For Quick Alerts
  ALLOW NOTIFICATIONS  
  For Daily Alerts

  'ಭೀಷ್ಮ' ಟೈಟಲ್ ಬದಲಿಸಲು ಬಿಜೆಪಿ ಪಟ್ಟು: ಶೀರ್ಷಿಕೆ ವಿವಾದದಲ್ಲಿ ನಿತಿನ್-ರಶ್ಮಿಕಾ ಚಿತ್ರ.!

  |

  ಟಾಲಿವುಡ್ ನ ಚಾಕಲೇಟ್ ಬಾಯ್ ನಿತಿನ್ ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯದ 'ಭೀಷ್ಮ' ಚಿತ್ರ ನಾಳೆ ಬಿಡುಗಡೆ ಆಗಲಿದೆ. ಫೆಬ್ರವರಿ 21 ರಂದು ದೇಶದಾದ್ಯಂತ 'ಭೀಷ್ಮ' ತೆರೆಗೆ ಬರಲಿದೆ. 'ಭೀಷ್ಮ' ರಿಲೀಸ್ ಗೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗ, ಶೀರ್ಷಿಕೆ ವಿವಾದದಲ್ಲಿ ಚಿತ್ರ ಸಿಲುಕಿದೆ.

  'ಭೀಷ್ಮ' ಚಿತ್ರದ ಟೈಟಲ್ ಕುರಿತು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. 'ಭೀಷ್ಮ' ಚಿತ್ರದ ಶೀರ್ಷಿಕೆ ಬದಲಿಸುವಂತೆ ಬಿಜೆಪಿ ಧಾರ್ಮಿಕ ಸೆಲ್ ನ ತುಮುಲೂರಿ ಶ್ರೀ ಕೃಷ್ಣ ಚೈತನ್ಯ, ರಥಕರಮ್ ರಾಮು ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

  ಸಿನಿಮಾಗೆ ಮಹಾಭಾರತದ ಭೀಷ್ಮ ಪಿತಾಮಹನ ಹೆಸರಿಟ್ಟಿರುವುದರಿಂದ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಲಿದೆ. ಹೀಗಾಗಿ, ಕೂಡಲೆ ಚಿತ್ರದ ಶೀರ್ಷಿಕೆ ಬದಲಿಸುವಂತೆ ಬಿಜೆಪಿ ನಾಯಕರು ಚಿತ್ರತಂಡದ ಮೇಲೆ ಒತ್ತಡ ತಂದಿದ್ದಾರೆ.

  ಸಂದರ್ಶನದಲ್ಲಿ ತೆಲುಗು ನಟ ನಿತಿನ್ ಬಾಯಿಂದ ಬಂತು ಸತ್ಯ: ರಶ್ಮಿಕಾಗೆ ಮುಜುಗರ.!ಸಂದರ್ಶನದಲ್ಲಿ ತೆಲುಗು ನಟ ನಿತಿನ್ ಬಾಯಿಂದ ಬಂತು ಸತ್ಯ: ರಶ್ಮಿಕಾಗೆ ಮುಜುಗರ.!

  ''ರೊಮ್ಯಾಂಟಿಕ್ ಚಿತ್ರಕ್ಕೆ 'ಭೀಷ್ಮ' ಎಂಬ ಶೀರ್ಷಿಕೆ ಬಳಸಿದ್ದಾದರೂ ಯಾಕೆ.? 'ಮಹಾಭಾರತ'ದ ಭೀಷ್ಮ ಬ್ರಹ್ಮಚಾರಿ. ಆದ್ರೆ, ಸಿನಿಮಾದಲ್ಲಿ ಲವರ್ ಬಾಯ್ ಗೆ ಭೀಷ್ಮ ಅಂತ ಹೆಸರಿಟ್ಟಿರುವುದು ಅವಮಾನಕರ. ಇದರಿಂದ ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ'' ಎಂದು ಭಾರತೀಯ ಜನತಾ ಪಕ್ಷದ ನಾಯಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಮಹೇಶ್ ಬಾಬು, ಅಲ್ಲು ಅರ್ಜುನ್ ಆಯ್ತು: ರಶ್ಮಿಕಾ ಮುಂದಿನ ಹೀರೋ ಈ 'ಬಿಗ್' ಸ್ಟಾರ್.!ಮಹೇಶ್ ಬಾಬು, ಅಲ್ಲು ಅರ್ಜುನ್ ಆಯ್ತು: ರಶ್ಮಿಕಾ ಮುಂದಿನ ಹೀರೋ ಈ 'ಬಿಗ್' ಸ್ಟಾರ್.!

  ಒಂದು ವೇಳೆ ಟೈಟಲ್ ಬದಲಿಸದಿದ್ದರೆ, ಚಿತ್ರ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡುವುದಾಗಿ ಮತ್ತು ಕೋರ್ಟ್ ಮೆಟ್ಟಿಲೇರುವುದಾಗಿ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ. ಈ ವಿವಾದದ ಬಗ್ಗೆ ಸದ್ಯಕ್ಕೆ ಚಿತ್ರತಂಡ ಪ್ರತಿಕ್ರಿಯೆ ಕೊಟ್ಟಿಲ್ಲ.

  ಅಂದ್ಹಾಗೆ, ನಿತಿನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ 'ಭೀಷ್ಮ'. ವೆಂಕಿ ಕುಡುಮುಲ ನಿರ್ದೇಶನದ ಈ ಚಿತ್ರ ಸಿತಾರ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿ ನಿರ್ಮಾಣ ಆಗಿದೆ.

  English summary
  BJP Leaders have raised objections over 'Bheeshma' title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X