Just In
Don't Miss!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Education
KTIL Recruitment 2021: 38 ಡಿಟಿಸಿ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಸಮುದ್ರದಲ್ಲಿ 12 ಕಿ.ಮೀ ಒಬ್ಬಂಟಿಯಾಗಿ ಕಯಾಕ್ ಮಾಡಿ ಸಾಹಸ ಮೆರೆದ ಪತ್ರಕರ್ತ!
- Automobiles
ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಅಂಜಲಿ' ಆದ ಅಲ್ಲು ಅರ್ಜುನ್ ಮಗಳು: ವಿಡಿಯೋ ವೈರಲ್
ಮಣಿರತ್ನಂ ನಿರ್ದೇಶನದ 'ಅಂಜಲಿ' ಸಿನಿಮಾದ 'ಅಂಜಲಿ, ಅಂಜಲಿ, ಅಂಜಲಿ' ಹಾಡು ಬಹು ಜನಪ್ರಿಯವಾಗಿತ್ತು. ಹಾಡಿನಲ್ಲಿ ಮುದ್ದು ಮಗು ಅಂಜಲಿಯನ್ನು ನೋಡುವುದೇ ಮನಸ್ಸಿಗೆ ಹಿತ. ಅದ್ಭುತವಾಗಿ ಹಾಡನ್ನು ಕೊರಿಯೋಗ್ರಾಫ್ ಮಾಡಲಾಗಿತ್ತು.
ಇದೇ ಹಾಡಿನ ಮಾದರಿಯಲ್ಲಿ ಅಲ್ಲು ಅರ್ಜುನ್ ಮಗಳ ವಿಡಿಯೋವನ್ನು ಈಗ ಚಿತ್ರೀಕರಿಸಲಾಗಿದೆ. ಅಲ್ಲು ಅರ್ಜುನ್ ಮಗಳು ಅರ್ಹಾ ಳ ಹುಟ್ಟುಹಬ್ಬದಂದು ವಿಡಯೋವನ್ನು ಬಿಡುಗಡೆ ಮಾಡಲಾಗಿದ್ದು, ಮೂಲ 'ಅಂಜಲಿ-ಅಂಜಲಿ' ಹಾಡಿನ ಕೊರಿಯೋಗ್ರಫಿ ಮಾದರಿಯನ್ನೇ ನಕಲು ಮಾಡಿ ಅರ್ಹಾ ಳ ವಿಡಿಯೋ ಚಿತ್ರಿಸಲಾಗಿದೆ.
ಹಾಡಿನಲ್ಲಿ ಅಲ್ಲು ಅರ್ಜುನ್ ಪುತ್ರ ಅಯಾನ್ ಸಹ ಇದ್ದಾರೆ. ಜೊತೆಗೆ ಹಲವಾರು ಮಕ್ಕಳು ವಿಡಿಯೋದಲ್ಲಿ ನರ್ತಿಸಿದ್ದಾರೆ. ವಿಡಿಯೋದ ಅಂತ್ಯದಲ್ಲಿ ಅಲ್ಲು ಅರ್ಜುನ್ ಸಹ ಕಾಣಿಸಿಕೊಳ್ಳುತ್ತಾರೆ. ಅಲ್ಲು ಅರವಿಂದ್ ಸಹ ಇದ್ದಾರೆ ವಿಡಿಯೋದಲ್ಲಿ.
ಆರಾಹ್ ನ 'ಅಂಜಲಿ, ಅಂಜಲಿ, ಅಂಜಲಿ' ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಆದರೆ ಮೂಲ 'ಅಂಜಲಿ, ಅಂಜಲಿ, ಅಂಜಲಿ' ಹಾಡಿನಷ್ಟು ಚೆನ್ನಾಗಿ ಈ ವಿಡಿಯೋ ಇಲ್ಲವೆಂದು ಸಹ ಕೆಲವರು ಹೇಳಿದ್ದಾರೆ.
ಮಣಿರತ್ನಂ ನಿರ್ದೇಶನದ 'ಅಂಜಲಿ' ಸಿನಿಮಾ 1990 ರಲ್ಲಿ ಬಿಡುಗಡೆ ಆಗಿತ್ತು ಇಳಯರಾಜ ಸಂಗೀತ ನಿರ್ದೇಶಿಸಿದ್ದ 'ಅಂಜಲಿ, ಅಂಜಲಿ, ಅಂಜಲಿ' ಹಾಡಂತೂ ಭಾರಿ ಹಿಟ್ ಆಗಿತ್ತು, ಅಂಜಲಿಯಾಗಿ ಬೇಬಿ ಶಾಮಿಲಿ ಬಹು ಮುದ್ದಾಗಿ ಕಾಣುತ್ತಿದ್ದರು. ಹಾಡು ಅಷ್ಟು ಅದ್ಭುತವಾಗಿ ಮೂಡಿ ಬರಲು ಸಿನಿಮಾಟೋಗ್ರಾಫರ್ ಮಧು ಅಂಬಟ್ ಸಹ ಕಾರಣ.