For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್- ರಶ್ಮಿಕಾ ಇಲ್ಲದೇ 'ಪುಷ್ಪ'-2 ಮುಹೂರ್ತ: ಕಾರಣ ಏನು?

  |

  ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು, ಸೀಕ್ವೆಲ್‌ಗಾಗಿ ಎಲ್ಲರೂ ಕಾಯುತ್ತಿರುವುದು ಗೊತ್ತೇಯಿದೆ. ಕೊನೆಗೂ 'ಪುಷ್ಪ'-2 ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಸುದ್ದಿ ಅಭಿಮಾನಿಗಳಿಗೂ ಖುಷಿತಂದಿದ್ದು, ಸುಕುಮಾರ್ ಅಂಡ್ ಟೀಮ್ ಪೂಜೆ ಮಾಡಿರುವ ಫೋಟೊಗಳು ವೈರಲ್‌ ಆಗಿದೆ.

  ಹೈದರಾಬಾದ್‌ನಲ್ಲಿ ಪೂಜೆ ನೆರವೇರಿಸಿ 'ಪುಷ್ಪ'-2 ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ರೆಗ್ಯುಲರ್ ಶೂಟಿಂಗ್ ಶೀಘ್ರದಲ್ಲೇ ಶುರುವಾಗಲಿದ್ದು, ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ನೀಡಲಿದೆ. ಬಹುತೇಕ ಪ್ರೀಕ್ವೆಲ್‌ನಲ್ಲಿದ್ದ ಪಾತ್ರಗಳು ಸೀಕ್ವೆಲ್‌ನಲ್ಲೂ ಮುಂದುವರೆಯಲಿದೆ. ಸಿನಿಮಾ ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕ ಸುಕುಮಾರ್ ಹಾಗೂ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ರವಿ ಶಂಕರ್ ಹಾಜರಾಗಿದ್ದರು. ಆದರೆ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಚಿತ್ರದ ಕಲಾವಿದರು ಭಾಗಿ ಆಗಿರಲಿಲ್ಲ. ಇದು ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದ್ದರೂ ಒಟ್ನಲ್ಲಿ ಸಿನಿಮಾ ಶುರುವಾಯ್ತಲ್ಲ ಅನ್ನುವ ಸಂತಸದಲ್ಲಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ 'ಪುಷ್ಪ': ದಿ ರೂಲ್ ಚಿತ್ರವನ್ನು ಸುಕುಮಾರ್ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.

  ಅಲ್ಲು ಅರ್ಜುನ್, ಸುಕುಮಾರ್‌ ಇಬ್ಬರಿಗೆ ₹200 ಕೋಟಿ ಸಂಭಾವನೆ? ನಿರ್ಮಾಪಕರಿಗೆ ಚಿಪ್ಪೇ ಗತಿ!ಅಲ್ಲು ಅರ್ಜುನ್, ಸುಕುಮಾರ್‌ ಇಬ್ಬರಿಗೆ ₹200 ಕೋಟಿ ಸಂಭಾವನೆ? ನಿರ್ಮಾಪಕರಿಗೆ ಚಿಪ್ಪೇ ಗತಿ!

  ಕಳೆದ ವರ್ಷ ಬಿಡುಗಡೆಯಾಗಿದ್ದ 'ಪುಷ್ಪ' ದಿ ರೈಸ್ ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಚಿತ್ರದ ಸಾಂಗ್ಸ್, ಡೈಲಾಗ್ಸ್ ಎಲ್ಲವೂ ಸಿನಿರಸಿಕರ ಗಮನ ಸೆಳೆದಿತ್ತು. ರಕ್ತ ಚಂದನ ಸ್ಮಗ್ಲರ್ 'ಪುಷ್ಪ'ರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಅಬ್ಬರಿಸಿದ್ದರು. ರಗಡ್ ಲುಕ್ ಮ್ಯಾನರಿಸಂ, ಆಕ್ಷನ್, ಡೈಲಾಗ್ಸ್‌ನಿಂದ ಬನ್ನಿ ಧೂಳೆಬ್ಬಿಸಿದ್ದರು. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಲಂಗಾ ದಾವಣಿಯಲ್ಲಿ ಮೋಡಿ ಮಾಡಿದ್ದರು. ಕೇಕ್ ಮೇಲೆ ಚೆರಿ ಅನ್ನುವಂತೆ ಸಮಂತಾ ಐಟಂ ಸಾಂಗ್ ಚಿತ್ರದ ಖದರ್ ಹೆಚ್ಚಿಸಿತ್ತು.

   'ಪುಷ್ಪ'-2 ಮುಹೂರ್ತಕ್ಕೆ ಬನ್ನಿ ಯಾಕೆ ಬರಲಿಲ್ಲ?

  'ಪುಷ್ಪ'-2 ಮುಹೂರ್ತಕ್ಕೆ ಬನ್ನಿ ಯಾಕೆ ಬರಲಿಲ್ಲ?

  ದೇವರಿಗೆ ಕೈ ಮುಗಿದು ಚಿತ್ರೀಕರಣಕ್ಕೆ ಹೋಗಲು ಸುಕುಮಾರ್ ಸಿದ್ಧರಾಗಿದ್ದಾರೆ. ಆದರೆ ಅಲ್ಲು ಅರ್ಜುನ್ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗದೇ ಇರುವುದು ಕೆಲವರಿಗೆ ಅಚ್ಚರಿ ತಂದಿದೆ. ಸದ್ಯ ಅಲ್ಲು ಅರ್ಜುನ್ ನ್ಯೂಯಾರ್ಕ್ ಪ್ರವಾಸದಲ್ಲಿದ್ದಾರೆ. ಹಾಗಾಗಿ ಸ್ಟೈಲಿಶ್ ಸ್ಟಾರ್ ಪೂಜೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ಅಭಿಮಾನಿಗಳು ಇದನ್ನು ಕೇಳಲು ಸಿದ್ಧರಿಲ್ಲ. ಬನ್ನಿ ಫಾರಿನ್‌ಗೆ ಹೋಗುವುದಕ್ಕೂ ಮೊದಲು ಅಥವಾ ಬಂದ ಮೇಲೆ ಮಾಡಬಹುದಿತ್ತು ಅಂತಿದ್ದಾರೆ. ಫಸ್ಟ್ ಪಾರ್ಟ್‌ ಹಿಟ್‌ ಆದಮೇಲೆ ಅಲ್ಲು ಅರ್ಜುನ್ ಓವರ್‌ ಕಾನ್ಫಿಡೆಂಟ್‌ನಲ್ಲಿದ್ದಾರೆ ಎಂದು ಕೆಲವರು ಕುಟುಕುತ್ತಿದ್ದಾರೆ.

  'ಪುಷ್ಪ 2' ಸಿನಿಮಾದಿಂದ ಹೊರ ನಡೆದ ಫಹಾದ್ ಫಾಸಿಲ್: ವಿಜಯ್ ಸೇತುಪತಿ ಕಾರಣ?'ಪುಷ್ಪ 2' ಸಿನಿಮಾದಿಂದ ಹೊರ ನಡೆದ ಫಹಾದ್ ಫಾಸಿಲ್: ವಿಜಯ್ ಸೇತುಪತಿ ಕಾರಣ?

   'ಪುಷ್ಪ'-2 ಬಜೆಟ್ 200 ಕೋಟಿ ರೂ.

  'ಪುಷ್ಪ'-2 ಬಜೆಟ್ 200 ಕೋಟಿ ರೂ.

  ಸುಕುಮಾರ್ ವೆಬ್‌ ಸೀರಿಸ್‌ಗಾಗಿ ಮಾಡಿಕೊಂಡಿದ್ದ ಕಥೆಯನ್ನು ಸಿನಿಮಾ ರೂಪಕ್ಕೆ ಇಳಿಸಿದ್ದಾರೆ. ಎರಡು ಭಾಗಗಳಾಗಿ ರಕ್ತಚಂದನ ಚೋರ 'ಪುಷ್ಪ'ರಾಜ್ ಕಥೆಯನ್ನು ಹೇಳುತ್ತಿದ್ದಾರೆ. 80 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಫಸ್ಟ್‌ ಪಾರ್ಟ್‌ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿತ್ತು. ಹಿಂದಿ ಬೆಲ್ಟ್‌ನಲ್ಲೇ 100 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಆದರೆ ಸೆಕೆಂಡ್ ಪಾರ್ಟ್‌ ಅದಕ್ಕಿಂತ ದೊಡ್ಡಮಟ್ಟದಲ್ಲಿ ಮೂಡಿ ಬರ್ತಿದೆ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ.

   ಡಬಲ್ ಆಯ್ತು ಬನ್ನಿ- ಸುಕ್ಕು ಸಂಭಾವನೆ

  ಡಬಲ್ ಆಯ್ತು ಬನ್ನಿ- ಸುಕ್ಕು ಸಂಭಾವನೆ

  'ಪುಷ್ಪ'-2 ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಸಿನಿಮಾ ಬಜೆಟ್, ತಂತ್ರಜ್ಞರು ಹಾಗೂ ಕಲಾವಿದರ ಸಂಭಾವನೆ ಕೂಡ ಹೆಚ್ಚಾಗಿದೆ. ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮೊದಲ ಭಾಗಕ್ಕಿಂತ ಬಹಳ ಹೆಚ್ಚು ಸಂಭಾವನೆಯನ್ನು ಎರಡನೇ ಭಾಗಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಸೀಕ್ವೆಲ್‌ಗಿರೋ ಕ್ರೇಜ್ ನೋಡಿ ನಿರ್ಮಾಪಕರು ಕೂಡ ನೀರಿನಂತೆ ಬಂಡವಾಳ ಸುರಿಯಲು ಮುಂದಾಗಿದ್ದಾರೆ. ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಚಿತ್ರೀಕರಣಕ್ಕೆ ಈಗ ಚಿತ್ರತಂಡ ಸಿದ್ಧವಾಗಿದೆ.

   'ಪುಷ್ಪ' Vs ಭನ್ವರ್ ಸಿಂಗ್ ಕದನ ಹೇಗಿರುತ್ತೆ?

  'ಪುಷ್ಪ' Vs ಭನ್ವರ್ ಸಿಂಗ್ ಕದನ ಹೇಗಿರುತ್ತೆ?

  ಕಟ್ಟಪ್ಪ ಯಾಕೆ 'ಬಾಹುಬಲಿ'ಯನ್ನು ಕೊಂದ ಎಂದು ನೋಡಲು ಪಾರ್ಟ್‌-2ಗೆ ಕಾದಂತೆ, ರಾಕಿ ಭಾಯ್ ವರ್ಸಸ್ ಅಧೀರ ಫೈಟ್ ಹೇಗಿರುತ್ತೆ ಎಂದು ನೋಡಿ 'ಕೆಜಿಎಫ್‌-2'ಗಾಗಿ ಕಾದಂತೆ 'ಪುಷ್ಪ'ರಾಜ್ ವರ್ಸಸ್‌ ಎಸ್‌ಪಿ ಭನ್ವರ್‌ ಸಿಂಗ್ ಶೇಖಾವತ್ ಪೈಪೋಟಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಸೀಕ್ವೆಲ್‌ನಲ್ಲಿ ಮತ್ತಷ್ಟು ವಿಲನ್‌ಗಳು ಅಖಾಡಕ್ಕೆ ಇಳಿಯುವ ಸಾಧ್ಯತೆಯೂ ಇದೆ. ಒಟ್ನಲ್ಲಿ 'ಪುಷ್ಪ'-2 ಸಿನಿಮಾ ಭಾರೀ ಕುತೂಹಲ ಕೆರಳಿಸಿರುವುದು ಸುಳ್ಳಲ್ಲ.

  English summary
  Allu Arjun Rashmika Mandanna Starrer Pushpa The Rule Movie Launched. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X