For Quick Alerts
  ALLOW NOTIFICATIONS  
  For Daily Alerts

  ಸೆಕ್ಸಿಯಾಗಿ ಕಾಣಿಸುವುದು ಸುಲಭವಲ್ಲ: ಐಟಂ ಹಾಡಿಗೆ ಸಮಂತಾ ಪ್ರತಿಕ್ರಿಯೆ

  |

  ನಟಿ ಸಮಂತಾ ತಮ್ಮ ಸಿನಿ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ 'ಪುಷ್ಪ' ಸಿನಿಮಾದಲ್ಲಿ ಐಟಂ ಹಾಡಿಗೆ ನೃತ್ಯ ಮಾಡಿದ್ದಾರೆ. ಸಮಂತಾರ ಐಟಂ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

  ಸಮಂತಾ ನರ್ತಿಸಿರುವ ಐಟಂ ಹಾಡಿನ ಬಗ್ಗೆ ಈಗಾಗಲೇ ದೂರು ಸಹ ದಾಖಲಾಗಿದೆ. ಸಮಂತಾ ನಟಿಸಿರುವ 'ಊ ಅಂಟಾವ ಮಾವ ಊ ಹು ಅಂಟಾವ' ಹಾಡು ಪುರುಷ ಸಮುದಾಯಕ್ಕೆ ಅಪಮಾನ ಮಾಡುತ್ತಿದೆ ಎಂದು ಕೆಲವರು ದೂರು ಸಹ ದಾಖಲಿಸಿದ್ದಾರೆ.

  ಇನ್ನು ಕೆಲವರು ಸಮಂತಾ ಅಂಥಹಾ ನಟಿ ಐಟಂ ಹಾಡು ಮಾಡಬಾರದಿತ್ತು ಎಂದು, ಮಾಜಿ ಪತಿ ನಾಗ ಚೈತನ್ಯ ಹಾಗೂ ಮಾಜಿ ಮಾವ ನಾಗಾರ್ಜುನಗೆ ಅಪಮಾನ ಮಾಡಲೆಂದೇ ಹೀಗೆ ಗ್ಲಾಮರಸ್ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ ಎಂಬಿತ್ಯಾದಿ ಮಾತುಗಳು ಕೇಳಿ ಬರುತ್ತಿದೆ. ಇದೀಗ ಸ್ವತಃ ನಟಿ ಸಮಂತಾ ತಮ್ಮ ಐಟಂ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

  ಸೆಕ್ಸಿಯಾಗಿ ಕಾಣಿಸಿಕೊಳ್ಳುವುದು ಸುಲಭವಲ್ಲ: ಸಮಂತಾ

  ಸೆಕ್ಸಿಯಾಗಿ ಕಾಣಿಸಿಕೊಳ್ಳುವುದು ಸುಲಭವಲ್ಲ: ಸಮಂತಾ

  ''ನಾನು ಒಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ, ಕೆಟ್ಟ ಪಾತ್ರಗಳಲ್ಲಿಯೂ ನಟಿಸಿದ್ದೇನೆ. ತಮಾಷೆಯ ಪಾತ್ರಗಳಲ್ಲಿಯೂ ನಟಿಸಿದ್ದೇನೆ. ಗಂಭೀರವಾದ ಪಾತ್ರಗಳಲ್ಲಿಯೂ ನಟಿಸಿದ್ದೇನೆ. ನಾನು ನಟಿಸುವ ಎಲ್ಲ ಪಾತ್ರಗಳಲ್ಲಿಯೂ ಅದ್ಭುತವಾಗಿ ನಟಿಸಬೇಕೆಂದು, ಬಹಳ ಚೆನ್ನಾಗಿ ಮೂಡಿ ಬರಬೇಕೆಂದು ನಾನು ಬಹಳ ಕಷ್ಟಪಡುತ್ತೇನೆ. ಆದರೆ ಸೆಕ್ಸಿಯಾಗಿ ಕಾಣಿಸಿಕೊಳ್ಳುವುದು ಬಹಳ-ಬಹಳ ಕಷ್ಟದ ಕೆಲಸ. 'ಊ ಅಂಟಾವ ಮಾವ ಊ ಹು ಅಂಟಾವ' ಹಾಡಿಗೆ ನೀವು ತೋರಿದ ಪ್ರೀತಿಗೆ ಋಣಿ'' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ಸಮಂತಾ.

  ಒನ್ಸ್‌ ಮೋರ್ ಎಂದು ಕೂಗಿದ ಪ್ರೇಕ್ಷಕರು

  ಒನ್ಸ್‌ ಮೋರ್ ಎಂದು ಕೂಗಿದ ಪ್ರೇಕ್ಷಕರು

  ನಟಿ ಸಮಂತಾ ಮೊದಲ ಬಾರಿಗೆ 'ಪುಷ್ಪ' ಸಿನಿಮಾದಲ್ಲಿ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಾಡಿನ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಂಧ್ರದ ಚಿತ್ರಮಂದಿರ ಒಂದರಲ್ಲಿ ಹಾಡು ಸಮಂತಾರ ಹಾಡು ಮುಗಿಯುತ್ತಿದ್ದಂತೆ ವೀಕ್ಷಕರು ಒನ್ಸ್‌ ಮೋರ್ ಎಂದು ಕೂಗು ಹಾಕಿದ್ದಾರೆ. ಸಿನಿಮಾ ನೋಡಿದ ಹಲವರು ಸಮಂತಾರ ಬೋಲ್ಡ್ ಅಪಿಯರೆನ್ಸ್ ಹಾಗೂ ಹಾಡಿನ ಮಾದಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಅಲ್ಲು ಅರ್ಜುನ್ ಹಾಗೂ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಸಹ ಹಾಡಿನ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  ಅಲ್ಲು ಅರ್ಜುನ್ ಅನ್ನು ಹೊಗಳಿದ ಸಮಂತಾ

  ಅಲ್ಲು ಅರ್ಜುನ್ ಅನ್ನು ಹೊಗಳಿದ ಸಮಂತಾ

  'ಪುಷ್ಪ' ಸಿನಿಮಾದ ಬಗ್ಗೆಯೂ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ನಟಿ ಸಮಂತಾ ನಟ ಅಲ್ಲು ಅರ್ಜುನ್ ಅನ್ನು ಹೊಗಳಿದ್ದಾರೆ. ''ಅಲ್ಲು ಅರ್ಜುನ್ ನಟನೆ ನಿಮ್ಮನ್ನು ಸೀಟಿಗೆ ಅಂಟಿಕೊಂಡೇ ಕುಳಿತಿರುವಂತೆ ಮಾಡುತ್ತದೆ. ಸಿನಿಮಾದ ಪ್ರತಿ ಸೆಕೆಂಡ್ ಬೆಂಕಿ. ಯಾರಾದರೂ ನಟರು ಒಳ್ಳೆಯ ನಟನೆ ನೀಡಿದಾಗ ಅದನ್ನು ಕಂಡು ನಾನು ಸ್ಪೂರ್ತಿಗೊಳ್ಳುತ್ತೇನೆ. 'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟನೆ ನೋಡಿ ನಾನು ಸ್ಪೂರ್ತಿ ಪಡೆದೆ. ಸಿನಿಮಾದಲ್ಲಿ ಅವರ ನಟನೆ, ಅವರು ಮಾತನಾಡುವ ಭಾಷೆ, ಭುಜವನ್ನು ಒಂದೇ ಕಡೆ ಇಟ್ಟುಕೊಂಡಿರುವುದು, ಅವರ 'ಸ್ವ್ಯಾಗ್' ಎಲ್ಲವೂ ಅದ್ಭುತ. ಬಹಳ ಪ್ರೇರಣೆ ನೀಡುವಂತಹಾ ನಟನೆ'' ಎಂದಿದ್ದಾರೆ ಸಮಂತಾ.

  'ಪುಷ್ಪ' ಎರಡನೇ ಭಾಗ ಬಿಡುಗಡೆ ಯಾವಾಗ?

  'ಪುಷ್ಪ' ಎರಡನೇ ಭಾಗ ಬಿಡುಗಡೆ ಯಾವಾಗ?

  'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆ ಮಾಡುವ ವ್ಯಕ್ತಿಯ ಕತೆಯಾಗಿದ್ದು, ಸಿನಿಮಾ ಡಿಸೆಂಬರ್ 17 ರಂದು ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ, ಕನ್ನಡಿಗ ಡಾಲಿ ಧನಂಜಯ್, ಹಾಸ್ಯ ನಟ ಸುನಿಲ್ ಇನ್ನಿತರ ವಿಲನ್‌ಗಳು ಇದ್ದಾರೆ. ಸಿನಿಮಾದಲ್ಲಿ ಫಹಾದ್ ಫಾಸಿಲ್ ಸಹ ಇದ್ದು ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗಿದೆ. ಸಿನಿಮಾದ ಎರಡನೇ ಭಾಗ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. 'ಪುಷ್ಪ' ಸಿನಿಮಾ ಈಗಾಗಲೇ ಹಿಟ್ ಆಗಿದ್ದು ಕೇವಲ ನಾಲ್ಕು ದಿನದಲ್ಲಿ 100 ಕೋಟಿಗೂ ಹೆಚ್ಚು ಹಣವನ್ನು 'ಪುಷ್ಪ' ಈಗಾಗಲೇ ಗಳಿಸಿದೆ.

  English summary
  Actress Samantha said being sexy is next level hard work. She said she enjoyed doing song in Pushpa movie.
  Wednesday, December 22, 2021, 9:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X