For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ನಿರಾಕರಿಸಿದ ಸಲ್ಮಾನ್ ಖಾನ್‌! ಐಶಾರಾಮಿ ಕಾರು ಕೊಡಲಿರುವ ಚಿರಂಜೀವಿ

  |

  ಮೆಗಾಸ್ಟಾರ್ ಚಿರಂಜೀವಿ ನಟನೆಯ ಸಿನಿಮಾ 'ಗಾಡ್ ಫಾದರ್' ಇತ್ತೀಚಿಗೆ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ವಿಮರ್ಶೆಗಳಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸನ್ನೂ ಗಳಿಸಿದೆ ಈ ಸಿನಿಮಾ.

  'ಆಚಾರ್ಯ' ಸಿನಿಮಾದ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ತೇಜ ಈ ಸಿನಿಮಾವನ್ನು ಹಿಟ್ ಮಾಡಲೇ ಬೇಕಾದ ಅನಿವಾರ್ಯತೆಗೆ ಬಿದ್ದಿದ್ದರು. ಹಾಗಾಗಿ ಸಿನಿಮಾವನ್ನು ಉತ್ತರ ಭಾರತದಲ್ಲಿಯೂ ರೀಚ್ ಮಾಡಿಸಿ ಅಲ್ಲಿನ ಮಾರುಕಟ್ಟೆಯಿಂದಲೂ ಲಾಭ ಪಡೆವ ಉದ್ದೇಶದಿಂದ ಸಲ್ಮಾನ್ ಖಾನ್ ಅನ್ನು ಸಹ ಕರೆತಂದಿದ್ದರು.

  ವಾಲ್ ಆಫ್ ಫೇಮ್: ಇತಿ ಆಚಾರ್ಯ, ಕಾಕ್ರೋಚ್ ಸುಧಿ ಉತ್ತಮ ನಟಿ, ನಟವಾಲ್ ಆಫ್ ಫೇಮ್: ಇತಿ ಆಚಾರ್ಯ, ಕಾಕ್ರೋಚ್ ಸುಧಿ ಉತ್ತಮ ನಟಿ, ನಟ

  'ಗಾಡ್ ಫಾದರ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಚಿರಂಜೀವಿಯೊಟ್ಟಿಗೆ ನಟಿಸಿದ್ದಾರೆ. ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಹಳೆಯ ಗೆಳೆಯರೇ ಆದ್ದರಿಂದ ಗೆಳೆಯನ ಕೋರಿಕೆ ಮನ್ನಿಸಿ ಸಲ್ಮಾನ್ ಖಾನ್ 'ಗಾಡ್ ಫಾದರ್' ಸಿನಿಮಾದಲ್ಲಿ ನಟಿಸಿದ್ದರು. ಇದಕ್ಕಾಗಿ ಒಂದು ರುಪಾಯಿ ಸಂಭಾವನೆಯನ್ನೂ ಸಲ್ಮಾನ್ ಖಾನ್ ಪಡೆದಿರಲಿಲ್ಲ. ಹಾಗೆಂದು ಚಿರಂಜೀವಿ ಸಹ ಸುಮ್ಮನಿಲ್ಲ, ಸಲ್ಮಾನ್ ಖಾನ್‌ಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.

  ಸಲ್ಮಾನ್ ಖಾನ್‌ಗೆ ದುಬಾರಿ ಕಾರು

  ಸಲ್ಮಾನ್ ಖಾನ್‌ಗೆ ದುಬಾರಿ ಕಾರು

  ಸಿನಿಮಾವನ್ನು ರಾಮ್ ಚರಣ್ ಒಡೆತನದ ಕೋನಿಡೇಲ ಪ್ರೊಡಕ್ಷನ್ ವತಿಯಿಂದಲೇ ನಿರ್ಮಾಣ ಮಾಡುತ್ತಿರುವ ಕಾರಣ ರಾಮ್ ಚರಣ್ ಅವರೇ ಸಲ್ಮಾನ್ ಖಾನ್ ಅನ್ನು ಸಂಪರ್ಕಿಸಿ ಸಿನಿಮಾದಲ್ಲಿ ನಟಿಸಲು ತಂದೆಯ ಪರವಾಗಿ ಆಹ್ವಾನಿಸಿದ್ದರು. ಹಾಗಾಗಿ ಈಗ ಚಿರಂಜೀವಿ-ರಾಮ್ ಚರಣ್ ತೇಜ ಒಟ್ಟಿಗೆ ಸಲ್ಮಾನ್ ಖಾನ್‌ಗೆ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಲು ಸಜ್ಜಾಗಿದ್ದಾರೆ.

  ಹಲವು ಐಶಾರಾಮಿ ಕಾರುಗಳಿವೆ

  ಹಲವು ಐಶಾರಾಮಿ ಕಾರುಗಳಿವೆ

  ಸಲ್ಮಾನ್ ಖಾನ್‌ ಬಳಿ ಈಗಾಗಲೇ ಹಲವು ಐಶಾರಾಮಿ ಕಾರುಗಳಿವೆ. ಹಾಗಿದ್ದರೂ ರಾಮ್ ಚರಣ್-ಚಿರಂಜೀವಿ ಅವರು ಸಲ್ಮಾನ್ ಖಾನ್‌ಗೆ ಕಾರೊಂದನ್ನು ಉಡುಗೊರೆಯಾಗಿ ನೀಡಲು ಸಿದ್ಧರಾಗಿದ್ದಾರೆ. ಆ ಕಾರು ಯಾವುದೆಂಬುದು ಖಾತ್ರಿಯಾಗಿಲ್ಲವಾದರು, ಸಲ್ಮಾನ್ ಖಾನ್‌ ಸಂಗ್ರಹದಲ್ಲಿ ಇಲ್ಲದ, ವಿಶೇಷವಾಗಿ ಐಶಾರಾಮಿಯಾದ ಹಾಗೂ ಸಲ್ಮಾನ್ ಖಾನ್‌ಗೆ ಇಷ್ಟವಾಗುವ ಮಾದರಿಯ ಕಾರನ್ನೇ ಉಡುಗೊರೆಯಾಗಿ ನೀಡಲು ಸಿದ್ಧರಾಗಿದ್ದಾರೆ.

  ಹಿಂದಿ ಭಾಗದಲ್ಲಿ ಹೆಚ್ಚೇನು ಕಲೆಕ್ಷನ್ ಮಾಡಿಲ್ಲ

  ಹಿಂದಿ ಭಾಗದಲ್ಲಿ ಹೆಚ್ಚೇನು ಕಲೆಕ್ಷನ್ ಮಾಡಿಲ್ಲ

  'ಗಾಡ್ ಫಾದರ್' ಸಿನಿಮಾ, ಮಲಯಾಳಂನ 'ಲುಸಿಫರ್' ಸಿನಿಮಾದ ರೀಮೇಕ್. ಮೂಲ ಸಿನಿಮಾದಲ್ಲಿ ಮೋಹನ್‌ಲಾಲ್ ನಟಿಸಿದ್ದ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದಾರೆ. ಪೃಥ್ವಿರಾಜ್ ಸುಕುಮಾರ್ ನಟಿಸಿದ್ದ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಸಲ್ಮಾನ್ ಖಾನ್‌ಗಾಗಿ ವಿಶೇಷ ಫೈಟ್‌ಗಳು, ಅದ್ಧೂರಿ ಎಂಟ್ರಿ ಸೀನ್ ಹಾಗೂ ಒಂದು ಹಾಡನ್ನು ಸಹ ಸಿನಿಮಾದಲ್ಲಿ ಸೇರಿಸಲಾಗಿದೆ. ಆದರೆ ಸಲ್ಮಾನ್ ಖಾನ್ ಇದ್ದರೂ ಸಹ ಈ ಸಿನಿಮಾ ಹಿಂದಿ ಭಾಗದಲ್ಲಿ ಗಮನಾರ್ಹ ಕಲೆಕ್ಷನ್ ಅನ್ನೇನೂ ಮಾಡಿಲ್ಲ. ಆದರೆ ಸಲ್ಮಾನ್ ಖಾನ್ ಇರುವುದರಿಂದಾಗಿ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕಿಗೆ ಹೆಚ್ಚು ಬೇಡಿಕೆ ಬರಲಿದೆ ಎನ್ನಲಾಗುತ್ತಿದೆ.

  ಸಲ್ಮಾನ್, ಚಿರಂಜೀವಿ ಮುಂದಿನ ಸಿನಿಮಾಗಳು

  ಸಲ್ಮಾನ್, ಚಿರಂಜೀವಿ ಮುಂದಿನ ಸಿನಿಮಾಗಳು

  ಇನ್ನುಳಿದಂತೆ, ಚಿರಂಜೀವಿ 'ಭೋಲಾ ಶಂಕರ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಬಳಿಕ 'ವಾಲ್ಟರ್ ವೀರಯ್ಯ' ಸಿನಿಮಾದಲ್ಲಿ ನಟಿಸಲಿದ್ದಾರೆ. 'ಭೋಲಾ ಶಂಕರ್' ಸಿನಿಮಾ ಸಹ ತಮಿಳಿನ ಸಿನಿಮಾದ ರೀಮೇಕ್ ಆಗಿದೆ. ಇನ್ನು ಸಲ್ಮಾನ್ ಖಾನ್ ನಟನೆಯ 'ಟೈಗರ್ 3' ಚಿತ್ರೀಕರಣ ಅಂತಿಮ ಹಂತದಲ್ಲಿದೆ. 'ಕಭಿ ಈದ್ ಕಭಿ ದಿವಾಲಿ', 'ಕಿಸೀಕಿ ಭಾಯ್, ಕಿಸೀಕಿ ಜಾನ್' ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. 'ಭಜರಂಗಿ ಭಾಯಿಜಾನ್ 2' ಸಿನಿಮಾ ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ. ಇನ್ನೂ ಕೆಲವು ಸಿನಿಮಾಗಳಿಗೆ ಸಲ್ಮಾನ್ ಖಾನ್ ಒಪ್ಪಿಗೆ ನೀಡಿದ್ದಾರೆ.

  English summary
  Star actor Chiranjeevi, Ram Charan planing to give Luxury car to Salman Khan for being part of their "God Father' movie.
  Wednesday, October 12, 2022, 10:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X