Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೈಸೂರಿನಲ್ಲಿ ಒಂದೇ ಹೋಟೆಲ್‌ನಲ್ಲಿ ನರೇಶ್, ಪವಿತ್ರಾ ಲೋಕೇಶ್!
ನರೇಶ್, ಪವಿತ್ರಾ ಲೋಕೇಶ್ ಮತ್ತು ರಮ್ಯಾ ರಘುಪತಿ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ರಮ್ಯಾ ತಮ್ಮ ಪತಿಯನ್ನು ಹಾಗೆ ಬಿಡಲು ಸಿದ್ಧವಾಗಿಲ್ಲ. ಹಾಗಾಗಿ ರಮ್ಯಾ ಏನೇ ಆದರೂ ತಮ್ಮ ಪತಿಯನ್ನು ಜೊತೆಗೆ ಕರೆದುಕೊಂಡು ಹೋಗ್ಬೇಕು ಎಂದು ನಿರ್ಧರಿಸಿದ್ದಾರೆ.
ಹಾಗಾಗಿ ಅವರ ಹಿಂದೆ ಬಿದ್ದಿದ್ದಾರೆ. ಇನ್ನು ಇಂದು (ಜೂನ್ 3) ಮೈಸೂರಿನಲ್ಲಿ ಒಟ್ಟಿಗೆ ಇದ್ದ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರನ್ನು ಹಿಡಿದಿದ್ದಾರೆ. ಈ ಮೂಲಕ ಅವರಿಗೆ ಬುದ್ಧಿ ಕಲಿಸುತ್ತೇನೆ ಎಂದು ಅಕ್ರೋಶ ಹೊರ ಹಾಕಿದ್ದಾರೆ.
'ನನ್ನ
ಹಾಗೂ
ಪವಿತ್ರಾ
ಲೋಕೇಶ್
ಸಂಬಂಧ
ರಮ್ಯಾಗೆ
ಹೇಳುವ
ಅಗತ್ಯವಿಲ್ಲ':
ತೆಲುಗು
ನಟ
ನರೇಶ್!
ರಮ್ಯಾ, ರಘುಪತಿ ಹೋಟೆಲ್‌ಗೆ ಬಂದಿರುವ ವಿಚಾರ ತಿಳಿದ ಬಳಿಕ, ಪೊಲೀಸರ ರಕ್ಷಣೆಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಅಲ್ಲಿಂದ ತೆರಳಿದ್ದರೆ. ಮೈಸೂರು ಹೋಟೆಲ್ ಮುಂದೆ ನಡೆದ ಘಟನೆಗಳು ಮಾಧ್ಯಮದಲ್ಲಿ ವರದಿ ಆಗಿದೆ. ಅಲ್ಲಿ ನಡೆದದ್ದು ಏನು ಎನ್ನುವುದನ್ನು ಮುಂದೆ ಓದಿ.

ಮೈಸೂರ್ ಹೋಟೆಲ್‌ಗೆ ರಮ್ಯಾ ಭೇಟಿ!
ನರೇಶ್ ಬೆಂಗಳೂರಿಗೆ ಬಂದಿದ್ದು ಮಾಧ್ಯಮಗಳಿಗೆ ಸಂದರ್ಶನವನ್ನು ಕೊಟ್ಟಿದ್ದಾರೆ. ಸಂದರ್ಶನದಲ್ಲಿ ಈ ಪ್ರಕರಣದಲ್ಲಿ ತಮ್ಮ ನಿಲುವು ಏನು ಮತ್ತು ಈ ಪ್ರಕರಣದಲ್ಲಿ ಆಗಿರುವುದು ಏನು ಎನ್ನುವುದನ್ನು ವಿವರವಾಗಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಬಳಿಕ ನರೇಶ್ ಎಲ್ಲಿ ಹೋದರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಮೈಸೂರಿನಲ್ಲಿ. ಹೌದು ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರು ಮೈಸೂರಿನಲ್ಲಿ ತಂಗಿದ್ದಾರೆ. ಈ ವಿಚಾರ ತಿಳಿದ ರಮ್ಯಾ ರಘುಪತಿ ನೇರವಾಗಿ ಮೈಸೂರಿಗೆ ಹೊರಟಿದ್ದಾರೆ. ಮೈಸೂರಿನ ಹೋಟೆಲ್‌ನಲ್ಲಿ ನರೇಶ್ ಮತ್ತು ಪವಿತ್ರಾಲೋಕೇಶ್ ಒಟ್ಟಿಗೆ ಇರುವುದು ಗೊತ್ತಾಗಿ ರಮ್ಯಾ ರಘುಪತಿ ನೇರವಾಗಿ ಹೋಟೆಲ್ ರೂಮಿನ ಮುಂದೆ ಹೋಗಿ, ಇಬ್ಬರನ್ನು ಹೊರಬರುವಂತೆ ಕೂಗಿದ್ದಾರೆ.

ಚಪ್ಪಲಿ ಕೈಗೆತ್ತಿಕೊಂಡ ರಮ್ಯಾ ರಘುಪತಿ!
ಈ ವೇಳೆ ರಮ್ಯಾ ರಘುಪತಿ ಆಕ್ರೋಶಗೊಂಡಿದ್ದು, ಒಂದೇ ರೂಮ್‌ನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಇರುವುದು ಗೊತ್ತಾದ ಬಳಿಕ ಆಕ್ರೋಶಗೊಂಡ ರಮ್ಯಾ ರಘುಪತಿ ಕೈಯಲ್ಲಿ ಚಪ್ಪಲಿ ಹಿಡಿದು ಬಾಗಿಲ ಮುಂದೆ ಕಾಯುತ್ತಿದ್ದರು. ಆದರೆ ರಮ್ಯಾ ಬಂದಿರುವ ವಿಚಾರ ತಿಳಿದು ನರೇಶ್ ಮತ್ತು ಪವಿತ್ರಾ ಲೋಕೇಶ್ ಹೋಟೆಲ್ ರೂಮಿನಿಂದ ಹೊರ ಬರಲಿಲ್ಲ. ಪೊಲೀಸರು ಸ್ಥಳಕ್ಕೆ ಬಂದ ಬಳಿಕ ರಮ್ಯಾ ರಘುಪತಿ ಅವರನ್ನ ತಡೆದಿದ್ದಾರೆ.

ಪೊಲೀಸ್ ರಕ್ಷಣೆಯಲ್ಲಿ ಹೊರಟ ನರೇಶ್, ಪವಿತ್ರಾ!
ಇನ್ನು ರಮ್ಯ ರಘುಪತಿ ಹೋಟೆಲ್‌ಗೆ ಬಂದಿರುವ ವಿಚಾರ ತಿಳಿದ ಬಳಿಕ ಪೊಲೀಸರ ಮೊರೆ ಹೋಗಿದ್ದಾರೆ. ನರೇಶ್ ಮತ್ತು ಪವಿತ್ರ ಲೋಕೇಶ್ ರಮ್ಯಾ ಹೋಟೆಲಿಗೆ ಬಂದ ಬಳಿಕ ರೂಮ್ ನಿಂದ ಹೊರ ಬರೆದೆ, ಈ ಜೋಡಿ ಪೊಲೀಸ್ ರಕ್ಷಣೆಯಲ್ಲಿ ಹೋಟೆಲ್ ಬಿಟ್ಟು ತೆರಳಿದ. ಈ ವೇಳೆ ರಮ್ಯಾ ರಘುಪತಿ ಅವರನ್ನು ಪೊಲೀಸರು ತಡೆದಿದ್ದು ನರೇಶ್ ಮತ್ತು ಪವಿತ್ರ ಲೋಕೇಶ್ ಅವರನ್ನು ರಕ್ಷಣೆಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಇದೆಲ್ಲವೂ ಮಾಧ್ಯಮಗಳ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಈ ಜೋಡಿಯನ್ನು ಒಟ್ಟಿಗೆ ಕಂಡು ಇದೆಂತಹಾ ಸ್ನೇಹ ಎಂದು ರಮ್ಯಾ ರಘುಪತಿ ಪ್ರಶ್ನೆ ಮಾಡಿದ್ದಾರೆ.

ನನ್ನ ಗಂಡನನ್ನು ಕಡೆದುಕೊಂಡು ಹೋಗ್ತೀನಿ- ರಮ್ಯಾ!
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ರಮ್ಯಾ ರಘುಪತಿ ನಾನು ಪವಿತ್ರ ಲೋಕೇಶ್ ಅವರ ಬಗ್ಗೆ ಮಾತನಾಡುವುದಿಲ್ಲ. ಅವರ ಬಗ್ಗೆ ಆಕೆಯ ಪತಿಯೇ ಹೇಳಿಕೊಂಡಿದ್ದಾರೆ. ನನ್ನ ಪತಿ ಸರಿ ಹೋಗಬೇಕು ಅವರು ನನ್ನ ಜೊತೆಗೆ ಬರಬೇಕು ಎನ್ನುವುದಷ್ಟೇ ನನ್ನ ಉದ್ದೇಶ. ನನಗೆ ನ್ಯಾಯ ಬೇಕು ಇದಕ್ಕಾಗಿ ನಾನು ಹೊರಡುತ್ತೇನೆ. ಇನ್ನು ಹೈದ್ರಾಬಾದ್‌ನಲ್ಲಿ ಕೂಡ ನಾನು ಮಾಧ್ಯಮಗೋಷ್ಠಿ ನಡೆಸುತ್ತೇನೆ. ಆಗ ಅಲ್ಲಿನ ಮಾಧ್ಯಮಗಳಿಗೆ ವಿಚಾರ ಗೊತ್ತಾಗ ಬಹುದು. ಹೀಗೆ ಸ್ನೇಹಿತರಾಗಿದ್ದರೆ, ಕದ್ದುಮುಚ್ಚಿ ಒಂದೇ ಹೋಟೆಲ್ ರೂಮಿನಲ್ಲಿ ಯಾಕೆ ಇರಬೇಕು. ಮೈಸೂರಿನಲ್ಲಿ ಪವಿತ್ರಾ ಅವರ ಮನೆ ಇದೆ. ಸ್ನೇಹಿತ ಎಂದ ಮೇಲೆ ಅವರ ಮನೆಗೆ ಕರೆದುಕೊಂಡು ಹೋಗ ಬಹುದಿತ್ತು ಇಲ್ಲಿಗೆ ಯಾಕೆ ಬರಬೇಕಿತ್ತು ಎಂದು ರಮ್ಯಾ ರಘುಪತಿ ಪ್ರಶ್ನಿಸಿದ್ದಾರೆ.