For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ 'ಆಚಾರ್ಯ' ಚಿತ್ರದಲ್ಲಿ ಸ್ಟಾರ್ ಹೀರೋಯಿನ್ ಎಂಟ್ರಿ!

  |

  ಲಾಕ್‌ಡೌನ್ ಬ್ರೇಕ್ ಬಳಿಕ ಚಿತ್ರೀಕರಣಕ್ಕೆ ಸಜ್ಜಾಗಿರುವ ಆಚಾರ್ಯ ಚಿತ್ರತಂಡದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಮೂಲಗಳ ಪ್ರಕಾರ, ಸೌತ್ ಇಂಡಸ್ಟ್ರಿಯ ಸ್ಟಾರ್ ಹೀರೋಯಿನ್ ಒಬ್ಬರು ಆಚಾರ್ಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

  ಕೊರಟಲಾ ಶಿವ ನಿರ್ದೇಶನದ ಈ ಚಿತ್ರದಲ್ಲಿ ಕಾಜಲ್ ಅಗರ್‌ವಾಲ್ ಪ್ರಮುಖ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆ ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ ಸಹ ಇರಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ನಟ ಚಿರಂಜೀವಿ 'ಆಚಾರ್ಯ' ಚಿತ್ರೀಕರಣಕ್ಕೆ ಹೊರಡುವ ಮೊದಲು ಕೇಳಿಬಂತು ಬ್ಯಾಡ್ ನ್ಯೂಸ್

  ಚಿತ್ರತಂಡ ಆಪ್ತ ವಲಯ ಬಿಟ್ಟುಕೊಟ್ಟಿರುವ ಪ್ರಕಾರ, ಅನುಷ್ಕಾ ಅವರದ್ದು ಅತಿಥಿ ಪಾತ್ರವಂತೆ. ಆದ್ರೆ, ಯಾವ ಪಾತ್ರ ಎಂಬುದರ ಬಗ್ಗೆ ಸದ್ಯಕ್ಕೆ ಸ್ಪಷ್ಟನೆ ಇಲ್ಲ.

  ಇದಕ್ಕೂ ಮುಂಚೆ ಚಿರಂಜೀವಿ ನಟಿಸಿದ್ದ ಸ್ಟಾಲಿನ್ ಚಿತ್ರದ ಹಾಡೊಂದರಲ್ಲಿ ಅನುಷ್ಕಾ ಹೆಜ್ಜೆ ಹಾಕಿದ್ದರು. ಅದಾದ ಬಳಿಕ ಸೈರಾ ಸಿನಿಮಾದಲ್ಲಿ ಝಾನ್ಸಿ ರಾಣಿ ಪಾತ್ರ ಮಾಡಿದ್ದರು. ಇದೀಗ, ಮತ್ತೊಮ್ಮೆ ಮೆಗಾಸ್ಟಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  ಬೇಸರದ ಸಂಗತಿ ಅಂದ್ರೆ ಚಿರಂಜೀವಿಗೆ ಕೊರೊನಾ ಪಾಸಿಟಿವ್ ಬಂದಿದೆ. ನವೆಂಬರ್ ತಿಂಗಳಲ್ಲಿ ಶೂಟಿಂಗ್ ಆರಂಭಿಸಲು ಎಲ್ಲ ತಯಾರಿ ನಡೆದಿತ್ತು. ಈ ಹಂತದಲ್ಲಿ ಕೊವಿಡ್ ಸೋಂಕು ತಗುಲಿರುವುದು ನಿರಾಸೆ ಮೂಡಿಸಿದೆ.

  ದುಬಾರಿ ಯಾಗಿ ಬರಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ | Dhruva Sarja | Nanda kishore | Chandan Shetty

  ಯಾವುದೇ ರೋಗ ಲಕ್ಷಣಗಳು ಇಲ್ಲ. ಆದರೂ ಕೊವಿಡ್ ಖಚಿತವಾಗಿದೆ ಎಂದು ಸ್ವತ ಚಿರಂಜೀವಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ವೈದ್ಯರ ಸಲಹೆ ಮೆರೆಗೆ ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

  English summary
  According to source, Anushka shetty might be playing cameo role in megastar's Acharya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X