For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ಆರಂಭಿಸಿದ 'ಅಂಧಾದುನ್' ತೆಲುಗು ರೀಮೇಕ್

  |

  2018ರ ಬಾಲಿವುಡ್ ಸೂಪರ್ ಹಿಟ್ ಚಿತ್ರ ಅಂಧಾದುನ್ ದಕ್ಷಿಣ ಇಂಡಸ್ಟ್ರಿಯಲ್ಲಿ ರೀಮೇಕ್ ಆಗುತ್ತಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ. ಇದೀಗ, ತೆಲುಗಿನಲ್ಲಿ ಅಂಧಾದುನ್ ರೀಮೇಕ್ ಚಿತ್ರೀಕರಣ ಆರಂಭಿಸಿದೆ. ಆಯುಷ್ಮಾನ್ ಖುರಾನ್ ನಟಿಸಿದ್ದ ಪಾತ್ರದಲ್ಲಿ ತೆಲುಗು ನಟ ನಿತೀನ್ ನಟಿಸುತ್ತಿದ್ದು, ಇಂದಿನಿಂದ ದುಬೈನಲ್ಲಿ ಶೂಟಿಂಗ್ ಶುರುವಾಗಿದೆ.

  ಈ ಕುರಿತು ಬಾಲಿವುಡ್ ಚಿತ್ರದ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಮೆರ್ಲಪಾಕ ಗಾಂಧಿ ತೆಲುಗು ವರ್ಷನ್ ನಿರ್ದೇಶನ ಮಾಡುತ್ತಿದ್ದು,, ನಿತೀನ್ ಜೊತೆ ತಮನ್ನಾ ಹಾಗೂ ನಭಾ ನಟೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದೆ ಓದಿ....

  ದೀಪಿಕಾ ಪಡುಕೋಣೆ ಚಿತ್ರದ ರೀಮೇಕ್‌ನಲ್ಲಿ ತ್ರಿಷಾ ನಟನೆ!ದೀಪಿಕಾ ಪಡುಕೋಣೆ ಚಿತ್ರದ ರೀಮೇಕ್‌ನಲ್ಲಿ ತ್ರಿಷಾ ನಟನೆ!

  'ರಂಗ್ ದೇ' ಶೂಟಿಂಗ್ ಮುಗಿಸಿದ ನಿತೀನ್

  'ರಂಗ್ ದೇ' ಶೂಟಿಂಗ್ ಮುಗಿಸಿದ ನಿತೀನ್

  'ಭೀಷ್ಮ' ಸಿನಿಮಾದ ಬಳಿಕ ನಿತೀನ್ ರಂಗ್ ದೇ ಚಿತ್ರವನ್ನು ಮುಗಿಸಿದ್ದಾರೆ. ಇತ್ತೀಚಿಗಷ್ಟೆ ರಂಗ್ ದೇ ಚಿತ್ರದ ಕೊನೆಯ ಹಂತದ ಶೂಟಿಂಗ್‌ನ್ನು ದುಬೈನಲ್ಲಿ ಪೂರ್ಣಗೊಳಿಸಿದ್ದರು. ಇದರ ಬೆನ್ನಲ್ಲೆ ದುಬೈನಲ್ಲಿ ಅಂಧಾದುನ್ ರೀಮೇಕ್ ಪ್ರಾರಂಭಿಸಿದ್ದಾರೆ. ಈ ಕುರಿತು ನಿತೀನ್ ಸಹ ಸಂತಸ ಹಂಚಿಕೊಂಡಿದ್ದಾರೆ.

  ಜನವರಿಗೆ ತಮನ್ನಾ ಭಾಗಿ

  ಜನವರಿಗೆ ತಮನ್ನಾ ಭಾಗಿ

  ಆಯುಷ್ಮಾನ್ ಖುರಾನ್, ರಾಧಿಕಾ ಆಪ್ಟೆ ಹಾಗೂ ಟಬು ನಟಿಸಿದ್ದ ಪಾತ್ರದಲ್ಲಿ ಕ್ರಮವಾಗಿ ನಿತೀನ್, ನಭಾ ನಟೇಶ್ ಹಾಗೂ ತಮನ್ನಾ ಕಾಣಿಸಿಕೊಳ್ಳುತ್ತಿದ್ದಾರೆ. ದುಬೈನಲ್ಲಿ ಆರಂಭವಾಗಿರುವ ಚಿತ್ರೀಕರಣಕ್ಕೆ ನಿತೀನ್ ಜೊತೆ ನಭಾ ನಟೇಶ್ ಸಹ ಭಾಗಿಯಾಗಿದ್ದಾರೆ. ಆದ್ರೆ, ತಮನ್ನಾ ಜನವರಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

  ತಮಿಳಿನಲ್ಲಿ ಅಂಧಾದುನ್?

  ತಮಿಳಿನಲ್ಲಿ ಅಂಧಾದುನ್?

  ತಮಿಳಿನಲ್ಲೂ ಅಂಧಾದುನ್ ರೀಮೇಕ್ ಆಗುತ್ತಿದ್ದು, ನಿರ್ಮಾಪಕ ತ್ಯಾಗರಾಜನ್ ಬಳಿ ರೀಮೇಕ್ ಹಕ್ಕಿದೆ. ಮೂಲಗಳ ಪ್ರಕಾರ ನಟ ಪ್ರಶಾಂತ್ ನಾಯಕನಾಗಿ ನಟಿಸುವ ಸಾಧ್ಯತೆ ಇದೆ. ಪ್ರಶಾಂತ್‌ಗೆ ನಾಯಕಿಯರು ಯಾರಾಗಬಹುದು ಎಂಬ ಕುತೂಹಲ ಕಾಡ್ತಿದೆ. ಆದ್ರೆ, ತಮಿಳು ಪ್ರಾಜೆಕ್ಟ್‌ ಅಧಿಕೃತವಾಗಿಲ್ಲ.

  ಅದು ನನಗೆ ಬಹಳ ಮುಖ್ಯವಾದ ದಿನ ಎಂದ ಶಕೀಲ | Shakeela | Filmibeat Kannada
  ಮಲಯಾಳಂನಲ್ಲಿ ಯಾರು?

  ಮಲಯಾಳಂನಲ್ಲಿ ಯಾರು?

  ಮಲಯಾಳಂ ಭಾಷೆಯಲ್ಲಿ ಅಂಧಾದುನ್ ರೀಮೇಕ್‌ಗೆ ಪೃಥ್ವಿರಾಜ್ ಸುಕುಮಾರ್ ನಾಯಕನಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಪೃಥ್ವಿರಾಜ್ ಜೊತೆಯಲ್ಲಿ ಅಹನಾ ಕೃಷ್ಣ ಮತ್ತು ಮಮತಾ ಮೋಹನ್ ದಾಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರ ಬಗ್ಗೆ ಅಧಿಕೃತ ಪ್ರಕಟಣೆ ಆಗಿಲ್ಲ.

  English summary
  Director Merlapaka Gandhi commenced shoot of Andhadhun Telugu remake in Dubai today

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X