಗುತ್ತದೆ, ಆದರೆ ನಾವುಗಳು ಸಿನಿಮಾವನ್ನು ನಮ್ಮದೇ ಸಿನಿಮಾ ಎಂದು ನೋಡಬೇಕಿದೆ' ಎಂದರು ಜಗಪತಿ ಬಾಬು.