For Quick Alerts
  ALLOW NOTIFICATIONS  
  For Daily Alerts

  ಕೆಲ ದಿನ ನಟಿಸಿ ಕೈಬಿಟ್ಟಿದ್ದ ಚಿತ್ರವನ್ನು ಮತ್ತೆ ಕೈಗೆತ್ತಿಕೊಂಡ ಅನುಪಮಾ ಪರಮೇಶ್ವರನ್

  |

  ಕನ್ನಡದಲ್ಲಿ ನಟ ಪುನೀತ್ ರಾಜ್‌ಕುಮಾರ್ ಜತೆ ನಟಸಾರ್ವಭೌಮ ಎಂಬ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿದ್ದ ನಟಿ ಅನುಪಮಾ ಪರಮೇಶ್ವರನ್ ಮೂಲತಃ ಮಲಯಾಳಂ ನಟಿ. ಮೊದಲಿಗೆ ಪ್ರೇಮಮ್ ಚಿತ್ರದಲ್ಲಿ ನಟಿಸುವ ಮೂಲಕ ತನ್ನ ಸಿನಿ ಕೆರಿಯರ್ ಆರಂಭಿಸಿದ್ದ ಅನುಪಮಾ ಪರಮೇಶ್ವರನ್ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಅ ಆ' ಎಂಬ ತೆಲುಗು ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್ ಚಿತ್ರರಂಗಕ್ಕೂ ಸಹ ಕಾಲಿಟ್ಟಿದ್ದರು.

  ಹೀಗೆ ತೆಲುಗು ಚಿತ್ರರಂಗ ಪ್ರವೇಶಿಸಿದ್ದ ಈ ನಟಿ ಮಲಯಾಳಂ ಚಿತ್ರಗಳಿಗಿಂತ ತೆಲುಗು ಚಿತ್ರಗಳಲ್ಲಿ ನಟಿಸಿದ್ದೇ ಹೆಚ್ಚು. ತೆಲುಗಿನಲ್ಲಿ ಹೆಚ್ಚು ಸಕ್ಸಸ್ ಕಂಡಿರುವ ಅನುಪಮಾ ಪರಮೇಶ್ವರನ್‌ಗೆ ತೆಲುಗು ಆಫರ್‌ಗಳೂ ಸಹ ಹೆಚ್ಚಾಗಿ ಬರತೊಡಗಿದವು. ಅದೇ ರೀತಿ ಕಳೆದ ವರ್ಷದ ಬ್ಲಾಕ್‌ಬಸ್ಟರ್ ಚಿತ್ರ 'ಡಿಜೆ ಟಿಲ್ಲು' ಮುಂದುವರೆದ ಭಾಗ 'ಡಿಜೆ ಟಿಲ್ಲು ಸ್ಕ್ವೇರ್' ಚಿತ್ರಕ್ಕೆ ನಟಿಯಾಗುವ ಆಫರ್ ಸಹ ಬಂದಿತ್ತು.

  ಈ ಆಫರ್ ಸ್ವೀಕರಿಸಿದ್ದ ಅನುಪಮಾ ಪರಮೇಶ್ವರನ್ ಕೆಲ ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿ ನಂತರ ಚಿತ್ರದಿಂದ ಹೊರನಡೆದಿದ್ದರು. ಬಳಿಕ ಈ ಚಿತ್ರಕ್ಕೆ ಶ್ರೀಲೀಲಾ ಹಾಗೂ ಮಾಂಡೊನ್ನಾ ಸೆಬಾಸ್ಟಿಯನ್ ನಾಯಕಿಯರಾಗಿ ಆಯ್ಕೆಯಾಗದರು. ಆದರೆ ಈ ಇಬ್ಬರೂ ಸಹ ಚಿತ್ರದಿಂದ ಹೊರನಡೆದಿದ್ದರು. ಈ ನಟಿಯರಿಗೆ ಚಿತ್ರದ ಹೀರೊ ಜತೆ ವೈಮನಸ್ಸು ಉಂಟಾದ ಕಾರಣ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿಯೂ ಸಹ ಹರಿದಾಡಿತ್ತು ಹಾಗೂ ವಿವಾದದ ರೂಪ ಪಡೆದುಕೊಂಡಿತ್ತು.

  ಆದರೆ ಇದೀಗ ನಟಿ ಅನುಪಮಾ ಪರಮೇಶ್ವರನ್ ಮತ್ತೆ ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು, ಟಿಲ್ಲು ಸ್ಕ್ವೇರ್ ಚಿತ್ರಕ್ಕೆ ಮರಳಿರುವ ಅನುಪಮಾ ಪರಮೇಶ್ವರನ್ ಹೈದರಾಬಾದ್‌ನಲ್ಲಿ ಬಿಡುವಿಲ್ಲದೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎಂಬ ಸುದ್ದಿಯೂ ಸಹ ಹರಿದಾಡಿದೆ. ಈ ಮೂಲಕ ಟಿಲ್ಲು ಸ್ಕ್ವೇರ್ ಚಿತ್ರದ ವಿವಾದಗಳಿಗೆ ತೆರೆ ಬಿದ್ದಿದೆ.

  English summary
  Anupama Parameswaran rejoinsTillu 2 team and ends all the rumours
  Wednesday, January 11, 2023, 7:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X