For Quick Alerts
  ALLOW NOTIFICATIONS  
  For Daily Alerts

  ಸತ್ಕಾರ್ಯ ಮಾಡಿದ ತಮ್ಮನನ್ನು ಹಾಡಿ ಹೊಗಳಿದ ಚಿರಂಜೀವಿ

  |

  ನಟ ಚಿರಂಜೀವಿ ನಟನೆಯ ಜೊತೆಗೆ ತಮ್ಮ ಸಮಾಜಮುಖಿ ಕಾರ್ಯದಿಂದಲೂ ಚಿರಪರಿಚಿತರು. ಚಿರಂಜೀವಿ ಸ್ಥಾಪಿಸಿರುವ 'ಬ್ಲಡ್ ಬ್ಯಾಂಕ್' (ರಕ್ತದಾನ ಕೇಂದ್ರ) ಈ ವರೆಗೆ ಸಾವಿರಾರು ಮಂದಿಯ ಜೀವ ಉಳಿಸಿದೆ.

  ಇದೇ ರೀತಿ ಜೀವ ಉಳಿಸುವ ಕಾರ್ಯವನ್ನು ಚಿರಂಜೀವಿ ಸಹೋದರ ನಾಗಬಾಬು ಮಾಡಿದ್ದಾರೆ. ತಮ್ಮ ಮಾಡಿದ ಕಾರ್ಯವನ್ನು ಮನಸ್ಸಾರೆ ಹೊಗಳಿದ್ದಾರೆ ನಟ ಚಿರಂಜೀವಿ.

  'ಆಚಾರ್ಯ' ನಿರ್ದೇಶಕ-ನಿರ್ಮಾಪಕರ ಮುಂದೆ ಕಠಿಣ ಬೇಡಿಕೆಯಿಟ್ಟ ಚಿರಂಜೀವಿ

  ಚಿರಂಜೀವಿ ಸಹೋದರ ನಾಗಬಾಬು ಗೆ ಇತ್ತೀಚೆಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಕೊರೊನಾ ಇಂದ ಬೇಗನೆ ಗುಣಮುಖರಾದರು ನಾಗಬಾಬು. ಗುಣಮುಖವಾದ ನಂತರ ಇನ್ನೂ ಕೆಲವು ಕೊರೊನಾ ಸೋಂಕಿತರು ಗುಣಮುಖವಾಗುವಂತೆ ಸತ್ಕಾರ್ಯವೊಂದನ್ನು ಮಾಡಿದ್ದಾರೆ.

  ಪ್ಲಾಸ್ಮಾ ದಾನ ಮಾಡಿದ ನಾಗಬಾಬು

  ಪ್ಲಾಸ್ಮಾ ದಾನ ಮಾಡಿದ ನಾಗಬಾಬು

  ಹೌದು, ನಟ, ನಿರ್ಮಾಪಕ ನಾಗಬಾಬು ಅವರು ಪ್ಲಾಸ್ಮಾ ವನ್ನು ದಾನ ಮಾಡಿದ್ದಾರೆ. ಚಿರಂಜೀವಿ ಅವರ ಬ್ಲಡ್ ಬ್ಯಾಂಕ್‌ನಲ್ಲಿಯೇ ಅವರು ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ. ಆ ಮೂಲಕ ಇನ್ನೂ ಕೆಲವರು ಕೊರೊನಾ ಇಂದ ಗುಣಮುಖವಾಗುವಂತೆ ಮಾಡಿದ್ದಾರೆ.

  ಚಿರಂಜೀವಿ ಚಾರಿಟೇಬಲ್ ಟ್ರಸ್ಟ್‌ನಲ್ಲಿ ದಾನ

  ಚಿರಂಜೀವಿ ಚಾರಿಟೇಬಲ್ ಟ್ರಸ್ಟ್‌ನಲ್ಲಿ ದಾನ

  ಈ ಬಗ್ಗೆ ವಿಡಿಯೋ ಪ್ರಕಟಿಸಿರುವ ನಾಗಬಾಬು, 'ಕೊರೊನಾ ದಿಂದ ಗುಣಮುಖವಾದ ಕಾರಣ ನನ್ನಲ್ಲಿ ರೋಗನಿರೋಧಕ ಅಂಶ ಬೆಳವಣಿಗೆ ಆಗುತ್ತಿರುತ್ತದೆ. ಆದ್ದರಿಂದ ನಾನು ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ನಲ್ಲಿ ಪ್ಲಾಸ್ಮಾ ದಾನ ಮಾಡುತ್ತಿದ್ದೇನೆ' ಎಂದಿದ್ದಾರೆ ನಾಗಬಾಬು.

  'ಜಗದೇಕ ವೀರಡು ಅತಿಲೋಕ ಸುಂದರಿ' ಸೀಕ್ವೆಲ್: ಭರ್ಜರಿ ಪ್ಲಾನಿಂಗ್

  'ಆರು ಬಾರಿ ಪ್ಲಾಸ್ಮಾ ದಾನ ಮಾಡಬಹುದು ನಾನು'

  'ಆರು ಬಾರಿ ಪ್ಲಾಸ್ಮಾ ದಾನ ಮಾಡಬಹುದು ನಾನು'

  ಇನ್ನೂ ಮೂರು ತಿಂಗಳು ಅಂದರೆ ಸುಮಾರು ಆರು ಬಾರಿ ನಾನು ಪ್ಲಾಸ್ಮಾ ದಾನ ಮಾಡಬಹುದು, ಹಾಗಾಗಿ ಆ ಆರೂ ಬಾರಿ ನಾನು ಪ್ಲಾಸ್ಮಾ ದಾನ ಮಾಡಲಿದ್ದೇನೆ. ಈ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸುತ್ತಿರುವ ಸತ್ಯನಾರಾಯಣ್ ಹಾಗೂ ನನ್ನ ಅಣ್ಣ ಚಿರಂಜೀವಿ ಅವರಿಗೂ ಧನ್ಯವಾದ ಎಂದಿದ್ದಾರೆ ನಾಗಬಾಬು.

  ನನ್ನ ಮನೆಯಲ್ಲಿ ಚಿರುಗೆ ಒಂದು ದೇಗುಲ ಮಾಡಿ ಅಲ್ಲಿ ಅವನ ಫೋಟೋ ಇಟ್ಟಿದೀನಿ | Pannaga Bharana | Chiranjeevi Sarja
  ತಮ್ಮನ್ನ ಕಾರ್ಯಕ್ಕೆ ಅಣ್ಣನ ಮೆಚ್ಚುಗೆ

  ತಮ್ಮನ್ನ ಕಾರ್ಯಕ್ಕೆ ಅಣ್ಣನ ಮೆಚ್ಚುಗೆ

  ತಮ್ಮನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಚಿರಂಜೀವಿ, 'ಕೊರೊನಾ ಜೊತೆಗೆ ಗೆದ್ದಿದ್ದು ಮಾತ್ರವಲ್ಲದೆ ಪ್ಲಾಸ್ಮಾ ದಾನ ಮಾಡಿ ಇನ್ನೂ ಹಲವರು ಗುಣಮುಖ ಆಗುವಂತೆ ಮಾಡಿರುವ ನಾಗಬಾಬು ಗೆ ಧನ್ಯವಾದ. ಕೊರೊನಾ ದಿಂದ ಗುಣಮುಖರಾಗಿರುವ ಎಲ್ಲರೂ ಸಹ ಮುಂದೆ ಬಂದು ಪ್ಲಾಸ್ಮಾ ದಾನ ಮಾಡಿ, ಕೊರೊನಾವನ್ನು ಮಣಿಸೋಣ' ಎಂದಿದ್ದಾರೆ ಚಿರಂಜೀವಿ.

  English summary
  Actor Chiranjeevi's brother Nagababu donated his plasma in Chiranjeevi Charitable trust. He recovered from coronavirus recently.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X