For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಪತ್ನಿ ಬಗ್ಗೆ ಹೀನ ಹೇಳಿಕೆ ನೀಡಿದ ನಟ

  |

  ಆಂಧ್ರ-ತೆಲಂಗಾಣ ತೆಲುಗು ರಾಜ್ಯಗಳಲ್ಲಿ ಈಗ ಪವನ್‌ ಕಲ್ಯಾಣ್‌ರದ್ದೇ ಮಾತು. ಸಿನಿಮಾ ಕಾರ್ಯಕ್ರಮವೊಂದರಲ್ಲಿ ರೋಷಾವೇಷದಿಂದ ಮಾತನಾಡಿದ ಪವನ್ ಕಲ್ಯಾಣ್, ಆಂಧ್ರ ಸಿಎಂ ಜಗನ್ ಅನ್ನು ಕೆಲವು ಮಂತ್ರಿಗಳನ್ನು ಏಕವಚನದಲ್ಲಿ ಬೈದಿದ್ದರು. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದು, ಚಿತ್ರರಂಗದಲ್ಲಿಯೇ ಹಲವರು ಪವನ್‌ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

  ಪವನ್ ಹೇಳಿಕೆಯನ್ನು ವಿರೋಧಿಸಿ ತೆಲುಗಿನ ಜನಪ್ರಿಯ ಪೋಷಕ ನಟ ಪೋಸಾನಿ ಕೃಷ್ಣ ಮುರಳಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಪವನ್ ಹೇಳಿಕೆಯನ್ನು ಖಂಡಿಸಿದ್ದರು. ಅಲ್ಲದೆ ಪವನ್ ವ್ಯಕ್ತಿತ್ವವನ್ನು ಗೇಲಿ ಮಾಡುವ ಜೊತೆಗೆ, ರಾಜಕೀಯ ಅಪ್ರಬುದ್ಧ, ತಾನು ಸಂಭಾವನೆ ಕಡಿಮೆ ಮಾಡಿಕೊಂಡು ನಿರ್ಮಾಪಕರಿಗೆ, ವಿತರಕರಿಗೆ ಸಹಾಯ ಮಾಡುವ ಬದಲು ಟಿಕೆಟ್ ದರ ಹೆಚ್ಚಿಸುವಂತೆ ಹೇಳುತ್ತಿದ್ದಾರೆಂದು ಟೀಕಿಸಿದ್ದರು.

  ಸೋಮವಾರದ ಸುದ್ದಿಗೋಷ್ಠಿ ಬಳಿಕ ಪೋಸಾನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪವನ್ ಅಭಿಮಾನಿಗಳು ಮೂದಲಿಕೆಗಳ ಸುರಿಮಳೆ ಸುರಿಸಿದ್ದರು. ಕೆಲವರು ಬೆದರಿಕೆಯನ್ನೂ ಹಾಕಿದರು. ಹಾಗಾಗಿ ಮಂಗಳವಾರ ಹೈದರಾಬಾದ್‌ ಪ್ರೆಸ್‌ ಕ್ಲಬ್‌ನಲ್ಲಿ ಮತ್ತೆ ಸುದ್ದಿಗೋಷ್ಠಿ ನಡೆಸಿದ ಪೋಸಾನಿ ಕೃಷ್ಣ ಮುರಳಿ, ಪವನ್ ಕಲ್ಯಾಣ್ ಹಾಗೂ ಪವನ್ ಕಲ್ಯಾಣ್ ಪತ್ನಿ ವಿರುದ್ಧ ಕೀಳು ಹೇಳಿಕೆಗಳನ್ನು ನೀಡಿದರು.

  ಪವನ್ ಕಲ್ಯಾಣ್ ಪತ್ನಿಗೆ ಅಕ್ರಮ ಸಂಬಂಧವಿದೆ: ಪೋಸಾನಿ

  ಪವನ್ ಕಲ್ಯಾಣ್ ಪತ್ನಿಗೆ ಅಕ್ರಮ ಸಂಬಂಧವಿದೆ: ಪೋಸಾನಿ

  ''ಪವನ್ ಕಲ್ಯಾಣ್ ಶೂಟಿಂಗ್‌ಗೆ ಹೋದ ಬಳಿಕ ಆತನ ಪತ್ನಿ ಮನೆ ಗೆಲಸದವನ ಜೊತೆ ಅಕ್ರಮ ಸಂಬಂಧ ಹೊಂದುತ್ತಾಳೆ. ಪವನ್ ಕಲ್ಯಾಣ್ ಮಕ್ಕಳು ಆತನಿಗೆ ಹುಟ್ಟಿದ ಮಕ್ಕಳಲ್ಲ ಬದಲಿಗೆ ಕೆಲಸದವರಿಗೆ ಹುಟ್ಟಿದ ಮಕ್ಕಳು'' ಎಂಬಿತ್ಯಾದಿ ಆಧಾರ ರಹಿತ ಕೀಳು ಆರೋಪಗಳನ್ನು ಮಾಡಿದ್ದಾರೆ ಪೋಸಾನಿ. ನಟ ಪೋಸಾನಿ ಈ ಆರೋಪಗಳನ್ನು ಮಾಡುತ್ತಿದ್ದಂತೆ ಅಲ್ಲಿದ್ದ ಪತ್ರಕರ್ತರೇ ಪೋಸಾನಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಪವನ್ ಕಲ್ಯಾಣ್ ಅನ್ನಾ ಲೆಜ್ನೇವಾ ಹೆಸರಿನ ರಷ್ಯನ್ ಮಹಿಳೆಯನ್ನು 2013ರಲ್ಲಿ ವಿವಾಹವಾಗಿದ್ದಾರೆ. ಅದಕ್ಕೂ ಮುನ್ನ ಅವರಿಗೆ ಇಬ್ಬರು ಪತ್ನಿಯರಿದ್ದರು, ಇಬ್ಬರೊಟ್ಟಿಗೂ ವಿಚ್ಛೇಧನ ಪಡೆದುಕೊಂಡಿದ್ದಾರೆ.

  ಚಿಟಿಕೆ ಹೊಡೆದರೆ ನೂರು ತುಂಡಾಗುತ್ತೀಯ ಎಂದಿದ್ದ ಕೆಸಿಆರ್

  ಚಿಟಿಕೆ ಹೊಡೆದರೆ ನೂರು ತುಂಡಾಗುತ್ತೀಯ ಎಂದಿದ್ದ ಕೆಸಿಆರ್

  ಸುದ್ದಿಗೋಷ್ಠಿ ಆರಂಭದಲ್ಲಿ ಮಾತನಾಡಿದ ಪೋಸಾನಿ, ''ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಸಾಮಾನ್ಯ. ಪವನ್ ಕಲ್ಯಾಣ್ ಜಗನ್ ಅವರನ್ನು ಬೈದ, ನಾನು ಜಗನ್ ಅಭಿಮಾನಿ ಹಾಗಾಗಿ ಪವನ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ ಆದರೆ ಅದಕ್ಕೆ ಪವನ್ ಹಾಗೂ ಅವನ ಸೈಕೋ ಅಭಿಮಾನಿಗಳು ನನಗೆ ಬೆದರಿಕೆ ಹಾಕಿದ್ದಾರೆ. ಒಮ್ಮೆ ನೆನಪಿದೆಯಾ, ತೆಲಂಗಾಣ ಸಿಎಂ ಕೆಸಿಆರ್ ''ನನ್ನ ಮಗನೇ ನಾನು ಚಿಟಿಕೆ ಹೊಡೆದರೆ ನೀನು ನೂರು ತುಂಡಾಗುತ್ತೀಯ'' ಎಂದು ಪವನ್ ಅನ್ನು ಬಹಿರಂಗವಾಗಿ ಬೈದಿದ್ದರು. ಆಗ ಯಾಕೆ ಯಾವ ಪವನ್ ಕಲ್ಯಾಣ್ ಅಭಿಮಾನಿ ಕೆಸಿಆರ್‌ಗೆ ಬೆದರಿಕೆ ಹಾಕಲಿಲ್ಲ, ಅವರ ಮನೆ ಮೇಲೆ ದಾಳಿ ಮಾಡಲಿಲ್ಲ'' ಎಂದರು. ಪವನ್‌ಗೆ, ಕೆಸಿಆರ್‌ ಎಚ್ಚರಿಕೆ ಕೊಟ್ಟಿದ್ದ ವಿಡಿಯೋ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

  ನನ್ನ ಪತ್ನಿಯ ಬಗ್ಗೆ ಏಕೆ ಮಾತನಾಡುತ್ತೀರಿ: ಪೋಸಾನಿ

  ನನ್ನ ಪತ್ನಿಯ ಬಗ್ಗೆ ಏಕೆ ಮಾತನಾಡುತ್ತೀರಿ: ಪೋಸಾನಿ

  ''ಪವನ್ ಅಭಿಮಾನಿಯೊಬ್ಬ ಕರೆ ಮಾಡಿ ನನ್ನ ಪತ್ನಿ ವ್ಯಭಿಚಾರಿ ಎಂದು ನಾನು ಅದು ಯಾವಾಗಲೋ ಯುವತಿಯೊಬ್ಬಳಿಗೆ ಮೋಸ ಮಾಡಿದೆ ಎಂದೆಲ್ಲ ಮಾತನಾಡುತ್ತಿದ್ದಾನೆ. ಪವನ್ ಕಲ್ಯಾಣ್, ಟೀಕಿಸುವುದಾದರೆ ನನ್ನನ್ನು ಟೀಕಿಸು ನನ್ನ ಪತ್ನಿಯನ್ನು, ನನ್ನ ಕುಟುಂಬದವರನ್ನು ಯಾಕೆ ಇದರ ಒಳಗೆ ಎಳೆಯುತ್ತೀಯ. ನನ್ನ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರೂ ಆಕೆ ನನ್ನ ಪತ್ನಿಯೇ, ಆಕೆಯನ್ನು ನಿನ್ನ ಅಭಿಮಾನಿಗಳು ಎಳೆದುಕೊಂಡು ಹೋಗಿ ರೇಪ್ ಮಾಡಿದರೂ ಆಕೆ ನನ್ನ ಪತ್ನಿಯೇ ನನಗೆ ಆಕೆ ಮೇಲೆ ಪ್ರೀತಿ ಇದೆ'' ಎಂದರು ಪೋಸಾನಿ. ಆ ನಂತರ ಪವನ್ ಪತ್ನಿ ವಿರುದ್ಧ ಹೀನ ಆರೋಪಗಳನ್ನು ಮಾಡಿದರು.

  ಪೋಸಾನಿ ಮೇಲೆ ಪವನ್ ಅಭಿಮಾನಿಗಳ ದಾಳಿ

  ಪೋಸಾನಿ ಮೇಲೆ ಪವನ್ ಅಭಿಮಾನಿಗಳ ದಾಳಿ

  ಪವನ್ ಕಲ್ಯಾಣ್ ಪತ್ನಿ ವಿರುದ್ಧ ಪೋಸಾನಿ ಮಾಡಿದ ಕೀಳು ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೋಸಾನಿ ವಿರುದ್ಧ ಪವನ್ ಕಲ್ಯಾಣ್ ಅಭಿಮಾನಿಗಳು ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ಮಂಗಳವಾರ ಪೋಸಾನಿ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೆ ಕೆಲವು ಪವನ್ ಕಲ್ಯಾಣ್ ಅಭಿಮಾನಿಗಳು ಪೋಸಾನಿ ವಿರುದ್ಧ ದಾಳಿ ಮಾಡಿ ಹಲ್ಲೆ ಸಹ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.

  English summary
  Actor Posani Krishna Murali vulgar comment about Pawan Kalyan's wife. He scolded Pawan Kalyan also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X