Don't Miss!
- Sports
ಈ ಪ್ರದರ್ಶನದಿಂದ ತೃಪ್ತಿಯಾಗಿದೆ: ಅದ್ಭುತ ಪ್ರದರ್ಶನದ ಬಗ್ಗೆ ಶುಬ್ಮನ್ ಗಿಲ್ ಸಂತಸ
- News
ಹೊಸ ಘಟಕ, ಪದಾಧಿಕಾರಿ ಘೋಷಣೆ, ಶೀಘ್ರವೇ ಚುನಾವಣೆ ಅಭ್ಯರ್ಥಿ ಆಯ್ಕೆ ಆರಂಭ: AAP
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Lifestyle
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ನರೇಶ್- ರಮ್ಯಾ ರಘುಪತಿ ಲವ್ ಸ್ಟೋರಿ ಬಲು ಚೆಂದ!
ಸದ್ಯ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸುದ್ದಿಯೆಂದರೆ ಪವಿತ್ರ ಲೋಕೇಶ್, ರಮ್ಯಾ ರಘುಪತಿ, ನರೇಶ್ ಅವರ ವಿಚಾರ. ಈ ಮೂವರ ಆರೋಪ, ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೊಸದೊಂದು ರೂಪವನ್ನು ಪಡೆದುಕೊಳ್ಳುತ್ತದೆ ಇದೆ.
ರಮ್ಯಾ ರಘುಪತಿ ಮತ್ತು ನರೇಶ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಈಗಾಗಲೇ ಬೆಳಕಿಗೆ ಬಂದಿದೆ. ಪವಿತ್ರ ಲೋಕೇಶ್, ನರೇಶ್ ಮದುವೆಯಾಗುವ ವಿಚಾರವನ್ನು ನೇರವಾಗಿ ಇಬ್ಬರು ಹೇಳಿಲ್ಲವಾದರೂ, ನಮ್ಮ ಬದುಕು ನಮ್ಮ ಇಷ್ಟ, ಮದುವೆಯಾಗುವುದಾದರೆ ಆಗ್ತಿವಿ ಎನ್ನುವಂತಹ ಅಭಿಪ್ರಾಯಗಳನ್ನು ಹೊರಹಾಕುತ್ತಾ ಬಂದಿದ್ದಾರೆ.
ಮದುವೆ
ಬಳಿಕ
ಈಗ
ನೆಕ್ಲೆಸ್
ಕಿತ್ತಾಟ:
ಪವಿತ್ರಾ
ಲೋಕೇಶ್,
ರಮ್ಯಾ
ರಘುಪತಿ
ಆರೋಪ-ಪ್ರತ್ಯಾರೋಪ!
ಈ ವಿಚಾರ ಬೆಳಕಿಗೆ ಬಂದಾಗಿನಿಂದಲೂ ಸಾಕಷ್ಟು ಜಿದ್ದಾ ಜಿದ್ದಿ ನಡೆಯುತ್ತಲೇ ಇದೆ. ರಮ್ಯಾ ತಮ್ಮ ಪತಿ ನರೇಶ್ ಮತ್ತು ಪವಿತ್ರ ಅವರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದ ನರೇಶ್ ಅವರು ಕೂಡ ರಮ್ಯಾ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿಬಿಟ್ಟಿದ್ದಾರೆ. ಇಷ್ಟು ಮಟ್ಟದಲ್ಲಿ ಇವರು ಕಿತ್ತಾಡಿಕೊಂಡರು ಇವರ ಲವ್ ಸ್ಟೋರಿ ಮಾತ್ರ ಬಲು ಚೆಂದ.
ಅವಶ್ಯಕತೆಗಳನ್ನು
ಆಸೆ
ಎಂದುಕೊಂಡಿದ್ದು
ಸುಚೇಂದ್ರ
ಪ್ರಸಾದ್
ಮೂರ್ಖತನ:
ಪವಿತ್ರಾ
ಲೋಕೇಶ್

ರಮ್ಯಾ, ನರೇಶ್ ಪರಿಚಯ ಆಗಿದ್ದು ಹೇಗೆ?
ಇನ್ನು ಇಷ್ಟೆಲ್ಲಾ ಆಗಿದ್ದನ್ನು ನೋಡಿದರೆ ರಮ್ಯಾ ರಘುಪತಿ ಮತ್ತು ನರೇಶ್ ಇಬ್ಬರು ಮದುವೆಯಾಗಿದ್ದು ಹೇಗೆ?, ಅವರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ. ಅವರದ್ದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿವೆ. ಇವರ ಪ್ರೇಮ ಕಹಾನಿಯೇ ಬಲು ಚೆಂದ. ಇವರ ಲವ್ ಶುರುವಾಗಲು ಸಿನಿಮಾವೇ ಕಾರಣ, ಸಿನಿಮಾ ಸೆಟ್‌ನಲ್ಲಿಯೆ ಇವರ ಭೇಟಿ ಆಗಿದ್ದು. ರಮ್ಯಾ, ನರೇಶ್ ಲವ್ ಸ್ಟೋರಿ ಬಗ್ಗೆ ಮುಂದೆ ಓದಿ...

ಆಸ್ಟ್ರೇಲಿಯದಲ್ಲಿ ರಮ್ಯಾ ರಘುಪತಿ ಸಿನಿಮಾ ಕೋರ್ಸ್ !
ರಮ್ಯಾ ರಘುಪತಿ ಅವರ ಹಿನ್ನೆಲೆಯೂ ಕೂಡ ಬಹಳ ದೊಡ್ಡದಾಗಿದೆ. ರಮ್ಯಾ ನರೇಶ್ ಅವರನ್ನು ಮದುವೆಯಾದ ಬಳಿಕ ಚಿತ್ರರಂಗವನ್ನ ನೋಡಿದವರಲ್ಲ. ಅವರು ಮೊದಲೇ ಆಸ್ಟ್ರೇಲಿಯಾದಲ್ಲಿ ಸಿನಿಮಾ ಕೋರ್ಸನ್ನು ಮಾಡಿ ಬಂದಿದ್ದರು. ಸಿನಿಮಾಟೋಗ್ರಫಿಯಲ್ಲಿ ಸ್ಪೆಷಲಿಸ್ಟ್ ಕೂಡ ರಮ್ಯಾ ರಘುಪತಿ. ಸಿನಿಮಾದಲ್ಲಿ ಆಸಕ್ತಿ ಹೊಂದಿರುವ ರಮ್ಯಾ ನರೇಶ್ ತಾಯಿ ವಿಜಯ ನಿರ್ಮಲ ಅವರ ಬಳಿ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿರುತ್ತಾರೆ. ಆ ಬಳಿಕವೇ ರಮ್ಯಾ ನರೇಶ್ ಅವರನ್ನ ಭೇಟಿಯಾಗುತ್ತಾರೆ.

ನಂದನವನ ಚಿತ್ರೀಕರಣದ ವೇಳೆ ಭೇಟಿ!
ನರೇಶ್ ಮೊದಲ ಬಾರಿಗೆ ರಮ್ಯಾ ಅವರನ್ನು ನಂದನವನ ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಭೇಟಿ ಮಾಡುತ್ತಾರೆ. ಅಲ್ಲಿಂದಲೇ ಅವರ ಪರಿಚಯ ಶುರುವಾಗಿ ನಂತರ ಪರಿಚಯ ಸ್ನೇಹವಾಗಿ ಮುಂದುವರಿಯುತ್ತದೆ. ಬಳಿಕ ರಮ್ಯಾ, ನರೇಶ್ ಅವರ ಕುಟುಂಬಕ್ಕೆ ಹತ್ತಿರವಾಗ್ತಾರೆ. ಸ್ನೇಹಿತರಾಗಿಯೇ ಹೆಚ್ಚು ಆಪ್ತವಾಗಿ ಇಬ್ಬರೂ ಕೂಡ ಮುಂದುವರೆಯುತ್ತಾರೆ. ಹಲವು ವಿಚಾರಗಳಲ್ಲಿ ರಮ್ಯಾ ರಘುಪತಿ ನರೇಶ್ ಅವರಿಗೆ ಸಲಹೆಗಳನ್ನು ನೀಡುತ್ತಾ ಬರುತ್ತಾರೆ. ಇನ್ನು ನರೇಶ್ ಕೂಡ ರಮ್ಯಾ ಅವರ ವಿಚಾರದಲ್ಲಿ ಸಾಕಷ್ಟು ಸಲಹೆಗಳನ್ನು ಕೊಡುತ್ತಿರುತ್ತಾರೆ. ಹೀಗೆಯೇ ಅವರ ಸ್ನೇಹ ಮುಂದುವರೆಯುತ್ತದೆ.

ರಮ್ಯಾಗಾಗಿ ಬೆಂಗಳೂರಿಗೆ ಬರುತ್ತಿದ್ದ ನರೇಶ್!
ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿರುವ ರಮ್ಯಾ ರಘುಪತಿ ತಮ್ಮ ತಂದೆಯನ್ನು ಕಳೆದುಕೊಂಡು ತುಂಬಾನೆ ಡಿಪ್ರೆಶನ್‌ನಲ್ಲಿ ಇದ್ದರಂತೆ ಹಾಗೆ ತಮ್ಮ ತಾತನ ಅನಾರೋಗ್ಯದ ಸಮಯದಲ್ಲಿ ರಮ್ಯಾ ರಘುಪತಿಗೆ ಬಲವಾಗಿ ನಿಂತಿದ್ದು ನರೇಶ್. ರಾತ್ರಿ ಒಂಬತ್ತು ಗಂಟೆಗೆ ಮುಗಿದ ಬಳಿಕ ಫ್ಲೈಟ್‌ನಲ್ಲಿ ಬೆಂಗಳೂರಿಗೆ ಬಂದು ರಾತ್ರಿಯೆಲ್ಲಾ ರಮ್ಯಾ ಅವರ ಜೊತೆ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿದ್ದರಂತೆ ನರೇಶ್, ಮತ್ತೆ ಬೆಳಗ್ಗೆ ಫ್ಲೈಟ್‌ನಲ್ಲಿ ಶೂಟಿಂಗ್ ಲೋಕೇಶ್‌ಗೆ ಹೋಗುತ್ತಿದ್ದರಂತೆ. ಇನ್ನು ರಮ್ಯಾ ಅವರ ಕುಟುಂಬದಲ್ಲಿ ಲವ್ ಮ್ಯಾರೇಜ್ ಒಪ್ಪುತ್ತಿರಲಿಲ್ಲವಂತೆ. ತಮ್ಮ ಅಮ್ಮನನ್ನು ಒಪ್ಪಿಸುವುದು ಕಷ್ಟವಾಗಿತ್ತು ಎಂದು ಹಳೆಯ ಸಂದರ್ಶನದಲ್ಲಿ ರಮ್ಯಾ ಹೇಳಿಕೊಂಡಿದ್ದಾರೆ. ಇಷ್ಟೆಲ್ಲಾ ಸ್ನೇಹಮಯವಾಗಿ ಪ್ರೀತಿಪೂರ್ವಕವಾಗಿ ನಂಬಿಕೆ ಇಟ್ಟು ಮದುವೆಯಾದ ಜೋಡಿ ಸಂದರ್ಶನವೊಂದರಲ್ಲಿ ಈ ಉತ್ತಮ ವಿಚಾರಗಳನ್ನು ಹಂಚಿಕೊಂಡಿದೆ. ಆದರೆ ಇಂದು ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿದ್ದಾರೆ.