twitter
    For Quick Alerts
    ALLOW NOTIFICATIONS  
    For Daily Alerts

    ಗೆದ್ದೇ ಬಿಡ್ತು ಬಾಲಕೃಷ್ಣ 'ಅಖಂಡ' ಮೊದಲ ದಿನವೇ ಬಾಕ್ಸಾಫೀಸ್ ಧೂಳಿಪಟ: ಗಳಿಸಿದ್ದು ಏಷ್ಟು?

    |

    ತೆಲುಗು ಚಿತ್ರರಂಗದಲ್ಲಿ ನಂದಮೂರಿ ಬಾಲಕೃಷ್ಣ ಸಿನಿಮಾ 'ಅಖಂಡ' ಸದ್ದು ಮಾಡುತ್ತಿದೆ. ಬಿಡುಗಡೆಯಾದ ದಿನದಿಂದಲೂ ಸಿನಿಮಾ ಬಗ್ಗೆ ಉತ್ತಮ ಪ್ರಕ್ರಿಯೆ ಕೇಳಿಬರುತ್ತಿದೆ. ನವೆಂಬರ್ 02ರಂದು ತೆರೆಕಂಡಿದ್ದ ಬಾಲಣ್ಣನ ಮಾಸ್ ಎಂಟರ್‌ಟೈನರ್‌ಗೆ ಮಾಸ್ ಪ್ರೇಕ್ಷಕರು ಮಸ್ತ್ ರೆಸ್ಪಾನ್ಸ್ ಕೊಟ್ಟಿದ್ದಾರೆ. 'ಅಖಂಡ' ಚಿತ್ರದ ಕಥೆ, ನಟನೆ ಎಲ್ಲವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅದಕ್ಕೆ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಅಖಂಡ ಧೂಳೆಬ್ಬಿಸಿದೆ.

    'ಅಖಂಡ' ಸಿನಿಮಾ ಬಿಡುಗಡೆಯಾದಲ್ಲಿಂದಲೂ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಸಿನಿಮಾವನ್ನು ಟ್ರೆಂಡಿಂಗ್‌ನಲ್ಲಿ ಇಟ್ಟಿದ್ದರು. ಅಖಂಡ ಬ್ಲಾಕ್‌ಬಸ್ಟರ್ ಆಗುತ್ತೆ ಅನ್ನುವ ನಂಬಿಕೆಯಲ್ಲಿ ಕುಣಿದು ಕುಪ್ಪಳಿಸಿದ್ದರು. ಅವರ ನಿರೀಕ್ಷೆಯಂತೆಯೇ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರುವ ಎಲ್ಲಾ ಲಕ್ಷಣಗಳೂ ಇವೆ. ಈ ವಾರ ತೆರೆಕಂಡ ಮೋಹನ್ ಲಾಲ್ ಮರಕ್ಕರ್ ಹಾಗೂ ಸಿಂಹಂ ಅಂತಹ ಬಿಗ್ ಬಜೆಟ್ ಸಿನಿಮಾಗಳನ್ನೂ ಅಂಖಡ ಹಿಂದಿಕ್ಕಿದೆ. ಮೊದಲ ದಿನದ 'ಅಖಂಡ' ಗಳಿಕೆ ಟಾಲಿವುಡ್‌ಗೆ ಹೊಸ ಹುರುಪು ನೀಡಿದೆ.

    'ಅಖಂಡ' ಫಸ್ಟ್ ಡೇ ಕಲೆಕ್ಷನ್ ಎಷ್ಟು?

    'ಅಖಂಡ' ಫಸ್ಟ್ ಡೇ ಕಲೆಕ್ಷನ್ ಎಷ್ಟು?

    ಬಾಲಣ್ಣನ 'ಅಖಂಡ' ಸಿನಿಮಾ ಮೊದಲ ದಿನವೇ ತೆಲುಗು ಬಾಕ್ಸಾಫೀಸ್‌ ಅನ್ನು ಉಡೀಸ್ ಮಾಡಿದೆ. ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಮುಗಿಬಿದ್ದು 'ಅಖಂಡ' ಸಿನಿಮಾ ನೋಡುತ್ತಿದ್ದಾರೆ. ಬಾಕ್ಸಾಫೀಸ್ ಲೆಕ್ಕಾಚಾರದ ಪ್ರಕಾರ, 'ಅಖಂಡ' ಮೊದಲ ದಿನದ ಗಳಿಕೆ ಸುಮಾರು 15.39 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಬಾಲಣ್ಣನ ವೃತ್ತಿ ಬದುಕಿನಲ್ಲೇ ಮೊದಲ ದಿನ ಅತೀ ಹೆಚ್ಚು ಗಳಿಸಿದ ಸಿನಿಮಾವೆಂದು ಅಂದಾಜಿಸಲಾಗಿದೆ. ನಿಜಾಂ- 4.39 ಕೋಟಿ, ಸೀಡೆಡ್-4.02 ಕೋಟಿ, ಈಸ್ಟ್ ಆಂಧ್ರ- 01.05 ಕೋಟಿ, ವೆಸ್ಟ್ ಆಂಧ್ರ, 96 ಲಕ್ಷ, ಗುಂಟೂರು-1.87 ಕೋಟಿ ಅತಿ ಹೆಚ್ಚು ಗಳಿಕೆ ಕಂಡಿದೆ. ಒಟ್ಟು ಆಂಧ್ರ ಹಾಗೂ ತೆಲಂಗಾಣದಲ್ಲಿಯೇ 15.39 ಕೋಟಿ ಗಳಿಸಿರುವ ಬಗ್ಗೆ ಲೆಕ್ಕ ನೀಡುತ್ತಿದೆ ಟಾಲಿವುಡ್.

    ಅಮೆರಿಕದಲ್ಲೂ 'ಅಖಂಡ' ಬಾಕ್ಸಾಫೀಸ್ ಚಿಂದಿ

    ಅಮೆರಿಕದಲ್ಲೂ 'ಅಖಂಡ' ಬಾಕ್ಸಾಫೀಸ್ ಚಿಂದಿ

    ಅಮೆರಿಕದಲ್ಲೂ ಬಾಕ್ಸಾಫೀಸ್‌ನಲ್ಲೂ ಬಾಲಣ್ಣನ 'ಅಖಂಡ' ಭರ್ಜರಿ ಕಲೆಕ್ಷನ್ ಮಾಡಿದೆ. ಬಾಲಣ್ಣನ ಸಿನಿಮಾ ವಿದೇಶದಲ್ಲಿ ಈ ಮಟ್ಟಿಗೆ ಪ್ರತಿಕ್ರಿಯೆ ಸಿಕ್ಕಿದ್ದು ಇದೇ ಮೊದಲು. 2021ರಲ್ಲಿ ಅಮೆರಿಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ತೆಲುಗು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುಸ್‌ನಲ್ಲಿ 'ಅಖಂಡ' ಮೊದಲ ದಿನ ಗಳಿಸಿದ್ದು ಬರೋಬ್ಬರಿ 3.24 ಕೋಟಿ ಎನ್ನಲಾಗಿದೆ. ಇದರೊಂದಿಗೆ ವಿಶ್ವದಾದ್ಯಂತ 29 ಕೋಟಿ ಮೊದಲ ದಿನವೇ ಗಳಿಸಿದೆ ಎಂದು ವರದಿಯಾಗಿದೆ. ಮುಂಬರು ದಿನಗಳಲ್ಲಿ ಬಾಲಣ್ಣ 'ಅಖಂಡ' ಬಾಕ್ಸಾಫೀಸ್ ಅಖಾಡದಲ್ಲಿ ಮತ್ತಷ್ಟು ಲೂಟಿ ಮಾಡುತ್ತೆ ಎಂದು ಭವಿಷ್ಯ ನುಡಿಲಾಗಿದೆ.

    ಬೋಯಪಟ್ಟಿ ಶ್ರೀನು, ತಮನ್ ಚಮತ್ಕಾರ

    ಬೋಯಪಟ್ಟಿ ಶ್ರೀನು, ತಮನ್ ಚಮತ್ಕಾರ

    ಬಾಲಕೃಷ್ಣ ಹಾಗೂ ನಿರ್ದೇಶಕ ಬೊಯಾಪಟಿ ಶ್ರೀನು ಇಬ್ಬರ ಸಿನಿಮಾಗಳೂ ಸೋತಿದ್ದವು. ಇಬ್ಬರಿಗೂ ಸೂಪರ್‌ ಸಕ್ಸಸ್ ಹುಡುಕಾಟದಲ್ಲಿ ಇದ್ದರು. ಬೊಯಾಪಾಟಿ ಮಾಸ್ ಆಕ್ಷನ್ ಸಿನಿಮಾ ಹಾಗೂ ಬಾಲಣ್ಣ ಡೈಲಾಗ್ ಡಿಲೇವರಿ ಹಾಗೂ ಗೆಟಪ್ ಮೋಡಿ ಮಾಡಿದೆ. ಇದರೊಂದಿಗೆ ಸಂಗೀತ ನಿರ್ದೇಶಕ ಎಸ್. ತಮನ್ ಹಿನ್ನೆಲೆ ಸಂಗೀತ 'ಅಖಂಡ' ಸಿನಿಮಾ ಗೆಲುವಿನ ರೂವಾರಿಗಳಾಗಿದ್ದಾರೆ. ಪ್ರಾಗ್ಯ ಜೈಸ್ವಾಲ್, ಜಗಪತಿ ಬಾಬು, ಶ್ರೀಕಾಂತ್ ಸಿನಿಮಾ ಪಿಲ್ಲರ್‌ಗಳಾಗಿದ್ದಾರೆ.

    ಬಾಲಣ್ಣನ 'ಅಖಂಡ' OTT ಸೇಲ್

    ಬಾಲಣ್ಣನ 'ಅಖಂಡ' OTT ಸೇಲ್

    ಥಿಯೇಟರ್‌ನಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದ್ದರೂ 'ಅಖಂಡ' ಸಿನಿಮಾ ಈಗಾಗಲೇ OTTಗೆ ಸೇಲ್ ಮಾಡಲಾಗಿದೆ. ಡಿಸ್ನಿ- ಹಾಟ್‌ಸ್ಟಾರ್ ಬಾಲಕೃಷ್ಣ 'ಅಖಂಡ' ಸಿನಿಮಾವನ್ನು ಖರೀದಿ ಮಾಡಿದೆ. ತೆಲುಗಿನಲ್ಲಿ ಗಟ್ಟಿಯಾಗಿ ನೆಲೆಯೂರಲು ಯತ್ನಿಸುತ್ತಿರುವ ಹಾಟ್‌ಸ್ಟಾರ್‌ ಹೆಣಗಾಡುತ್ತಿತ್ತು. ಈಗ ಬಾಲಕೃಷ್ಣ 'ಅಖಂಡ' ಡಿಸ್ನಿ ಹಾಟ್‌ಸ್ಟಾರ್‌ಗೆ ಲಾಭ ತಂದುಕೊಡಲಿದೆ ಎಂದು ಅಂದಾಜಿಸಲಾಗಿದೆ. ಆದರೆ, 'ಅಖಂಡ' ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗುತ್ತೆ ಅನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

    English summary
    As per the box office talks, Nandamuri Balakrishna acted Akhanda, opened to a tremendous response. An impressive collection between Rs 15 crore from Andhra Pradesh and Telangana.
    Friday, December 3, 2021, 11:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X