For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ಮುಗಿಸಿದ ಆಚಾರ್ಯ: ಮೆಗಾಸ್ಟಾರ್ ಎಂಟ್ರಿಗೆ ಯಾವ ದಿನ ಟಾರ್ಗೆಟ್?

  |

  ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ನಟಿಸುತ್ತಿರುವ 'ಆಚಾರ್ಯ' ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಟಾಕಿ ಪೋಷನ್ ಸಂಪೂರ್ಣವಾಗಿ ಮುಗಿಸಿರುವ ಚಿತ್ರತಂಡ ಎರಡು ಹಾಡುಗಳನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

  ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಬ್ರೇಕ್ ತೆಗೆದುಕೊಂಡಿದ್ದ ಆಚಾರ್ಯ ಜುಲೈ ಎರಡನೇ ವಾರದಲ್ಲಿ ಕೊನೆಯ ಹಂತದ ಶೂಟಿಂಗ್ ಆರಂಭಿಸಿತ್ತು. ರಾಮ್ ಚರಣ್ ತೇಜ ಅವರ ಹೊಸ ಪೋಸ್ಟರ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಅಂತಿಮ ಭಾಗದ ಚಿತ್ರೀಕರಣ ಶುರು ಮಾಡಿದ್ದರ ಕುರಿತು ಮಾಹಿತಿ ನೀಡಿತ್ತು.

  'ಆಚಾರ್ಯ' ಕೊನೆಯ ಹಂತದ ಶೂಟಿಂಗ್ ಪ್ರಾರಂಭ'ಆಚಾರ್ಯ' ಕೊನೆಯ ಹಂತದ ಶೂಟಿಂಗ್ ಪ್ರಾರಂಭ

  ಸುಮಾರು 90 ರಷ್ಟು ಚಿತ್ರೀಕರಣ ಲಾಕ್‌ಡೌನ್‌ಗೆ ಮುಂಚಿತವಾಗಿಯೇ ಮುಗಿದಿತ್ತು. ಬಾಕಿ ಉಳಿದಿದ್ದ ಶೂಟಿಂಗ್ ಈಗ ಸಂಪೂರ್ಣವಾಗಿ ಮುಗಿಸಿದೆ. ಆಗಸ್ಟ್ 4 ರಂದು 'ಆಚಾರ್ಯ' ಟಾಕಿ ಪೋಷನ್ ಮುಗಿಸಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದು, ಜೊತೆಗೆ ಚಿರಂಜೀವಿ ಮತ್ತು ರಾಮ್ ಚರಣ್ ಒಟ್ಟಿಗೆ ಕುಳಿತುಕೊಂಡಿರುವ ಮೇಕಿಂಗ್ ಫೋಟೋವೊಂದನ್ನು ಶೇರ್ ಮಾಡಿದೆ.

  'ಆಚಾರ್ಯ' ಔಟ್ ಅಂಡ್ ಔಟ್ ಆಕ್ಷನ್ ಎಂಟರ್‌ಟೈನ್‌ಮೆಂಟ್. ಮೆಗಾಸ್ಟಾರ್ ಚಿರಂಜೀವಿ ನಾಯಕರಾಗಿದ್ದು, ರಾಮ್ ಚರಣ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಕಾಜಲ್ ಅಗರ್‌ವಾಲ್, ಪೂಜಾ ಹೆಗ್ಡೆ, ಸೋನು ಸೂದ್ ಸೇರಿದಂತೆ ಹಲವರು ನಟಿಸಿದ್ದಾರೆ. ಸ್ವತಃ ರಾಮ್ ಚರಣ್ ಈ ಚಿತ್ರ ನಿರ್ಮಾಣ ಮಾಡಿದ್ದು, ಕೊರಟಾಲ ಶಿವ ನಿರ್ದೇಶನ ಮಾಡ್ತಿದ್ದಾರೆ. ಇನ್ನು ಮಣಿ ಶರ್ಮಾ ಸಂಗೀತ ಒದಗಿಸಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿ 'ಲೂಸಿಫರ್'ನಲ್ಲಿ ಬಾಲಿವುಡ್‌ನ ಖ್ಯಾತ ನಟಿಮೆಗಾಸ್ಟಾರ್ ಚಿರಂಜೀವಿ 'ಲೂಸಿಫರ್'ನಲ್ಲಿ ಬಾಲಿವುಡ್‌ನ ಖ್ಯಾತ ನಟಿ

  'ಆಚಾರ್ಯ' ಬಿಡುಗಡೆ ಬಗ್ಗೆ ಕುತೂಹಲ ಹೆಚ್ಚಿದೆ. ಈಗಾಗಲೇ ಸ್ಟಾರ್ ನಟರ ಚಿತ್ರಗಳು ಒಂದೊಂದೇ ರಿಲೀಸ್ ದಿನಾಂಕ ಪ್ರಕಟಿಸುತ್ತಿದೆ. ಆಚಾರ್ಯ ಯಾವ ದಿನಕ್ಕೆ ಬರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಈ ಮುಂಚೆ ಮೇ 13ಕ್ಕೆ ರಿಲೀಸ್ ಮಾಡುವುದಾಗಿ ಪ್ರಕಟಿಸಿಕೊಂಡಿತ್ತು. ಆದರೆ, ಕೋವಿಡ್ ಎರಡನೇ ಅಲೆ ಹಿನ್ನೆಲೆ ಅದು ಸಾಧ್ಯವಾಗಲಿಲ್ಲ.

  Chiranjeevi Starrer Acharya Movie Talkie Positions Completed

  ಈಗ ತೆರೆಗೆ ಬರಲು ಸಜ್ಜಾಗಿದ್ದು, ರಿಲೀಸ್ ಕುರಿತು ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಕಾತುರ ಹೆಚ್ಚಿದೆ. ಏಕಂದ್ರೆ, ದಸರಾ ಹಬ್ಬ, ದೀಪಾವಳಿ ಹಬ್ಬ, ಕ್ರಿಸ್‌ಮಸ್ ಹಾಗೂ ಸಂಕ್ರಾಂತಿ ಹಬ್ಬಕ್ಕೆ ನಿರೀಕ್ಷೆಯ ಚಿತ್ರಗಳು ಟವಲ್ ಹಾಕಿ ಕುಳಿತಿವೆ. ಈ ನಿಟ್ಟಿನಲ್ಲಿ ಆಚಾರ್ಯ ಯಾವ ದಿನವನ್ನು ಫಿಕ್ಸ್ ಮಾಡಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

  ಆರ್‌ಆರ್‌ಆರ್ ಚಿತ್ರದಲ್ಲಿ ಮೆಗಾಪುತ್ರ

  ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ ತೇಜ ಅವರದ್ದು ಕೇವಲ ಅತಿಥಿ ಪಾತ್ರ. ಮತ್ತೊಂದೆಡೆ ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಆರ್‌ಆರ್‌ಆರ್' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು, ಈ ಚಿತ್ರವೂ ಶೂಟಿಂಗ್ ಬಹುತೇಕ ಮುಗಿಸಿದೆ. ಇತ್ತೀಚಿಗಷ್ಟೆ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿ ಗಮನ ಸೆಳೆದಿತ್ತು. ಸದ್ಯಕ್ಕೆ 'ಆರ್ ಆರ್ ಆರ್' ಸಿನಿಮಾದ ರಿಲೀಸ್ ದಿನಾಂಕವೂ ಪ್ರಕಟಗೊಂಡಿಲ್ಲ. ಆಚಾರ್ಯ ಎಂಟ್ರಿ ದಿನವೂ ಘೋಷಣೆಯಾಗಿಲ್ಲ.

  ಲೂಸಿಫರ್ ರಿಮೇಕ್‌ನಲ್ಲಿ ಮೆಗಾಸ್ಟಾರ್

  ಆಚಾರ್ಯ ಸಿನಿಮಾ ಮುಗಿದ ಮೇಲೆ ಮೆಗಾಸ್ಟಾರ್ ಚಿರಂಜೀವಿ 'ಲೂಸಿಫರ್' ರಿಮೇಕ್‌ನಲ್ಲಿ ನಟಿಸಲಿದ್ದಾರೆ. ಮಲಯಾಳಂ ಇಂಡಸ್ಟ್ರಿಯಲ್ಲಿ ದಾಖಲೆ ಬರೆದಿದ್ದ 'ಲೂಸಿಫರ್' ಚಿತ್ರಕ್ಕೆ ಚಿರು ಅಸ್ತು ಎಂದಿದ್ದು, ಪೂರ್ವ ತಯಾರಿ ನಡೆದಿದೆ. ಆಚಾರ್ಯ ಮುಗಿಯುತ್ತಿದ್ದಂತೆ ಈ ಪ್ರಾಜೆಕ್ಟ್ ಶುರು ಮಾಡಲಿದ್ದಾರೆ. ಮೋಹನ್ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ವಿದ್ಯಾ ಬಾಲನ್ ಅಥವಾ ತ್ರಿಷಾ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆಯಂತೆ.

  ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಚಿತ್ರ 'ಲೂಸಿಫರ್'. ಖ್ಯಾತ ನಟ ಮೋಹನ್ ಲಾಲ್ ನಾಯಕರಾಗಿ ನಟಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು.

  English summary
  Megastar Chiranjeevi starrer Acharya movie talkie positions completed. only two songs remain to be filmed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X