For Quick Alerts
  ALLOW NOTIFICATIONS  
  For Daily Alerts

  ರಾಮ್‌ಚರಣ್ ವಿಷಯದಲ್ಲಿ ಫಿಲಂಫೇರ್ ಯಡವಟ್ಟು: ನೆಟ್ಟಿಗರಿಂದ ತರಾಟೆ

  |

  ಭಾರತೀಯ ಸಿನಿಮಾರಂಗದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಫಿಲಂಫೇರ್‌ ನಟ ರಾಮ್ ಚರಣ್ ವಿಷಯದಲ್ಲಿ ದೊಡ್ಡ ಯಡವಟ್ಟನ್ನೊಂದು ಮಾಡಿದೆ.

  ರನ್ನನ ರಕ್ಷಾಬಂದನ. | Kiccha Sudeep Raksha Bhandan Wishes | Filmibeat Kannada

  ಫಿಲಂಫೇರ್‌ ಟ್ವಿಟ್ಟರ್‌ನಲ್ಲಿ ಖಾತೆಯೊಂದನ್ನು ಹೊಂದಿದ್ದು ಸಿನಿಮಾ ನಟ-ನಟಿಯರಿಗೆ ಸಂಬಂಧಿಸಿದ ಸುದ್ದಿಗಳನ್ನು, ವಿಶೇಷ ಚಿತ್ರಗಳನ್ನು, ಸಿನಿಮಾ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತದೆ.

  ಬಾಲಿವುಡ್ ನಟ-ನಟಿಯರು, ಬಾಲಿವುಡ್‌ ಸಿನಿಮಾ ಬಗ್ಗೆಯೇ ಹೆಚ್ಚಿಗೆ ಪ್ರಚಾರ ನೀಡುವ 'ಫಿಲಂಫೇರ್' ನಾಮ್‌ಕೇ ವಾಸ್ತೆ ಎಂಬಂತೆ ಆಗಾಗ್ಗೆ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ, ನಟರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತದೆ.

  ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಚಿತ್ರವೊಂದನ್ನು ಇಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಫಿಲಂ ಫೇರ್ ದೊಡ್ಡ ಯಡವಟ್ಟನ್ನು ಮಾಡಿದೆ.

  ವಿಡಿಯೋ ಹಂಚಿಕೊಂಡಿದ್ದ ರಾಮ್ ಚರಣ್ ತೇಜ

  ವಿಡಿಯೋ ಹಂಚಿಕೊಂಡಿದ್ದ ರಾಮ್ ಚರಣ್ ತೇಜ

  ನಟ ರಾಮ್‌ ಚರಣ್ ತೇಜ ಸಣ್ಣ ಮಗುವೊಂದಿಗೆ ಟಿವಿ ಮುಂದೆ ಡಾನ್ಸ್ ಮಾಡುತ್ತಿರುವ ವಿಡಿಯೋವನ್ನು ಫಿಲಂ ಫೇರ್ ಇಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ವಿಡಿಯೋ ಏನೋ ಅದ್ಭತವಾಗಿದೆ ಆದರೆ ಚಿತ್ರಕ್ಕೆ ನೀಡಿರುವ ಒಕ್ಕಣೆ ಪೂರ್ಣ ತಪ್ಪಾಗಿದೆ. ಇದು ರಾಮ್ ಚರಣ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

  ತಪ್ಪು ಕ್ಯಾಪ್ಷನ್ ನೀಡಿದ ಫಿಲಂಫೇರ್

  ತಪ್ಪು ಕ್ಯಾಪ್ಷನ್ ನೀಡಿದ ಫಿಲಂಫೇರ್

  ರಾಮ್ ಚರಣ್ ತೇಜ ಸಣ್ಣ ಮಗುವಿನೊಂದಿಗೆ ಟಿವಿ ಮುಂದೆ ನಿಂತು ಟಿವಿಯಲ್ಲಿ ಪ್ರಸಾರವಾಗುತ್ತಿರುವ ಹಾಡಿಗೆ ನರ್ತಿಸುತ್ತಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಅದೇ ವಿಡಿಯೋವನ್ನು ಯಥಾವತ್ತು ಎತ್ತಿಕೊಂಡು ಫಿಲಂ ಫೇರ್ ಪೋಸ್ಟ್ ಮಾಡಿತ್ತು. ತಮ್ಮ ಮಗುವಿನೊಂದಿಗೆ ಕುಣಿದ ರಾಮ್ ಚರಣ್ ಎಂದೇನೋ ಕ್ಯಾಪ್ಷನ್ ನೀಡಿತ್ತು. ಆದರೆ ವಿಡಿಯೋದಲ್ಲಿರುವ ಮಗು ರಾಮ್‌ ಚರಣ್‌ ರದ್ದಲ್ಲ.

  ತಂಗಿಯ ಮಗುವೊಂದಿಗೆ ರಾಮ್ ಚರಣ್ ತೇಜ

  ತಂಗಿಯ ಮಗುವೊಂದಿಗೆ ರಾಮ್ ಚರಣ್ ತೇಜ

  ರಾಮ್ ಚರಣ್ ತೇಜ ತಂಗಿಯ ಮಗುವಿನೊಂದಿಗೆ ಕುಣಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಅದನ್ನು ರಾಮ್ ಚರಣ್ ಮಗು ಎಂದು ತಪ್ಪು ತಿಳಿದುಕೊಂಡ ಫಿಲಂಫೇರ್, ರಾಮ್ ಚರಣ್ ತಮ್ಮ ಮಗುವಿನೊಂದಿಗೆ ಡಾನ್ಸ್ ಮಾಡುತ್ತಿದ್ದಾರೆ ಎಂದಿತ್ತು.

  ದಕ್ಷಿಣ ಭಾರತದ ಮೇಲೆ ಅಸಡ್ಡೆ

  ದಕ್ಷಿಣ ಭಾರತದ ಮೇಲೆ ಅಸಡ್ಡೆ

  ನೆಟ್ಟಿಗರು ಫಿಲಂಫೇರ್‌ಗೆ ಚೆನ್ನಾಗಿ ಉಗಿದು ಉಪ್ಪಿನಕಾಯಿ ಹಾಕಿದ್ದು, ಫಿಲಂ ಫೇರ್ ಇದೀಗ ಆ ವಿಡಿಯೋವನ್ನು ತೆಗೆದುಹಾಕಿದೆ. ದಕ್ಷಿಣ ಭಾರತದ ನಟರ ಮೇಲೆ, ಸಿನಿಮಾಗಳ ಮೇಲೆ ಫಿಲಂಫೇರ್‌ನ ಅಸಡ್ಡೆ ಮುಂದುವರೆದಿದೆ ಎಂದು ನೆಟ್ಟಿಗರು ಸಿಟ್ಟು ಹೊರಹಾಕಿದ್ದಾರೆ.

  English summary
  Filmfare did wrong tweet about Telugu actor Ram Charan Teja. Fans of Ram Charan lambasted on Filmfare.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X