For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಡೈ ಹಾರ್ಡ್ ಫ್ಯಾನ್ಸ್ ಗ್ರೂಪ್ ಸೇರಿದ ಬಾಲಿವುಡ್ ಖ್ಯಾತ ನಟಿ

  |

  ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. ವಿಶ್ವವೆ ಬೆರಗಾಗುವಂತ ಸೂಪರ್ ಹಿಟ್ ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಕೇವಲ ಟಾಲಿವುಡ್ ಮಾತ್ರವಲ್ಲದೆ ದೇಶದಾದ್ಯಂತ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.

  ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಶಾಂತ್ ನೀಲ್ | Prashanth Neel | Prabhas | Vijay

  40ವರ್ಷದ ಸ್ಟಾರ್ ನಟನಿಗೆ ಬಾಲಿವುಡ್ ನಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಪ್ರಭಾಸ್ ಜೊತೆ ಅಭಿನಯಿಸಲು ಬಾಲಿವುಡ್ ಸ್ಟಾರ್ ನಟಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ, ಇತ್ತೀಚಿಗೆ ಬಿ ಟೌನ್ ಖ್ಯಾತ ನಟಿ ಅಲಿಯಾ ಭಟ್, ಪ್ರಭಾಸ್ ಬಗ್ಗೆ ಹೇಳಿರುವ ಮಾತುಗಳು. ಮುಂದೆ ಓದಿ..

  TRPಯಲ್ಲಿ 'ಬಾಹುಬಲಿ'ಯನ್ನು ಹಿಂದಿಕ್ಕಿದ ಮಹೇಶ್ ಬಾಬು 'ಸರಿಲೇರು ನೀಕೆವ್ವರು'TRPಯಲ್ಲಿ 'ಬಾಹುಬಲಿ'ಯನ್ನು ಹಿಂದಿಕ್ಕಿದ ಮಹೇಶ್ ಬಾಬು 'ಸರಿಲೇರು ನೀಕೆವ್ವರು'

  'ನಾನು ಪ್ರಭಾಸ್ ಡೈ ಹಾರ್ಡ್ ಫ್ಯಾನ್..'

  'ನಾನು ಪ್ರಭಾಸ್ ಡೈ ಹಾರ್ಡ್ ಫ್ಯಾನ್..'

  ಈಗಾಗಲೆ ಹೇಳಿದ ಹಾಗೆ ಪ್ರಭಾಸ್ ಗೆ ದೇಶದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. ಪ್ರಭಾಸ್ ಡೈ ಹಾರ್ಟ್ ಫ್ಯಾನ್ಸ್ ಗ್ರೂಪ್ ಗೆ ನಟಿ ಅಲಿಯಾ ಭಟ್ ಸೇರ್ಪಡೆಯಾಗಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಗಲ್ಲಿಬಾಯ್ ನಟಿ "ನಾನು ಪ್ರಭಾಸ್ ಅವರ ದೊಡ್ಡ ಅಭಿಮಾನಿ" ಎಂದು ಹೇಳಿದ್ದಾರೆ.

  ಆಸ್ಪತ್ರೆ ಸೇರಲಿದ್ದಾರೆ ಪ್ರಭಾಸ್: ಅಸಲಿಗೆ ಆಗಿರುವುದೇನು?ಆಸ್ಪತ್ರೆ ಸೇರಲಿದ್ದಾರೆ ಪ್ರಭಾಸ್: ಅಸಲಿಗೆ ಆಗಿರುವುದೇನು?

  ಬಾಹುಬಲಿ ಸಿನಿಮಾ ನಂತರ ಪ್ರಭಾಸ್ ತುಂಬಾ ಇಷ್ಟ

  ಬಾಹುಬಲಿ ಸಿನಿಮಾ ನಂತರ ಪ್ರಭಾಸ್ ತುಂಬಾ ಇಷ್ಟ

  ಪ್ರಭಾಸ್ ಗೆ ದೊಡ್ಡ ಮಟ್ಟಕ್ಕೆ ಖ್ಯಾತಿ ತಂದುಕೊಟ್ಟ ಸಿನಿಮಾ ಬಾಹುಬಲಿ. ದೇಶ ವಿದೇಶದಲ್ಲಿಯೂ ಖ್ಯಾತಿಗಳಿಸಿರುವ ಪ್ರಭಾಸ್ ಗೆ ಅಲಿಯಾ ಕೂಡ ಫಿದಾ ಆಗಿದ್ದಾರೆ. "ನನಗೆ ಪ್ರಭಾಸ್ ತುಂಬ ಇಷ್ಟ. ಬಾಹುಬಲಿ ಪ್ರಾಂಚೈಸಿಯಲ್ಲಿ ಅವರ ಅಭಿನಯ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಅದ್ಭುತವಾಗಿದೆ. ಬಾಹುಬಲಿ ಸಿನಿಮಾ ನೋಡಿದ ನಂತರ ನಾನು ಪ್ರಭಾಸ್ ಅವರ ಡೈ ಹಾರ್ಡ್ ಫ್ಯಾನ್ ಆಗಿದ್ದೀನಿ" ಎಂದು ಅಲಿಯಾ, ಪ್ರಭಾಸ್ ಬಗ್ಗೆ ಹಾಡಿ ಹೊಗಳಿದ್ದಾರೆ.

  'ಸಾಹೋ' ಸಿನಿಮಾ ತಿರಸ್ಕರಿಸಿದ್ದ ಅಲಿಯಾ

  'ಸಾಹೋ' ಸಿನಿಮಾ ತಿರಸ್ಕರಿಸಿದ್ದ ಅಲಿಯಾ

  ಬಾಹುಬಲಿ ನಂತರ ಪ್ರಭಾಸ್ ಸಾಹೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಾಹೋ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಸಿನಿಮಾವಾಗಿತ್ತು. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸಲು ಶ್ರದ್ಧಾ ಕಪೂರ್ ಗೂ ಮೊದಲು ಅಲಿಯಾ ಭಟ್ ಗೆ ಆಫರ್ ಮಾಡಲಾಗಿತ್ತು. ಆದರೆ ಅಲಿಯಾ, ಪ್ರಭಾಸ್ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಬಾಲಿವುಡ್ ನಲ್ಲಿ ಸಖತ್ ಬ್ಯುಸಿ ಇರುವ ಅಲಿಯಾ ದಕ್ಷಿಣ ಭಾರತೀಯ ಸಿನಿಮಾದಲ್ಲಿ ಬಣ್ಣಹಚ್ಚುವ ನಿರ್ಧಾರ ಮಾಡಲಿಲ್ಲ. ಅಲ್ಲದೆ ಪರ್ಫಾಮೆನ್ಸ್ ಓರಿಯೆಂಟೆಡ್ ಸಿನಿಮಾ ಕಡೆ ಹೆಚ್ಚು ಗಮನ ಕೊಡುತ್ತಿರುವ ಕಾರಣ ಅಲಿಯಾ ಸಾಹೋ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು" ಎಂದು ಹೇಳಾಗುತ್ತಿದೆ.

  ದೀಪಿಕಾ ಅಲ್ಲ, ಆಲಿಯಾ ಅಲ್ಲ ಪ್ರಭಾಸ್ ಜೊತೆಯಾಗುವ ಬಾಲಿವುಡ್ ಬೆಡಗಿ ಯಾರು?ದೀಪಿಕಾ ಅಲ್ಲ, ಆಲಿಯಾ ಅಲ್ಲ ಪ್ರಭಾಸ್ ಜೊತೆಯಾಗುವ ಬಾಲಿವುಡ್ ಬೆಡಗಿ ಯಾರು?

  ಆರ್ ಆರ್ ಆರ್ ಸಿನಿಮಾದಲ್ಲಿ ಅಲಿಯಾ

  ಆರ್ ಆರ್ ಆರ್ ಸಿನಿಮಾದಲ್ಲಿ ಅಲಿಯಾ

  ಪ್ರಭಾಸ್ ಸಿನಿಮಾ ರೆಜೆಕ್ಟ್ ಮಾಡಿದ ಅಲಿಯಾ ಸದ್ಯ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಗೆ ನಾಯಕಿಯಾಗಿ ಬಣ್ಣಹಚ್ಚುವ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅಲಿಯಾ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೆ ಸ್ಪಷ್ಟನೆ ನೀಡಿಲ್ಲ. ಸದ್ಯಕ್ಕೆ ಚಿತ್ರೀಕರಣ ಬಂದ್ ಆಗಿರುವ ಕಾರಣ ಅಲಿಯಾ ಆರ್ ಆರ್ ಆರ್ ಸೆಟ್ ಗೆ ಯಾವಾಗ ಎಂಟ್ರಿ ಕೊಡ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Bollywood Actress Alia Bhatt joins Prabhas die hard fan group after watching Bahubali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X