For Quick Alerts
  ALLOW NOTIFICATIONS  
  For Daily Alerts

  ವೆಬ್ ಸೀರಿಸ್ ಆಫರ್ ರಿಜೆಕ್ಟ್ ಮಾಡಿದ್ದೇಕೆ ನಟಿ ಅನುಷ್ಕಾ ಶೆಟ್ಟಿ?

  |

  ಸ್ಟಾರ್ ಕಲಾವಿದರು ಈಗ ವೆಬ್ ಸೀರಿಸ್ ಕಡೆ ಒಲವು ತೂರುತ್ತಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೆ ಸಾಕಷ್ಟು ಕಲಾವಿದರು ವೆಬ್ ಸೀರಿಸ್ ಕಡೆ ಮುಖ ಮಾಡಿದ್ದಾರೆ. ಇದೀಗ ದಕ್ಷಿಣ ಭಾರತೀಯ ಕಲಾವಿದರು ಡಿಜಿಟಲ್ ಫ್ಲಾಟ್ ಫಾಮ್ ಕಡೆ ಆಸ್ತಕಿ ಸೋರುತ್ತಿದ್ದಾರೆ. ಈಗಾಗಲೆ ಸ್ಟಾರ್ ನಟಿಯರಾದ ಸಮಂತಾ, ಕಾಜಲ್, ರಾಕುಲ್ ಪ್ರೀತಿ ಸಿಂಗ್, ಶ್ರುತಿ ಹಾಸನ್ ಸೇರಿದ್ದಂತೆ ಬಹುತೇಕ ಕಲಾವಿದರು ವೆಬ್ ಸೀರಿಸ್ ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

  ನಟಿ ಅನುಷ್ಕಾ ಶೆಟ್ಟಿ ಸಹ ವೆಬ್ ಸೀರಿಸ್ ಕಡೆ ಮುಖ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಬಾಲಿವುಡ್ ನಟಿಗೆ ದೊಡ್ಡ ವೆಬ್ ಸೀರಿಸ್ ನಲ್ಲಿ ನಟಿಸುವ ಆಫರ್ ಬಂದಿದೆಯಂತೆ. ಅಲ್ಲದೆ ಈ ವೆಬ್ ಸೀರಿಸ್ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ರಿಲೀಸ್ ಆಗುತ್ತಿದೆಯಂತೆ. ಈ ವೆಬ್ ಸೀರಿಸ್ ನಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸಬೇಕು ಎನ್ನುವುದು ಆಯೋಜಕರ ನಿರ್ಧಾರ.

  ಖ್ಯಾತ ನಟ ವಿಜಯ್ ಸೇತುಪತಿಗೆ ನಾಯಕಿಯಾದ ಕನ್ನಡದ ಸುಂದರಿಖ್ಯಾತ ನಟ ವಿಜಯ್ ಸೇತುಪತಿಗೆ ನಾಯಕಿಯಾದ ಕನ್ನಡದ ಸುಂದರಿ

  ಆದರೆ ಅನುಷ್ಕಾ ಈ ವೆಬ್ ಸೀರಿಸ್ ಆಫರ್ ಅನ್ನು ತಿರಸ್ಕರಿಸಿದ್ದಾರಂತೆ. ಅನುಷ್ಕಾ ವೆಬ್ ಸೀರಿಸ್ ರಿಜೆಕ್ಟ್ ಮಾಡಲು ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ. ಆದರೆ ವೆಬ್ ಸೀರಿಸ್ ನಲ್ಲಿ ನಟಿಸಲ್ಲ ಎಂದು ಹೇಳಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

  ಅಂದ್ಹಾಗೆ ಅನುಷ್ಕಾ ಸದ್ಯ ನಿಶಬ್ದಂ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ನಟ ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಡೆಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ಚಿತ್ರಮಂದಿರದಲ್ಲಿಯೇ ರಿಲೀಸ್ ಮಾಡುವುದಾಗಿ ಸಿನಿಮಾತಂಡ ಸ್ಪಷ್ಟಪಡಿಸಿದೆ.

  ಈ ಸಿನಿಮಾ ಬಳಿಕ ಅನುಷ್ಕಾ ಅಧಿಕೃತವಾಗಿ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ನಟ ವಿಜಯ್ ಸೇತುಪತಿಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇತ್ತೀಚಿಗೆ ಅನುಷ್ಕಾ ಮದುವೆ ವದಂತಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಮದುವೆಯಾಗುತ್ತಿರುವ ಸುದ್ದಿಯನ್ನು ಅನುಷ್ಕಾ ತಳ್ಳಿಹಾಕಿದ್ದಾರೆ. ಸದ್ಯ ಚಿತ್ರರಂಗದಲ್ಲಿ 15 ವರ್ಷ ಪೂರೈಸಿರುವ ಅನುಷ್ಕಾ ಮುಂದಿನ ಸಿನಿಮಾಗಳ ಮೇಲೆ ಕುತೂಹಲ ಹೆಚ್ಚಾಗಿದೆ.

  English summary
  Tollywood famous Actress Anushka Shetty reject an offer of web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X