For Quick Alerts
  ALLOW NOTIFICATIONS  
  For Daily Alerts

  ಜೂ.ಎನ್‌ಟಿಆರ್ ಪರವಾಗಿ ಸರ್ಕಾರಕ್ಕೆ ದಂಡ ಕಟ್ಟಿದ ಅಭಿಮಾನಿ

  |

  ತೆಲುಗಿನ ಖ್ಯಾತ ನಟ ಜೂ.ಎನ್‌ಟಿಆರ್ ಪರವಾಗಿ ನಟನ ಅಭಿಮಾನಿಯೊಬ್ಬ ಸರ್ಕಾರಕ್ಕೆ ದಂಡ ಪಾವತಿಸಿರುವ ಘಟನೆ ನಡೆದಿದೆ. ದಂಡ ಪಾವತಿಸಿದ ಜೂ.ಎನ್‌ಟಿಆರ್ ಅಭಿಮಾನಿ ಬೇಡಿಕೆಯೊಂದನ್ನು ಸಹ ನಟನ ಮುಂದಿಟ್ಟಿದ್ದಾನೆ.

  ಇತ್ತೀಚೆಗೆ ನಟ ಜೂ.ಎನ್‌ಟಿಆರ್ ಕಾರು ಚಲಾಯಿಸುವ ಸಮಯದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದರು. ತೆಲಂಗಾಣ ಪೊಲೀಸರು ಜೂ.ಎನ್‌ಟಿಆರ್ ಗೆ ದಂಡ ವಿಧಿಸಿ ಚಲನ್ ತೆಗೆದಿದ್ದರು.

  ಈ ವಿಷಯ ತಿಳಿದ ಜೂ.ಎನ್‌ಟಿಆರ್ ಅಭಿಮಾನಿಯೊಬ್ಬ ಕೂಡಲೇ ಜೂ.ಎನ್‌ಟಿಆರ್ ಗೆ ವಿಧಿಸಲಾಗಿದ್ದ 1300 ರು. ದಂಡ ಪಾವತಿಸಿದ್ದಾನೆ. ತಾನು ದಂಡ ಪಾವತಿಸಿರುವ ಬಗ್ಗೆ ಚಲನ್ ಸಮೇತ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾನೆ ಅಭಿಮಾನಿ.

  ದಂಡ ಪಾವತಿಸಿರುವ ಬದಲಾಗಿ ಜೂ.ಎನ್‌ಟಿಆರ್ ಇಂದ ಆರ್‌ಆರ್‌ಆರ್ ಸಿನಿಮಾದ ಮೊದಲ ದಿನದ ಮೊದಲ ಶೋ ನ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾನೆ ಆ ಅಭಿಮಾನಿ. ಇದಕ್ಕೆ ನಟನ ಕಡೆಯಿಂದ ಅಥವಾ ಚಿತ್ರತಂಡದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

  ಜಯಶ್ರೀ ಸಾವು, ಪ್ರಶಾಂತ್ ಸಂಬರ್ಗಿ ಪೋಸ್ಟ್ ನೋಡಿ ರೊಚ್ಚಿಗೆದ್ದ ನೆಟ್ಟಿಗರು | Filmibeat Kannada

  ಆದರೆ ಅಭಿಮಾನಿಯ ಸೋಷಿಯಲ್ ಮೀಡಿಯೋ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಜೂ.ಎನ್‌ಟಿಆರ್ ತಮ್ಮ ಅಭಿಮಾನಿಗೆ ಟಿಕೆಟ್ ಕೊಡಿಸಬೇಕು ಎಂದು ಹಲವರು ಒತ್ತಾಯ ಮಾಡಿದ್ದಾರೆ.

  English summary
  A fan paid Jr.NTR's traffic violation fine of rs 1300 and demand RRR movie first day first show ticket.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X