For Quick Alerts
  ALLOW NOTIFICATIONS  
  For Daily Alerts

  ಜಪಾನ್‌ನಲ್ಲೂ ಪ್ರಭಾಸ್ ಹವಾ: ಅಭಿಮಾನಿಗಳ ಕ್ರೇಜ್ ನೋಡಿ

  |

  ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಖ್ಯಾತಿ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಹರಡಿದೆ.

  ಬ್ಲಾಕ್ ಟಿಕೆಟ್ ಮಾರಿ ಸೈಟ್ ತಗೊಂಡಿದ್ರು ಅಭಿಮಾನಿಗಳು | Filmibeat Kannada

  ಭಾರತದಲ್ಲಿ ಸೂಪರ್ ಹಿಟ್ ಆದ ಬಾಹುಬಲಿ ಸಿನಿಮಾ, ವಿದೇಶದ ಹಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಿ ಹಿಟ್ ಆಯಿತು. ಕೆಲವು ದೇಶಗಳಲ್ಲಿ ಟಿವಿಯಲ್ಲಿ ಸಹ ಪ್ರಸಾರವಾಯಿತು ಬಾಹುಬಲಿ. ಹಾಗಾಗಿ ವಿದೇಶಗಳಲ್ಲಿಯೂ ಪ್ರಭಾಸ್ ಕ್ರೇಜ್ ಹೆಚ್ಚಾಗಿದೆ.

  ನಟ ಪ್ರಭಾಸ್ ಅವರ ಈ ನಿರ್ಧಾರದಿಂದ ಅಸಮಾಧಾನಗೊಂಡಿರುವ ಕರಣ್ ಜೋಹರ್ನಟ ಪ್ರಭಾಸ್ ಅವರ ಈ ನಿರ್ಧಾರದಿಂದ ಅಸಮಾಧಾನಗೊಂಡಿರುವ ಕರಣ್ ಜೋಹರ್

  ಬಾಲಿವುಡ್ ಸಿನಿಮಾದ ಉತ್ತಮ ಮಾರುಕಟ್ಟೆಯೆಂದೇ ಕರೆಸಿಕೊಳ್ಳುವ ಜಪಾನ್ ನಲ್ಲಿ ಪ್ರಭಾಸ್ ಕ್ರೇಜ್ ಎಷ್ಟಿದೆಯೆಂದರೆ ಅಲ್ಲಿನ ಚಾಕಲೋಟೆ ಒಂದಕ್ಕೆ ಪ್ರಭಾಸ್ ಹೆಸರಿಡಲಾಗಿದೆ.

  'ಡಾರ್ಲಿಂಗ್ ಪ್ರಭಾಸ್' ಹೆಸರಿನ ಚಾಕಲೇಟ್

  'ಡಾರ್ಲಿಂಗ್ ಪ್ರಭಾಸ್' ಹೆಸರಿನ ಚಾಕಲೇಟ್

  ಜಪಾನ್‌ನಲ್ಲಿನ ಪ್ರಭಾಸ್ ಅಭಿಮಾನಿಗಳು 'ಡಾರ್ಲಿಂಗ್ ಪ್ರಭಾಸ್' ಎಂದು ಹೆಸರಿಟ್ಟು ಮಿಂಟ್ ಚಾಕಲೇಟ್ ಅನ್ನು ಮಾರುಕಟ್ಟೆಗೆ ತಂದಿದ್ದಾರೆ. ಈ ಚಾಕಲೇಟ್‌ಗಳು ಚೆನ್ನಾಗಿ ಮಾರಾಟವಾಗುತ್ತಿವೆಯಂತೆ.

  ಚೀನಾದಲ್ಲೂ ಇದ್ದಾರೆ ಪ್ರಭಾಸ್ ಅಭಿಮಾನಿಗಳು

  ಚೀನಾದಲ್ಲೂ ಇದ್ದಾರೆ ಪ್ರಭಾಸ್ ಅಭಿಮಾನಿಗಳು

  ಜಪಾನ್ ಮಾತ್ರವಲ್ಲ ಚೀನಾದಲ್ಲೂ ಪ್ರಭಾಸ್‌ ಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಚೀನಾದಲ್ಲಿ ಪ್ರಭಾಸ್ ಚಿತ್ರವುಳ್ಳ ಟೀ-ಶರ್ಟ್‌ಗಳು, ಕ್ಯಾಪ್‌ಗಳು, ಕಾರ್‌ಸ್ಟಿಕ್ಕರ್‌ಗಳು ಸಖತ್ ಜನಪ್ರಿಯ.

  'ಆದಿಪುರುಷ'ನಾದ ಪ್ರಭಾಸ್ ಗೆ ವಿಲನ್ ಆಗ್ತಾರಾ ಬಾಲಿವುಡ್ ನ ಈ ಖ್ಯಾತ ನಟ?'ಆದಿಪುರುಷ'ನಾದ ಪ್ರಭಾಸ್ ಗೆ ವಿಲನ್ ಆಗ್ತಾರಾ ಬಾಲಿವುಡ್ ನ ಈ ಖ್ಯಾತ ನಟ?

  ಬಾಹುಬಲಿ ಪಾತ್ರದ ಹೆಸರಿನ ತಿಂಡಿಗಳ ಮಾರಾಟ

  ಬಾಹುಬಲಿ ಪಾತ್ರದ ಹೆಸರಿನ ತಿಂಡಿಗಳ ಮಾರಾಟ

  ಚೀನಾದಲ್ಲಿ ಒಂದು ಹೋಟೆಲ್‌ನಲ್ಲಿ ಬಾಹುಬಲಿಯ ಪಾತ್ರಗಳ ಹೆಸರಿನ ತಿಂಡಿಗಳನ್ನು ಸಹ ಮಾರಾಟ ಮಾಡಿದ್ದಿದ್ದು ವರದಿಯಾಗಿತ್ತು. ಚೀನಾದಲ್ಲಿ ರಜನೀಕಾಂತ್, ಶಾರುಖ್‌ಖಾನ್, ಅಮೀರ್‌ ಖಾನ್‌ಗೂ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

  ಸುದೀಪ್ ಚಿತ್ರ ಬೆಂಕಿಪೊಟ್ಟಣದ ಮೇಲೆ

  ಸುದೀಪ್ ಚಿತ್ರ ಬೆಂಕಿಪೊಟ್ಟಣದ ಮೇಲೆ

  ಈಗ ಸಿನಿಮಾ ಬಿಡುಗಡೆ ಆದಾಗ ಸುದೀಪ್‌ಗೆ ಸಹ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಸುದೀಪ್ ಚಿತ್ರವಿರುವ ಬೆಂಕಿಪಟ್ಟಣಗಳು ವಿದೇಶದಲ್ಲಿ ಮಾರಾಟವಾಗಿದ್ದನ್ನು ಸ್ವತಃ ಸುದೀಪ್‌ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

  English summary
  Prabhas fans in Japan selling chocolate in Darling Prabhas name in Japan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X