For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಪರಿಣಾಮ ಮುಂದಕ್ಕೆ ಹೋಗಿದ್ದ ನಟ ನಿತಿನ್ ಮದುವೆ ದಿನಾಂಕ ನಿಗದಿ

  |

  ತೆಲುಗಿನ ಖ್ಯಾತ ನಟ ನಿತಿನ್ ಮದುವೆ ದಿನಾಂಕ ಎರಡು ಬಾರಿ ಮುಂದಕ್ಕೆ ಹೋಗಿದೆ. ಗೆಳತಿ ಶಾಲಿನಿ ಜೊತೆ ನಿತಿನ್ ಫೆಬ್ರವರಿಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿತಿನ್ ಮತ್ತು ಶಾಲಿನಿ ಇಬ್ಬರು ಏಪ್ರಿಲ್ ನಲ್ಲಿ ವಿದೇಶದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದರು. ಆದರೆ ಕೊರೊನಾ ವೈರಸ್ ಹಾವಳಿಯ ಪರಿಣಾಮ ನಿತಿನ್ ಮದುವೆ ದಿನಾಂಕ ಮುಂದಕ್ಕೆ ಹೋಗಿತ್ತು.

  ಕುಟುಂಬದವರು ನಿತಿನ್ ಮದುವೆಯನ್ನು ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ನಲ್ಲಿ ಮಾಡಲು ನಿರ್ಧರಿಸಿತ್ತು. ಆದರೀಗ ನಿತಿನ್ ಮದುವೆ ಮುಂದಿನ ತಿಂಗಳೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಚಿತ್ರರಂಗದಲ್ಲಿ ಸಾಕಷ್ಟು ನಟ-ನಟಿಯರು ತಂತ್ರಜ್ಞರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೆ ತೆಲುಗು ಚಿತ್ರರಂಗದಲ್ಲಿ ನಟ ರಾಣಾ ದಗ್ಗುಬಾಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮತ್ತು ನಟ ನಿಖಿಲ್ ಸಿದ್ಧಾರ್ಥ್ ಗೆಳತಿ ಪಲ್ಲವಿ ಜೊತೆ ಹಸೆಮಣೆ ಏರಿದ್ದಾರೆ. ಮುಂದೆ ಓದಿ..

  ಕೊರೊನಾ ಎಫೆಕ್ಟ್: ನಟ ನಿತಿನ್ ಮದುವೆ ಮತ್ತೆ ಮುಂದೂಡಿಕೆ?ಕೊರೊನಾ ಎಫೆಕ್ಟ್: ನಟ ನಿತಿನ್ ಮದುವೆ ಮತ್ತೆ ಮುಂದೂಡಿಕೆ?

  ಜುಲೈನಲ್ಲಿ ನಿತಿನ್ ಮದುವೆ

  ಜುಲೈನಲ್ಲಿ ನಿತಿನ್ ಮದುವೆ

  ನಿಖಿಲ್ ಕುಟುಂಬದವರು ಸಹ ನಿಖಿಲ್ ಮದುವೆ ಮಾಡಿ ಮುಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ನಿಖಿಲ್ ಮದುವೆ ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ನಿತಿನ್ ನಡೆಯಲಿದೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ಮದುವೆ ಮಾಡುವ ಪ್ಲಾನ್ ಮಾಡಲಾಗಿದೆ.

  ಹೈದರಾಬಾದ್ ನಲ್ಲಿ ಮದುವೆ

  ಹೈದರಾಬಾದ್ ನಲ್ಲಿ ಮದುವೆ

  ನಿತಿನ್ ಮತ್ತು ಶಾಲಿನಿ ಮದುವೆಗೆ ಈಗಾಗಲೆ ಜಾಗ ಕೂಡ ನಿಗದಿಯಾಗಿದೆ. ವಿದೇಶದಲ್ಲಿ ಮದುವೆ ಆಗುವ ಕನಸು ಕಂಡಿದ್ದ ಈ ಜೋಡಿ ಈಗ ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಮದುವೆ ದಿನಾಂಕ ಇನ್ನೂ ರಿವೀಲ್ ಆಗಿಲ್ಲ.

  ಅಂಧಾಧುನ್ ತೆಲುಗು ರೀಮೇಕ್‌ನಲ್ಲಿ ಕನ್ನಡತಿ ನಾಯಕಿ: ನಿತಿನ್ ಜತೆ ರೊಮ್ಯಾನ್ಸ್ ಮಾಡುವ ನಟಿ ಯಾರು?ಅಂಧಾಧುನ್ ತೆಲುಗು ರೀಮೇಕ್‌ನಲ್ಲಿ ಕನ್ನಡತಿ ನಾಯಕಿ: ನಿತಿನ್ ಜತೆ ರೊಮ್ಯಾನ್ಸ್ ಮಾಡುವ ನಟಿ ಯಾರು?

  ಮುಂಜಾಗೃತಾ ಕ್ರಮ

  ಮುಂಜಾಗೃತಾ ಕ್ರಮ

  ಕೊರೊನಾ ವೈರಸ್ ಹಾವಳಿಯ ಪರಿಣಾಮ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರದ ಕಾಯ್ದುಕೊಳ್ಳುವ ಜೊತೆಗೆ ನಿತಿನ್, ಶಾಲಿನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಬ್ಬರ ಮದುವೆ ಸರಳವಾಗಿ ನಡೆಯಲಿದೆ.

  ನಿತಿನ್ ಚಿತ್ರದಲ್ಲಿ ಅಭಿನಯಿಸಲು ನಿರ್ಮಾಪಕರಿಂದ ಟಬು ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆ ಎಷ್ಟು.?ನಿತಿನ್ ಚಿತ್ರದಲ್ಲಿ ಅಭಿನಯಿಸಲು ನಿರ್ಮಾಪಕರಿಂದ ಟಬು ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆ ಎಷ್ಟು.?

  ನಿತಿನ್ ಸಿನಿಮಾಗಳು

  ನಿತಿನ್ ಸಿನಿಮಾಗಳು

  ನಿತಿನ್ ಕೊನೆಯದಾಗಿ ಭೀಷ್ಮ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸದ್ಯ ರಂಗ್ ದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿತಿನ್ ಜೊತೆ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹಿಂದಿಯ ಸೂಪರ್ ಹಿಟ್ ಅಂಧಾದುನ್ ತೆಲುಗು ರಿಮೇಕ್ ನಲ್ಲಿ ನಿತಿನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Telugu Actor Nithin going to tie the knot with Shalini on July.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X