For Quick Alerts
  ALLOW NOTIFICATIONS  
  For Daily Alerts

  ಭಾರತ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದ 'ಆಚಾರ್ಯ'

  |

  ನಟ ಚಿರಂಜೀವಿ ನಟಿಸುತ್ತಿರುವ 'ಆಚಾರ್ಯ' ಸಿನಿಮಾ ಹಲವು ಕಾರಣಕ್ಕೆ ಗಮನ ಸೆಳೆದಿದೆ. ಸಿನಿಮಾದ ಪೋಸ್ಟರ್‌ಗಳು ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸಿವೆ.

  ಚಿರಂಜೀವಿ ಪುತ್ರ ರಾಮ್‌ಚರಣ್ ತೇಜ ನಿರ್ಮಿಸಿರುವ ಈ ಸಿನಿಮಾ ಹೊಸ ದಾಖಲೆಯನ್ನು ಮಾಡಿದೆ. ಚಿರಂಜೀವಿ ಸಿನಿಮಾಗಳಿಗೆ ದಾಖಲೆಗಳು ಹೊಸವೇನಲ್ಲವಾದರೂ, ಆಚಾರ್ಯ ಸಿನಿಮಾ ಮಾಡಿರುವ ಈ ದಾಖಲೆ ತುಸು ಹೊಸದೆ.

  'ಆಚಾರ್ಯ' ಸಿನಿಮಾಕ್ಕೆ ಬೃಹತ್ ಸೆಟ್ ಒಂದನ್ನು ಹಾಕಲಾಗಿದ್ದು, ಸಿನಿಮಾ ಒಂದಕ್ಕಾಗಿ ಇಡೀಯ ಭಾರತದಲ್ಲಿ ಅಷ್ಟು ದೊಡ್ಡ ಸೆಟ್‌ ಅನ್ನು ಯಾವ ಸಿನಿಮಾಕ್ಕಾಗಿಯೂ ಈ ವರೆಗೆ ಹಾಕಲಾಗಿಲ್ಲವಂತೆ.

  ಹೌದು, ಬಾಹುಬಲಿ, ತಾನಾಜಿ ಸಿನಿಮಾಗಳಿಗಿಂತಲೂ ದೊಡ್ಡ ಸೆಟ್ ಅನ್ನು ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾಕ್ಕಾಗಿ ಹಾಕಲಾಗಿದೆ. ಈ ಸೆಟ್‌ ಇಡೀಯ ಸಿನಿಮಾಕ್ಕೆ ಹೈಲೆಟ್ ಅಂತೆ.

  ದೇವಸ್ಥಾನ ಹಾಗೂ ಇಡೀಯ ಹಳ್ಳಿಯ ಸೆಟ್ ಅನ್ನು ಹಾಕಲಾಗಿದೆಯಂತೆ ಆಚಾರ್ಯ ಸಿನಿಮಾಕ್ಕೆ. ಈ ದೇವಸ್ಥಾನ ಹಾಗೂ ಹಳ್ಳಿಯ ಸೆಟ್‌ನಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ಮಹತ್ವದ ದೃಶ್ಯಗಳು ನಡೆಯಲಿವೆಯಂತೆ.

  ಕಲಾ ನಿರ್ದೇಶಕ ಸುರೇಶ್ ಸೆಲ್ವರಾಜನ್, 20 ಎಕರೆ ಪ್ರದೇಶದಲ್ಲಿ ದೊಡ್ಡ ಸೆಟ್ ಅನ್ನು ಹಾಕಿದ್ದಾರೆ. ಈ ಸೆಟ್ ಅನ್ನು ಹೈದರಾಬಾದ್‌ನ ಹೊರ ಭಾಗದ ಖಾಲಿ ಜಾಗದಲ್ಲಿ ಹಾಕಲಾಗಿದೆ. ಇದೇ ಸೆಟ್‌ನಲ್ಲಿ ಸಿನಿಮಾದ ಬಹುತೇಕ ದೃಶ್ಯಗಳ ಚಿತ್ರೀಕರಣ ನಡೆಯಲಿದೆ.

  ಚಿರಂಜೀವಿ ನಟಿಸುತ್ತಿರುವ ಆಚಾರ್ಯ ಸಿನಿಮಾದಲ್ಲಿ ನಾಯಕಿಯಾಗಿ ಕಾಜಲ್ ನಟಿಸುತ್ತಿದ್ದಾರೆ. ರಾಮ್ ಚರಣ್ ತೇಜ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಸೋನು ಸೂದ್ ಸಿನಿಮಾದ ವಿಲನ್ ಪಾತ್ರದಲ್ಲಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ.

  English summary
  A very big temple and village set created for Chiranjeevi's Acharya movie. This set is the biggest set. No other movie created this big set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X