For Quick Alerts
  ALLOW NOTIFICATIONS  
  For Daily Alerts

  ಯಶ್, ನಂತರ ವಿಜಯ ದೇವರಕೊಂಡ: ಬಾಲಿವುಡ್‌ನಲ್ಲಿ ಸೌತ್ ಸ್ಟಾರ್‌ಗಳ ಹವಾ ಬಲು ಜೋರು!

  |

  ಪ್ಯಾನ್ ಇಂಡಿಯಾ ಸಿನಿಮಾಗಳು ಎನ್ನುವ ಕಾನ್ಸೆಪ್ಟ್ ಇತ್ತೀಚೇಗೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅದರಲ್ಲೂ ಕೆಜಿಎಫ್ 2 ಸಿನಿಮಾ ಗೆದ್ದು ಬೀಗಿದ ಪರಿಗೆ ಎಲ್ಲರೂ ಈ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಲು ತುಡಿಯುತ್ತಿದ್ದಾರೆ. ಇನ್ನು ಉತ್ತರ-ದಕ್ಷಿಣದ ಬೇಲಿಯೂ ಕೂಡ ಮುರಿದು ಬಿದ್ದಿದೆ.

  ಎಷ್ಟೋ ವರ್ಷಗಳ ಕಾಲ, ಬಾಲಿವುಡ್ ಬೇರೆ, ಸೌತ್ ಸಿನಿಮಾರಂಗ ಬೇರೆ ಎನ್ನುವ ಪದ್ದತಿ ಇತ್ತು. ಸೌತ್ ಸಿನಿಮಾರಂಗವನ್ನು ಬಾಲಿವುಡ್ ಮೊದಲೆಲ್ಲಾ ಬೇರೆ ರೀತಿಯಲ್ಲಿಯೇ ಕಾಣುತ್ತಿತ್ತು. ಅಲ್ಲದೇ ಭಾರತೀಯ ಸಿನಿಮಾ ಅಂದರೆ ಅದು ಬಾಲಿವುಡ್ ಮಾತ್ರವೆ ಎನ್ನುವಂತಿತ್ತು.

  ವಿಜಯ್ ದೇವರಕೊಂಡ ಬಂದೋಗಿದ್ದ 'ಕಾಫಿ ವಿಥ್ ಕರಣ್‌' ಸಂಚಿಕೆಗೆ ಅತೀ ಹೆಚ್ಚು ವೀವ್ಸ್!ವಿಜಯ್ ದೇವರಕೊಂಡ ಬಂದೋಗಿದ್ದ 'ಕಾಫಿ ವಿಥ್ ಕರಣ್‌' ಸಂಚಿಕೆಗೆ ಅತೀ ಹೆಚ್ಚು ವೀವ್ಸ್!

  ಈಗ ಸೌತ್ ಸಿನಿಮಾ ಸ್ಟಾರ್‌ಗಳು ಬಾಲಿವುಡ್‌ನಲ್ಲಿ ಘರ್ಜಿಸೋಕೆ ಶುರುಮಾಡಿದ್ದಾರೆ. ಇದರಲ್ಲಿ ಮೊದಲಿಗರು ಯಶ್ ಎನ್ನಬಹುದು. ಬಾಲಿವುಡ್ ಬಾಕ್ಸಾಫೀಸ್ ಮಾತ್ರವಲ್ಲದೇ, ನಾರ್ತ್‌ನಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಮತ್ತೊಬ್ಬ ಸ್ಟಾರ್ ನಟನ ಸರದಿ.

  ಬಾಲಿವುಡ್‌ನಲ್ಲಿ ವಿಜಯ್ ದೇವರಕೊಂಡ!

  ನಟ ವಿಜಯ್ ದೇವರಕೊಂಡ ಮುಂದಿನ ಸೂಪರ್ ಸ್ಟಾರ್ ಎನ್ನುವ ಸೂಚನೆ ಸಿಕ್ಕಿದೆ. ಬಾಲಿವುಡ್‌ನಲ್ಲಿ ಸೌತ್ ನಟ ವಿಜಯ್ ದೇವರಕೊಂಡ ಬಾವುಟ ನೆಡುವುದು ಪಕ್ಕಾ ಎನ್ನುವಂತಾಗಿದೆ. ಸದ್ಯ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ, ಪ್ಯಾನ್ ಇಂಡಿಯಾ ಸದ್ದು ಮಾಡಲು ಸಜ್ಜಾಗಿದ್ದಾರೆ. ನಟ ಯಶ್ ನಂತರ ದೊಡ್ಡ ಮಟ್ಟದ ಕ್ರೇಜ್‌ನೊಂದಿಗೆ ನಟ ವಿಜಯ್‌ ದೇವರಕೊಂಡ ಬಾಲಿವುಡ್‌ಗೆ ಎಂಟ್ರಿಕೊಡ್ತಿದ್ದಾರೆ. ಇನ್ನು ಮುಂಬೈನಲ್ಲಿ ಎಷ್ಟರ ಮಟ್ಟಿಗೆ ವಿಜಯ್ ದೇವರಕೊಂಡಗೆ ಫ್ಯಾನ್ ಕ್ರೇಜ್ ಎನ್ನುವುದು ಕೂಡ ಬಯಲಾಗಿದೆ.

  ಜನ ಸಾಗರ ಕಂಡು ವಿಜಯ್ ಬೆರಗು!

  ನಟ ವಿಜಯ್ ದೇವರಕೊಂಡ ಸದ್ಯ 'ಲೈಗರ್' ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ಮುಂದಿನ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹಲವು ಕಡೆಗಳಲ್ಲಿ ಸಿನಿಮಾವನ್ನು ಪ್ರಚಾರ ಮಾಡುತ್ತಿದೆ ಚಿತ್ರತಂಡ. ಇದೇ ನಿಟ್ಟಿನಲ್ಲಿ ಚಿತ್ರತಂಡ ಮುಂಬೈನಲ್ಲಿ ಕೂಡ ಚಿತ್ರದ ಪ್ರಚಾರಕ್ಕೆ ಇಳಿದಿದೆ. ಮುಂಬೈನ ಮಾಲ್‌ನಲ್ಲಿ ಸಿನಿಮಾವನ್ನು ಪ್ರಚಾರ ಮಾಡಲು ವಿಜಯ್ ದೇವರಕೊಂಡ ಮತ್ತು ಚಿತ್ರತಂಡ ಹೋಗಿತ್ತು. ಆದರೆ ಮಾಲ್‌ನಲ್ಲಿ ವಿಜಯ್ ದೇವರಕೊಂಡ ನೋಡಲು ದೊಡ್ಡ ಜನಸಾಗರವೇ ಹರಿದು ಬಂದಿತ್ತು. ಇದು ಚಿತ್ರತಂಡ ಕೂಡ ನಿರೀಕ್ಷೆ ಮಾಡಿರಲಿಲ್ಲ. ಜನಸಾಗರವನ್ನು ಕಂಡು ಬೆರಗಾಗಿ ಖುಷಿಯಲ್ಲಿ ತೇಲಾಡಿದರು ನಟ ವಿಜಯ್ ದೇವರಕೊಂಡ. ಇಷ್ಟೊಂದು ಜನ ಎಲ್ಲಿಂದ ಬಂದಿರಿ ಎಂದು ಅಚ್ಚರಿ ವ್ಯಕ್ತಪಡಿಸುತ್ತಲೇ ಮಾತನಾಡಿದರು.

  ಲೈಗರ್ ಮೂಲಕ ಬಾಲಿವುಡ್ ಎಂಟ್ರಿ!

  ಲೈಗರ್ ಸಿನಿಮಾದ ಮೂಲಕ ವಿಜಯ್ ದೇವರಕೊಂಡ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಲೈಗರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕನಟನಾಗಿ ಅಭಿನಯಿಸುತ್ತಿದ್ದು, ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. ಹಿಂದಿ ಅವತರಣಿಕೆಯಲ್ಲಿ ಸಿನಿಮಾ ಬರಲಿದೆ. ಈಗಾಗಲೆ ಚಿತ್ರದ ಟೀಸರ್, ಟ್ರೈಲರ್, ಪೋಸ್ಟರ್ ಗಳು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಇನ್ನು ವಿಜಯ್ ದೇವರಕೊಂಡ ಬಗ್ಗೆ ಇರುವ ಕ್ರೇಜ್ ಬಾಲಿವುಡ್‌ಗೂ ಶಾಕ್ ಕೊಟ್ಟಿದೆ. ಅದು ಎಷ್ಟರಮಟ್ಟಿಗೆ ಎಂದರೆ ಕ್ರೌಡ್ ಕಂಟ್ರೋಲ್ ಮಾಡಲು ಸಾಧ್ಯವಾಗದೇ ಸೇಫ್ಟಿ ಕಾರಣಕ್ಕಾಗಿ ವಿಜಯ್ ದೇವರಕೊಂಡ ಶೀಘ್ರವಾಗಿ ಕೆಲವೇ ಮಾತುಗಳನ್ನಾಡಿ ಅಲ್ಲಿಂದ ಹೊರಡಬೇಕಾಯಿತು.

  ಬಾಲಿವುಡ್ ಸ್ಟಾರ್ ಪಟ್ಟ!

  ಇನ್ನು ವಿಜಯ್ ದೇವರಕೊಂಡಗೆ ಸೃಷ್ಟಿಯಾಗಿರುವ ಈ ದೊಡ್ಡ ಅಭಿಮಾನಿ ಬಳಗ ಬಾಲಿವುಡ್‌ನಲ್ಲಿ ವಿಜಯ್ ದೇವರಕೊಂಡ, ಮಿಂಚುವ ಸುಳಿವು ಕೊಟ್ಟಿದೆ. ಮೊದಲ ಸಿನಿಮಾದ ಮೂಲಕವೇ ವಿಜಯ್ ದೇವರಕೊಂಡ ಬಾಲಿವುಡ್‌ನಲ್ಲಿ ಜಾದೂ ಮಾಡುವ ಎಲ್ಲಾ ಸೂಚನೆಗಳು ಸಿಕ್ಕಿವೆ. ಸಿನಿಮಾ ರಿಲೀಸ್‌ಗೂ ಮುನ್ನ ವಿಜಯ್ ದೇವರಕೊಂಡಗಾಗಿ ನೆರೆದಿದ್ದ ಅಭಿಮಾನಿ ಬಳಗ ಸಿನಿಮಾದ ಬಗ್ಗೆ ಇರುವ ಕ್ರೇಜ್ ಎಂಥದ್ದು ಎಂದು ಹೇಳುತ್ತಿದೆ. ಹಾಗಾಗಿ ನಟ ರಾಕಿಂಗ್ ಸ್ಟಾರ್ ಯಶ್ ಬಳಿಕ ಬಾಲಿವುಡ್‌ನಲ್ಲಿ ಸ್ಟಾರ್ ಆಗಿ ಮಿಂಚಲಿರುವ ಮತ್ತೊಬ್ಬ ನಟ ಎಂದರೆ ಅದು ವಿಜಯ ದೇವರಕೊಂಡ ಎನ್ನಲಾಗುತ್ತಿದೆ.

  Recommended Video

  ಸಿನಿಮಾ ನನ್ನ Identity ನಾನು ಒಳಗೆ ಹೋಗ್ತಾ ಇಲ್ಲ | Kiccha Sudeep | BigBoss OTT Kannada | Filmibeat Kannada
  English summary
  After Yash Vijay Devarakonda Is The Next Superstar In Bollywood From South, Know More,
  Tuesday, August 2, 2022, 16:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X