Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಬಜೆಟ್ ಇದೆ ಅಂತ ಹೆಲಿಕ್ಯಾಪ್ಟರ್ ತಂದ್ರೆ ಆಗಲ್ಲ" ಎಂದ ರಿಷಬ್: 'ಕಾಂತಾರ' ಬಜೆಟ್‌ಗೆ ಮೌಳಿ ಏನಂದ್ರು?
'ಕಾಂತಾರ' ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ರಿಷಬ್ ಶೆಟ್ಟಿ ಮಾಸ್ಟರ್ ಪೀಸ್ ಬಗ್ಗೆ ಮಾತನಾಡುವವರ ಸಂಖ್ಯೆ ಬೆಳೆಯುತ್ತಲೇ ಇದೆ. ಇದೀಗ ಖ್ಯಾತ ನಿರ್ದೇಶಕ ಎಸ್. ಎಸ್ ರಾಜಮೌಳಿ ಸಹ 'ಕಾಂತಾರ' ಚಿತ್ರದಿಂದ ಪಾಠ ಕಲಿತ್ತಿದ್ದಾಗಿ ಹೇಳಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿದೆ. ಅಕ್ಕಪಕ್ಕದ ಇಂಡಸ್ಟ್ರಿ ಮಂದಿ ಕೂಡ ಈ ಸಿನಿಮಾ ನೋಡಿ ಬೆರಗಾಗಿದ್ದಾರೆ. ಕೇವಲ 16 ಕೋಟಿ ರೂ. ಬಜೆಟ್ ಸಿನಿಮಾ ಈ ಪಾಟಿ ಸದ್ದು ಮಾಡುತ್ತಿರುವುದು 200, 300, 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮಾಡುವವರ ನಿದ್ದೆ ಕೆಡಿಸಿದೆ. ನೂರಾರು ಕೋಟಿ ಕಲೆಕ್ಷನ್ ಮಾಡಲು ನೂರಾರು ಕೋಟಿ ಖರ್ಚು ಮಾಡಬೇಕು ಎನ್ನುವ ಮಾತನ್ನು 'ಕಾಂತಾರ' ಸುಳ್ಳಾಗಿಸಿದೆ.
'ಕಾಂತಾರ
2'
ಸೆಟ್ಟೇರುವ
ಮುನ್ನ
ರಿಷಬ್
ಶೆಟ್ಟಿಯ
'ಕಾಂತಾರ'
10
ದಾಖಲೆಗಳನ್ನ
ಒಮ್ಮೆ
ನೋಡಿಬಿಡಿ!
ಒಂದು ಮೀಡಿಯಂ ಬಜೆಟ್ ಸಿನಿಮಾ 400 ಕೋಟಿ ರೂ. ಗಳಿಸೋದು ಅಂದರೆ ತಮಾಷೆ ಮಾತಲ್ಲ. ಪ್ಯಾನ್ ಇಂಡಿಯಾ ರಿಲೀಸ್ ಮಾಡದಿದ್ದರೂ ತಾನಾಗಿಯೇ ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿ ಸೂಪರ್ ಹಿಟ್ ಆಗಿದೆ. ಇದೇ ವಿಚಾರ ರಾಜಮೌಳಿಯಂತಹ ಸ್ಟಾರ್ ನಿರ್ದೇಶಕರನ್ನು ಯೋಚನೆಗೆ ದೂಡಿದೆ. ಪ್ರೇಕ್ಷಕರನ್ನು ಸೆಳೆಯಲು ಭಾರೀ ಬಜೆಟ್ ಬೇಕಾಗಿಲ್ಲ ಎನ್ನುವ ಸತ್ಯವನ್ನು ಮತ್ತೊಮ್ಮೆ ಕಂಡಕೊಳ್ಳುವಂತೆ ಮಾಡಿದೆ.

'ಕಾಂತಾರ' ನೋಡಿ ಪಾಠ ಕಲಿತ ಮೌಳಿ
ಫಿಲ್ಮ್ ಕಂಪ್ಯಾನಿಯನ್ ಸಂದರ್ಶನದಲ್ಲಿ ಮಾತನಾಡಿರುವ ರಾಜಮೌಳಿ "ದೊಡ್ಡ ಸಿನಿಮಾಗಳು ಬರುತ್ತರುವ ಹೊತ್ತಲ್ಲಿ ಕಾಂತಾರ ಸಿನಿಮಾ ಬಂದು ಅಚ್ಚರಿ ಮೂಡಿಸುತ್ತದೆ. ಸಿನಿಮಾಗಳು ಹೆಚ್ಚು ಹೆಚ್ಚು ಕಲೆಕ್ಷನ್ ಮಾಡಲು ಹೆಚ್ಚು ಬಜೆಟ್, ದೊಡ್ಡ ಸ್ಕೇಲ್ ಬೇಕಾಗಿಲ್ಲ ಎಂದು ತೋರಿಸುತ್ತದೆ. 'ಕಾಂತಾರ' ಸಿನಿಮಾ ಮಾಡಿರುವ ಸಾಧನೆಯೇ ಇದಕ್ಕೆ ಉತ್ತಮ ಉದಾಹರಣೆ' ಎಂದು ಮೌಳಿ ಹೇಳಿದ್ದಾರೆ.

ಮೌಳಿ ಮಾತಿಗೆ ದನಿಗೂಡಿಸಿದ ಕಮಲ್
"ಪ್ರೇಕ್ಷಕರು ಸಿನಿಮಾ ನೋಡಿ ಎಕ್ಸೈಟ್ ಆಗಿದ್ದಾರೆ. ಅದಕ್ಕೆ ಏನು ಮಾಡಬೇಕು ಎನ್ನುವುದನ್ನು ನಾವು ಫಿಲ್ಮ್ ಮೇಕರ್ಸ್ ಚಿಂತಿಸಬೇಕಿದೆ. ಸಿನಿಮಾ ಮಾಡುವ ರೀತಿಯ ಬಗ್ಗೆ ಮರುಚಿಂತನೆ ನಡೆಸಬೇಕಿದೆ. ಯಾಕಂದರೆ ಕಡಿಮೆ ಬಜೆಟ್ಟಿನ ಕಾಂತಾರ ಅದನ್ನು ಮಾಡಿ ತೋರಿಸಿದೆ" ಎಂದು ರಾಜಮೌಳಿ ಹೇಳಿದ್ದು, ಇದಕ್ಕೆ ತಮಿಳು ನಟ ಕಮಲ್ ಹಾಸನ್ ಕೂಡ ದನಿಗೂಡಿಸಿದ್ದಾರೆ.

ಹೆಲಿಕ್ಯಾಪ್ಟರ್ ತಂದ್ರೆ ಆಗಲ್ಲ- ರಿಷಬ್
ಇನ್ನು ಆಜ್ ತಜ್ ವಾಹಿನಿಯ 'ಅಜೆಂಡಾ ಆಜ್ ತಕ್ 2022' ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ ಕೂಡ ಸಿನಿಮಾ ಬಜೆಟ್ ಬಗ್ಗೆ ಮಾತನಾಡಿದ್ದಾರೆ. ನಿರೂಪಕಿ ಕಡಿಮೆ ಬಜೆಟ್‌ನಲ್ಲಿ 'ಕಾಂತಾರ' ಎನ್ನುವ ಅದ್ಭುತ ಸಿನಿಮಾ ಮಾಡಿ ಗೆದ್ದಿದ್ದೀರ. ಮುಂದೆ ಹೇಗೆ ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿ "ಕಥೆಗೆ ಎಷ್ಟು ಬೇಕೋ ಅಷ್ಟು ಹಣ ಹಾಕಬೇಕು. ಒಂದು ಕ್ಲೋಸ್‌ಅಪ್ ಶಾಟ್ ತೆಗೆಯಲು ಬಜೆಟ್ ಇದೆ ಎನ್ನುವ ಕಾರಣಕ್ಕೆ ಹೆಲಿಕ್ಯಾಪ್ಟರ್ ತಂದರೆ ಏನು ಮಾಡಲು ಸಾಧ್ಯ? ಎಂದು ನಗೆಚಟಾಕಿ ಹಾರಿಸಿದ್ದಾರೆ.

'ಕಾಂತಾರ' ಇಂಗ್ಲೀಷ್‌ಗೆ ಡಬ್
ಡಿವೈನ್ ಬ್ಲಾಕ್‌ಬಸ್ಟರ್ 'ಕಾಂತಾರ' ಸಿನಿಮಾ ಕನ್ನಡ ಬಿಟ್ಟು ಈಗಾಗಲೇ 5 ಭಾಷೆಗಳಿಗೆ ಡಬ್ ಆಗಿ ಸಕ್ಸಸ್ ಕಂಡಿದೆ. ಇತ್ತೀಚೆಗೆ ಹಿಂದಿ ವರ್ಷನ್ ನೆಟ್‌ಫ್ಲಿಕ್ಸ್‌ನಲ್ಲಿ ಸದ್ದು ಮಾಡ್ತಿದೆ. ಇದೀಗ ಚಿತ್ರವನ್ನು ಇಂಗ್ಲೀಷ್ ಭಾಷೆಗೆ ಡಬ್ ಮಾಡುವ ಕೆಲಸಗಳು ನಡೀತಿದೆ. ಮುಂದಿನ ತಿಂಗಳು ಇಂಗ್ಲೀಷ್‌ಗೆ ಡಬ್ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡಲಿದೆ. ಆ ಮೂಲಕ ವಿಶ್ವದಾದ್ಯಂತ 'ಕಾಂತಾರ' ಕಿಚ್ಚು ಹರಡಲಿದೆ.