For Quick Alerts
  ALLOW NOTIFICATIONS  
  For Daily Alerts

  ಅಂದ ಹೆಚ್ಚಿಸಿಕೊಳ್ಳಲು ಪ್ಲಾಸಿಕ್ ಸರ್ಜರಿಗೆ ಮುಂದಾದ್ರಾ ಕೃತಿ ಶೆಟ್ಟಿ?

  |

  'ಉಪ್ಪೆನ' ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದ ಕೃತಿ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕುಡ್ಲ ಚೆಲುವೆ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗುತ್ತಿದ್ದಾರೆ ಅನ್ನುವ ಗುಸು ಗುಸು ಶುರುವಾಗಿದೆ.

  ನಟ- ನಟಿಯರು ಅಂದವಾಗಿ ಕಾಣಲು ಮಾಡುವ ಸರ್ಕಸ್ ಒಂದೆರಡಲ್ಲ. ಕೆಲವರು ದೇಹದ ವಿವಿಧ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮಿರಿ ಮಿರಿ ಮಿಂಚುತ್ತಾರೆ. ಬೇಬಮ್ಮ ಅಂತಲೇ ತೆಲುಗು ಪ್ರೇಕ್ಷಕರಿಗೆ ಮೋಡಿ ಮಾಡಿರುವ ಕೃತಿ ಶೆಟ್ಟಿಗೆ ದೊಡ್ಡ ಅಭಿಮಾನಿ ಬಳಗವಿದೆ. ಮಂಗಳೂರು ಮೂಲದ ಕೃತಿ ಶೆಟ್ಟಿ ತಂದೆ ತಾಯಿ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ. ಕೃತಿ ಅಲ್ಲೇ ಹುಟ್ಟಿ ಬೆಳೆದಾಕೆ. ಮಾಡೆಲಿಂಗ್, ಜಾಹೀರಾತುಗಳಲ್ಲಿ ನಟಿಸೋಕೆ ಶುರು ಮಾಡಿದ ಕೃತಿ ನಿಧಾನವಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

  ರಶ್ಮಿಕಾ ರೀತಿ ಬೆಳೆಯುದಿಲ್ಲವಂತೆ ಕೃತಿ ಶೆಟ್ಟಿ: ಹೀಗಂತಿರೋದ್ಯಾಕೆ?ರಶ್ಮಿಕಾ ರೀತಿ ಬೆಳೆಯುದಿಲ್ಲವಂತೆ ಕೃತಿ ಶೆಟ್ಟಿ: ಹೀಗಂತಿರೋದ್ಯಾಕೆ?

  'ಉಪ್ಪೆನ' ನಂತರ 'ಶ್ಯಾಮ್ ಸಿಂಗ ರಾಯ್' ಹಾಗೂ 'ಬಂಗಾರ್‌ರಾಜು' ಸಿನಿಮಾಗಳಲ್ಲಿ ಕೃತಿ ಮಿಂಚಿದ್ದರು. ಆದರೆ ಇತ್ತೀಚೆಗೆ ರಿಲೀಸ್ ಆದ 'ವಾರಿಯರ್' ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಅದರ ಬೆನ್ನಲ್ಲೇ ಕೃತಿ ಸೌಂದರ್ಯದ ಬಗ್ಗೆ ಕಾಮೆಂಟ್‌ಗಳು ಶುರುವಾಗಿದೆಯಂತೆ. ತನ್ನ ಅಂದದ ಬಗ್ಗೆ ಈ ರೀತಿ ಮಾತನಾಡಲು ತುಟಿ ದಪ್ಪನಾಗಿರುವುದೇ ಕಾರಣ ಎಂದು ಆಕೆಗೆ ಅನ್ನಿಸಿದೆಯಂತೆ. ಈ ಕಾಮೆಂಟ್‌ಗಳನ್ನು ಕೇಳಿ ಬೇಸರಗೊಂಡಿರುವ ಕುಡ್ಲ ಚೆಲುವೆ ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳಲು ಸರ್ಜರಿಗೆ ಮುಂದಾಗಿದ್ದಾರೆ ಅನ್ನಲಾಗುತ್ತಿದೆ.

   ಕೃತಿ ಶೆಟ್ಟಿ ತುಟಿಗೆ ಸರ್ಜರಿ

  ಕೃತಿ ಶೆಟ್ಟಿ ತುಟಿಗೆ ಸರ್ಜರಿ

  ಪ್ಲಾಸ್ಟಿಕ್ ಸರ್ಜರಿ ಮೂಲಕ ತನ್ನ ತುಟಿಯ ಅಂದ ಹೆಚ್ಚಿಸಿಕೊಳ್ಳಲು ಕೃತಿ ಶೆಟ್ಟಿ ಮುಂದಾಗಿದ್ದಾರೆ ಅನ್ನುವ ಮಾತುಗಳು ಕೇಳಿ ಬರ್ತಿದೆ. ಈಗಾಗಲೇ ಖ್ಯಾತ ವೈದ್ಯರೊಬ್ಬರನ್ನು ಕನ್ಸಲ್ಟ್ ಮಾಡಿ ಸರ್ಜರಿ ಡೇಟ್ ಸಹ ಫಿಕ್ಸ್ ಮಾಡಿಕೊಂಡಿದ್ದಾರಂತೆ. ಪಕ್ಕದ ಮನೆ ಹುಡುಗಿಯಂತೆ ಕಾಣುವ ಚೆಲುವೆ ಕೊಂಚ ಮಾಡರ್ನ್ ಲುಕ್‌ನಲ್ಲಿ ಮಿಂಚಲು ಪ್ಲಾಸ್ಟಿಕ್ ಸರ್ಜರಿಗೆ ಮುಂದಾಗಿರಬಹುದು ಅನ್ನುವುದು ಕೆಲವರ ವಾದ.

   4 ಸಿನಿಮಾಗಳಲ್ಲಿ ಕೃತಿ ಬ್ಯುಸಿ

  4 ಸಿನಿಮಾಗಳಲ್ಲಿ ಕೃತಿ ಬ್ಯುಸಿ

  ತೆಲುಗಿನ 'ಮಾ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ', 'ಮಾಚೆರ್ಲಾ ನಿಯೋಜಿಕವರ್ಗಂ' ಜೊತೆಗೆ ತಮಿಳಿನ ಮತ್ತೆರಡು ಸಿನಿಮಾಗಳಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ. ಕೈ ತುಂಬಾ ಸಿನಿಮಾಗಳಿದ್ದರೂ ಈಕೆ ಯಾಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಸಾಹಸ ಮಾಡ್ತಿದ್ದಾರೆ ಅನ್ನುವುದು ಕೆಲವರ ಪ್ರಶ್ನೆ. ಕೆಲ ಅಭಿಮಾನಿಗಳು ನೀವು ಚೆನ್ನಾಗಿಯೇ ಇದ್ದೀರಾ ಯಾವ ಸರ್ಜರಿನೂ ಬೇಡ ಅನ್ನುತ್ತಿದ್ದಾರೆ.

   ತೆಲುಗು ಪ್ರೇಕ್ಷಕರ ನೆಚ್ಚಿನ ಬೇಬಮ್ಮ

  ತೆಲುಗು ಪ್ರೇಕ್ಷಕರ ನೆಚ್ಚಿನ ಬೇಬಮ್ಮ

  ಹೃತಿಕ್ ರೋಷನ್ ನಟನೆಯ 'ಸೂಪರ್ -30' ಚಿತ್ರದ ವಿದ್ಯಾರ್ಥಿಗಳ ಗುಂಪಿನಲ್ಲಿ ಕೃತಿ ಶೆಟ್ಟಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಬುಚ್ಚಿಬಾಬು ನಿರ್ದೇಶನದ 'ಉಪ್ಪೆನ' ನಾಯಕಿಯಾಗಿ ಮೊದಲ ಪ್ರಯತ್ನ. ಚಿತ್ರದಲ್ಲಿ ಪಂಜಾ ವೈಷ್ಣವ್ ತೇಜ್ ಜೋಡಿ ಬೇಬಮ್ಮ ಆಗಿ ನಟಿಸಿ ಮೋಡಿ ಮಾಡಿದರು. ತೆಲುಗು ಪ್ರೇಕ್ಷಕರಿಗೆ ಬೇಬಮ್ಮ ಅಂತಲೇ ಈಕೆ ಅಚ್ಚುಮೆಚ್ಚು.

   ಕನ್ನಡ ಸಿನಿಮಾ ಯಾವಾಗ?

  ಕನ್ನಡ ಸಿನಿಮಾ ಯಾವಾಗ?

  ಕುಡ್ಲ ಚೆಲುವೆ ಕೃತಿ ಶೆಟ್ಟಿ ಕನ್ನಡ ಚಿತ್ರದಲ್ಲಿ ನಟಿಸೋದು ಯಾವಾಗ ಅಂತ ಅಭಿಮಾನಿಗಳು ಕೇಳುತ್ತಿದ್ದಾರೆ. ತೆಲುಗಿನ ಸ್ಟಾರ್‌ಗಳ ಸಿನಿಮಾಗಳಲ್ಲಿ ಚೆಲುವೆಗೆ ಅವಕಾಶಗಳು ಸಿಗುತ್ತಿದೆ. 'ಉಪ್ಪೆನ' ಸಿನಿಮಾ ಸಕ್ಸಸ್ ಆದ ಮೇಲೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಶೀಘ್ರದಲ್ಲೇ ಕೃತಿ ಕನ್ನಡ ಚಿತ್ರದಲ್ಲಿ ನಟಿಸುವ ಸುದ್ದಿ ಬಂದರೂ ಬರಬಹುದು.

  English summary
  Telugu Actress Krithi Shetty Ready to lip Surgery. Know More.
  Friday, August 5, 2022, 9:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X