For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿಯ 'ಅಚಾರ್ಯ' ಟೀಸರ್ ಬಂತು: ರಿಲೀಸ್ ಬಗ್ಗೆ ಮಾಹಿತಿ ಸಿಕ್ತು

  |

  ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಆಚಾರ್ಯ ಸಿನಿಮಾ ನೋಡಲು ಭಾರಿ ನಿರೀಕ್ಷೆಗಳೊಂದಿಗೆ ಕಾಯುತ್ತಿರುವ ಅಭಿಮಾನಿಗಳಿಗೆ ಈ ಟೀಸರ್ ಭರ್ಜರಿ ರಸದೌತಣ ನೀಡಿದೆ.

  ಚಿರು ಎಂಟ್ರಿ ಹಾಗೂ ಜಬರ್‌ದಸ್ತ್ ಆಕ್ಷನ್ ದೃಶ್ಯಗಳು ಥ್ರಿಲ್ ಹೆಚ್ಚಿಸುತ್ತದೆ. ಟೀಸರ್‌ನಲ್ಲಿ ಬರುವ ಒಂದೊಂದು ದೃಶ್ಯಗಳು ಬಹಳ ಅದ್ಧೂರಿಯಾಗಿ ಕಂಡಿದೆ. ದುಬಾರಿ ಹಾಗೂ ಕಲರ್‌ಫುಲ್ ಸೆಟ್‌ ನೋಡುಗರ ಕಣ್ಮನ ಸೆಳೆಯುತ್ತದೆ.

  'ಆಚಾರ್ಯ' ಸಿನಿಮಾದಲ್ಲಿ ತಮ್ಮ ಪಾತ್ರದ ಗುಟ್ಟು ಬಿಟ್ಟುಕೊಟ್ಟ ರಾಮ್ ಚರಣ್ ತೇಜ

  ಆಚಾರ್ಯ ಟೀಸರ್‌ನ ಇನ್ನೊಂದು ಹೈಲೈಟ್ ಅಂದ್ರೆ ರಾಮ್ ಚರಣ್ ತೇಜ ಹಿನ್ನೆಲೆ ಧ್ವನಿ. ಆಚಾರ್ಯ ಟೀಸರ್‌ನ ಆರಂಭದಲ್ಲಿ ರಾಮ್ ಚರಣ್ ವಾಯ್ಸ್ ನೀಡಿದ್ದಾರೆ. ಅದರ ಜೊತೆಗೆ ಚಿರಂಜೀವಿಯ ಭರ್ಜರಿ ಡೈಲಾಗ್ ಸಹ ಇದೆ.

  ಮಣಿ ಶರ್ಮಾ ಸಂಗೀತ ನಿರ್ದೇಶನವಿದ್ದು, ಟೀಸರ್‌ನಲ್ಲಿ ಹಿನ್ನೆಲೆ ಸಂಗೀತ ಸಖತ್ ಸದ್ದು ಮಾಡಿದೆ. ಇನ್ನುಳಿದಂತೆ ಕೊರಟಲಾ ಶಿವ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ನಿರಂಜನ್ ರೆಡ್ಡಿ ಮತ್ತು ರಾಮ್ ಚರಣ್ ಬಂಡವಾಳ ಹಾಕಿದ್ದಾರೆ.

  ಆಚಾರ್ಯ ಸಿನಿಮಾ ಯಾವಾಗ ರಿಲೀಸ್ ಎನ್ನುವುದಕ್ಕೂ ಉತ್ತರ ಸಿಕ್ಕಿದೆ. ಬೇಸಿಗೆವೊತ್ತಿಗೆ ಆಚಾರ್ಯ ತೆರೆಗೆ ಬರಲಿದೆ ಎಂದು ಸುಳಿವು ನೀಡಿದ್ದಾರೆ. ಆದರೆ, ನಿಖರವಾದ ದಿನಾಂಕ ಹೇಳಿಲ್ಲ.

  ಚಿರಂಜೀವಿ ಜೊತೆ ಕಾಜಲ್ ಅಗರ್‌ವಾಲ್ ನಾಯಕಿಯಾಗಿ ನಟಿಸಿದ್ದು, ರಾಮ್ ಚರಣ್ ತೇಜ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ತೇಜಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

  English summary
  Megastar Chiranjeevi Starrer Acharya Movie Teaser Released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X