For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಹೊಸ ಸಿನಿಮಾಕ್ಕೆ ಇಬ್ಬರು ನಾಯಕಿಯರು

  |

  ನಟ ಚಿರಂಜೀವಿ ಪ್ರಸ್ತುತ 'ಆಚಾರ್ಯ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸಿನಿಮಾದ ಚಿತ್ರೀಕರಣವು ಅಂತ್ಯಕ್ಕೆ ಬಂದಿದೆ.

  ಈ ಹಂತದಲ್ಲಿ ಚಿರಂಜೀವಿ ತಮ್ಮ ಮುಂದಿನ ಸಿನಿಮಾದ ಬಗ್ಗೆ ಗಮನ ಹರಿಸಿದ್ದು, ಚಿರಂಜೀವಿ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಕುತೂಹಲ ಏರ್ಪಟ್ಟಿದೆ.

  'ಆಚಾರ್ಯ' ಸಿನಿಮಾದಲ್ಲಿ ಬಂಡಾಯಗಾರನ ಪಾತ್ರದಲ್ಲಿ ನಟಿಸಿರುವ ನಟ ಚಿರಂಜೀವಿ ತಮ್ಮ ಮುಂದಿನ ಸಿನಿಮಾದಲ್ಲಿ ರಾಜಕಾರಣಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಮಲಯಾಳಂ ಸಿನಿಮಾ ಒಂದರ ರೀಮೇಕ್ ಆಗಿರಲಿದ್ದು, ಸಿನಿಮಾದ ಬಗ್ಗೆ ಹಲವು ಸುದ್ದಿಗಳು ಈಗಾಗಲೇ ಹರಿದಾಡುತ್ತಿವೆ.

  ಚಿರಂಜೀವಿ ಮುಂದಿನ ಸಿನಿಮಾಕ್ಕೆ 'ಗಾಡ್‌ ಫಾದರ್' ಹೆಸರನ್ನು ಅಂತಿಮಗೊಳಿಸಲಾಗಿದ್ದು, ಇದೀಗ ಸಿನಿಮಾದ ನಾಯಕಿಯರನ್ನು ಸಹ ಅಂತಿಮಗೊಳಿಸಲಾಗಿದೆ.

  ಚಿರಂಜೀವಿ ನಟಿಸುತ್ತಿರುವ ಮುಂದಿನ ಸಿನಿಮಾದಲ್ಲಿ ಇಬ್ಬರು ನಟಿಯರು ಮುಖ್ಯ ಪಾತ್ರದಲ್ಲಿರಲಿದ್ದಾರೆ. ಚಿರಂಜೀವಿ ಜೊತೆಗೆ ದಶಕಗಳ ಹಿಂದೆ ನಟಿಸಿರುವ ನಟಿ ಸುಹಾಸಿನಿ ಹಾಗೂ ಈ ಹಿಂದಿನ ಸಿನಿಮಾದಲ್ಲಿ ಚಿರಂಜೀವಿಗೆ ಜೊತೆಯಾಗಿದ್ದ ನಟಿ ನಯನತಾರಾ ಇಬ್ಬರೂ ಚಿರಂಜೀವಿ ಮುಂದಿನ ಸಿನಿಮಾದ ಪ್ರಮುಖ ನಟಿಯರು.

  ಹಿರಿಯ ನಟಿ, ಕಿರಿಯ ನಟಿ

  ಹಿರಿಯ ನಟಿ, ಕಿರಿಯ ನಟಿ

  ಮಲಯಾಳಂನಲ್ಲಿ ಮೋಹನ್‌ಲಾಲ್ ನಟಿಸಿದ್ದ 'ಲುಸೀಫರ್' ಸಿನಿಮಾದ ರೀಮೇಕ್‌ನಲ್ಲಿ ಚಿರಂಜೀವಿ ನಟಿಸುತ್ತಿದ್ದು, ಸಿನಿಮಾದಲ್ಲಿ ನಾಯಕ ನಟನ ಸಹೋದರಿಯ ಪಾತ್ರವೂ ಬಹಳ ಮಹತ್ವದ್ದಾಗಿದೆ. ಹಾಗಾಗಿ ಆ ಪಾತ್ರಕ್ಕೆ ಹಿರಿಯ, ಅನುಭವಿ ನಟಿ ಸುಹಾಸಿನಿಯನ್ನು ಕರೆತರಲಾಗಿದೆ. ಇನ್ನು ಚಿರಂಜೀವಿ ಪತ್ನಿ ಅಥವಾ ಪ್ರೇಯಸಿ ಪಾತ್ರಕ್ಕೆ ನಯನತಾರಾ ಅವರನ್ನು ಕರೆತರಲಾಗಿದೆ.

  ಮಲಯಾಳಂನಲ್ಲಿ ಸಹೋದರಿ ಪಾತ್ರವಷ್ಟೆ ಇತ್ತು

  ಮಲಯಾಳಂನಲ್ಲಿ ಸಹೋದರಿ ಪಾತ್ರವಷ್ಟೆ ಇತ್ತು

  ಮಲಯಾಳಂ 'ಲುಸೀಫರ್' ಸಿನಿಮಾದಲ್ಲಿ ನಾಯಕಿ ಪಾತ್ರವಿರಲಿಲ್ಲ ಬದಲಿಗೆ ಸಹೋದರಿ ಪಾತ್ರವಷ್ಟೆ ಇತ್ತು. ಆದರೆ ತೆಲುಗು ಸಿನಿಮಾದಲ್ಲಿ ನಾಯಕಿ ಪಾತ್ರವನ್ನು ಸೃಷ್ಟಿಸಲಾಗಿದೆ. 'ಗಾಡ್ ಫಾದರ್' ಸಿನಿಮಾವನ್ನು ವಿವಿ ವಿನಾಯಕ್ ನಿರ್ದೇಶಿಸುತ್ತಾರೆ ಎನ್ನಲಾಗಿತ್ತು. ಅದಕ್ಕೂ ಮುನ್ನಾ ಮತ್ತೊಬ್ಬ ನಿರ್ದೇಶಕನ ಹೆಸರು ಕೇಳಿ ಬಂದಿತ್ತು, ಕೊನೆಗೆ ಸಿನಿಮಾವನ್ನು ತಮಿಳಿನ ಮೋಹನ್ ರಾಜ ನಿರ್ದೇಶನ ಮಾಡುತ್ತಿದ್ದಾರೆ.

  ವಿಶೇಷ ಪಾತ್ರದಲ್ಲಿ ನಟ ಸಲ್ಮಾನ್ ಖಾನ್

  ವಿಶೇಷ ಪಾತ್ರದಲ್ಲಿ ನಟ ಸಲ್ಮಾನ್ ಖಾನ್

  ತೆಲುಗು ಸಿನಿಮಾದ ಮತ್ತೊಂದು ವಿಶೇಷವೆಂದರೆ ಈ ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಲಿದ್ದಾರೆ. ಮಲಯಾಳಂನ 'ಲುಸೀಫರ್' ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಸಲ್ಮಾನ್ ಖಾನ್ ನಿರ್ವಹಿಸಲಿದ್ದು, ಸಲ್ಮಾನ್ ಖಾನ್ ನಟಿಸುವ ದೃಶ್ಯಗಳನ್ನು ಭಾರಿ ಅದ್ಧೂರಿಯಾಗಿ ನಿರ್ಮಿಸಲಾಗುತ್ತದೆಯಂತೆ.

  ದೊಡ್ಡ ಸಂಭಾವನೆ ಕೇಳಿದ ಸೊನಾಕ್ಷಿ

  ದೊಡ್ಡ ಸಂಭಾವನೆ ಕೇಳಿದ ಸೊನಾಕ್ಷಿ

  ಇದೇ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್‌ನ ಸೊನಾಕ್ಷಿ ಸಿನ್ಹಾ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ನಟಿ ಸೋನಾಕ್ಷಿ ತೆಲುಗು ಸಿನಿಮಾದಲ್ಲಿ ನಟಿಸಲು ಭಾರಿ ದೊಡ್ಡ ಸಂಭಾವನೆ ಕೇಳಿದ್ದರಿಂದ ನಿರ್ದೇಶಕರು ನಯನತಾರಾ ಅನ್ನೇ ಫೈನಲ್ ಮಾಡಿದ್ದಾರೆ. ಸೊನಾಕ್ಷಿ ಸಿನ್ಹಾ ಈ ಹಿಂದೆ ರಜನೀಕಾಂತ್ ನಟಿಸಿ ಕನ್ನಡಿಗ ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದ 'ಲಿಂಗ' ಸಿನಿಮಾದಲ್ಲಿ ನಟಿಸಿದ್ದರು. ಚಿರಂಜೀವಿಯ ಆಪ್ತ ಸ್ನೇಹಿತ ಶತೃಘ್ನ ಸಿನ್ಹಾ ಮಗಳು ಸೊನಾಕ್ಷಿ ಸಿನ್ಹಾ.

  ಚಿರು ಅಭಿಮಾನಿಗಳಿಗೆ ಇಷ್ಟವಾಗುತ್ತದೆಯಾ?

  ಚಿರು ಅಭಿಮಾನಿಗಳಿಗೆ ಇಷ್ಟವಾಗುತ್ತದೆಯಾ?

  'ಲೂಸಿಫರ್' ಸಿನಿಮಾವು ರಾಜಕೀಯ, ಮಾಫಿಯಾ ಹಾಗೂ ಕುಟುಂಬ ಪ್ರೇಮದ ಕತೆಯಾಗಿದೆ. ಸಿನಿಮಾದಲ್ಲಿ ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ನಾಯಕಿ ಇಲ್ಲ. ಆದರೆ ನಾಯಕನ ತಂಗಿಯ ಪಾತ್ರ ಬಹಳ ಮುಖ್ಯದಾಗಿದ್ದು, ತೆಲುಗಿನಲ್ಲಿ ಈ ಪಾತ್ರಕ್ಕಾಗಿ ಮೊದಲಿಗೆ ಜೆನಿಲಿಯಾ ಅನ್ನು ಕೇಳಲಾಗಿತ್ತು ಆದರೆ ಅವರು ನಿರಾಕರಿಸಿದ ಕಾರಣ ಈ ಅವಕಾಶ ಮತ್ತೊಬ್ಬ ಸ್ಟಾರ್ ನಟಿಗೆ ಹೋಗಿದೆ ಎನ್ನಲಾಗುತ್ತಿದೆ. ಸ್ವತಃ ರಾಜಕಾರಣಿಯಾಗಿರುವ ಚಿರಂಜೀವಿಗೆ ಈ ಸಿನಿಮಾದ ಕತೆಯು ಹೇಳಿ ಮಾಡಿಸಿದ್ದಾಗಿದ್ದು, ಸಿನಿಮಾವನ್ನು ಚಿರಂಜೀವಿ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.

  English summary
  Megastar Chiranjeevi's new movie will have two heroines. One is senior actress Suhasini and another one is Nayantara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X