For Quick Alerts
  ALLOW NOTIFICATIONS  
  For Daily Alerts

  ಕೊನೆ ಘಳಿಗೆಯಲ್ಲಿ ಟ್ವೀಟ್ ಮಾಡಿದ ರಾಜಮೌಳಿ: 'ವಿಕ್ರಾಂತ್ ರೋಣ' ಬಗ್ಗೆ ಏನಂದ್ರು?

  |

  ಕ್ಷಣ ಕ್ಷಣಕ್ಕೂ 'ವಿಕ್ರಾಂತ್ ರೋಣ' ಹವಾ ಜೋರಾಗುತ್ತಲೇ ಇದೆ. ಸಿನಿಮಾ ಬಿಡುಗಡೆಗೆ ಒಂದೊಂದು ನಿಮಿಷ ಕಡಿಮೆಯಾಗುತ್ತಿದ್ದಂತೆ ಇತ್ತ ಕ್ರೇಜ್ ಹೆಚ್ಚಾಗುತ್ತಿದೆ. ಇಡೀ ಭಾರತವೇ ಸ್ಯಾಂಡಲ್‌ವುಡ್‌ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ.

  ಕಿಚ್ಚ ಸುದೀಪ್ ಅನ್ನು 'ವಿಕ್ರಾಂತ್ ರೋಣ' ಅವತಾರದಲ್ಲಿ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಬೇರೆ ಬೇರೆ ಭಾಷೆಯ ಸೆಲೆಬ್ರೆಟಿಗಳು ಸಿನಿಮಾಗೆ ಶುಭ ಕೋರುತ್ತಿದ್ದಾರೆ. ಆದರೆ, ಸುದೀಪ್‌ಗೆ ಎರಡು ಬಾರಿ ಆಕ್ಷನ್ ಕಟ್ ಹೇಳಿದ್ದ ರಾಜಮೌಳಿ ಮಾತ್ರ ಇದೂವರೆಗೂ 'ವಿಕ್ರಾಂತ್ ರೋಣ' ಬಗ್ಗೆ ಒಂದೇ ಒಂದು ಮಾತೂ ಆಡಿರಲಿಲ್ಲ.

  'ವಿಕ್ರಾಂತ್ ರೋಣ' ಮೊದಲ ವಿಮರ್ಶೆ: ಪ್ಯಾನ್ ಇಂಡಿಯಾ ಸಿನಿಮಾದ ಹೈಲೈಟ್ ಏನು?'ವಿಕ್ರಾಂತ್ ರೋಣ' ಮೊದಲ ವಿಮರ್ಶೆ: ಪ್ಯಾನ್ ಇಂಡಿಯಾ ಸಿನಿಮಾದ ಹೈಲೈಟ್ ಏನು?

  ಕೊನೆಗೂ 'ವಿಕ್ರಾಂತ್ ರೋಣ' ಬಿಡುಗಡೆಗೂ ಮುನ್ನ ಮೂವಿ ಮಾಂತ್ರಿಕ ರಾಜಮೌಳಿ ಟ್ವೀಟ್ ಮಾಡಿದ್ದಾರೆ. ಸುದೀಪ್ ಯಾವಾಗಲೂ ಸವಾಲುಗಳನ್ನು ಎದುರಿಸುವುದರಲ್ಲಿ ಹಾಗೂ ಪ್ರಯೋಗಗಳನ್ನು ಮಾಡುವುದರಲ್ಲಿ ಮೊದಲಿಗರು. ಎಂದು ಟ್ವೀಟ್ ಮಾಡಿದ್ದಾರೆ.

  'ಕಿಚ್ಚ ತೆಲುಗಿನವರು' ಎಂದಿದ್ದೇಕೆ ನಾಗಾರ್ಜುನ? 'ಸುದೀಪ್ ಕನ್ನಡದವರಲ್ವಾ?'ಕಿಚ್ಚ ತೆಲುಗಿನವರು' ಎಂದಿದ್ದೇಕೆ ನಾಗಾರ್ಜುನ? 'ಸುದೀಪ್ ಕನ್ನಡದವರಲ್ವಾ?

  ಕೊನೆ ಘಳಿಗೆಯಲ್ಲಿ ಜಕ್ಕಣ್ಣ ಟ್ವೀಟ್

  ಕೊನೆ ಘಳಿಗೆಯಲ್ಲಿ ಜಕ್ಕಣ್ಣ ಟ್ವೀಟ್

  ರಾಜಮೌಳಿ ಇದೂವರೆಗೂ 'ವಿಕ್ರಾಂತ್ ರೋಣ' ಬಗ್ಗೆ ಮಾತಾಡಿದ್ದು ಅವರ ಅಭಿಮಾನಿಗಳಿಗೇ ನೆನಪಿಲ್ಲ. ಕಳೆದೊಂದು ತಿಂಗಳಿನಿಂದ ಸುದೀಪ್ ದೇಶದಾದ್ಯಂತ ಸುತ್ತಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಬಿಡುವಿಲ್ಲದೆ ಪ್ರಚಾರ ಮಾಡುತ್ತಿದ್ದರೆ. ಆ ವೇಳೆನೂ ಬಾಹುಬಲಿ ನಿರ್ದೇಶಕ ರಾಜಮೌಳಿ ಮಾತಾಡಿಲ್ಲ. ಆದ್ರೀಗ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ದಿಢೀರನೇ ಚಿತ್ರತಂಡಕ್ಕೆ ಶುಭಕೋರಿ ರಾಜಮೌಳಿ ಟ್ವೀಟ್ ಮಾಡಿದ್ದಾರೆ. ಇದು 'ವಿಕ್ರಾಂತ್ ರೋಣ' ತಂಡಕ್ಕೆ ಬಲ ಬಂದಂತಾಗಿದೆ.

  ರಾಜಮೌಳಿ ಟ್ವೀಟ್‌ನಲ್ಲಿ ಏನಿದೆ?

  'ವಿಕ್ರಾಂತ್ ರೋಣ' ಸಿನಿಮಾ ಹಾಗೂ ಕಿಚ್ಚ ಸುದೀಪ್ ಬಗ್ಗೆ ರಾಜಮೌಳಿ ಟ್ವೀಟ್ ಮಾಡಿದ್ದು, ಸಿನಿಮಾ ತಂಡಕ್ಕೆ ಕೊನೆಯ ಕ್ಷಣದಲ್ಲಿ ಹೊಸ ಹುರುಷು ಬಂದಂತಾಗಿದೆ. " ಸುದೀಪ್ ಯಾವಾಗಲೂ ಪ್ರಯೋಗ ಹಾಗೂ ಸವಾಲುಗಳನ್ನು ತೆಗೆದುಕೊಳ್ಳುವುದರಲ್ಲಿ ಮುಂದಿರುತ್ತಾರೆ. ವಿಕ್ರಾಂತ್ ರೋಣದಲ್ಲಿ ಅವರು ಏನು ಮಾಡಿದ್ದಾರೆ ಎಂದು ನೋಡಲು ಇನ್ನು ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ. ದೃಶ್ಯಗಳು ತುಂಬಾ ಗ್ರ್ಯಾಂಡ್ ಆಗಿವೆ ಅಂತ ಅನಿಸುತ್ತಿದೆ. ಕಿಚ್ಚ ಸುದೀಪ್ ಹಾಗೂ ಅವರ ಇಡೀ ತಂಡಕ್ಕೆ ನಾಳೆ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಶುಭಕೋರುತ್ತೇನೆ." ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

  ರಾಜಮೌಳಿ 2 ಚಿತ್ರದಲ್ಲಿ ಸುದೀಪ್

  ರಾಜಮೌಳಿ 2 ಚಿತ್ರದಲ್ಲಿ ಸುದೀಪ್

  ಕಿಚ್ಚ ಸುದೀಪ್‌ಗೆ ರಾಜಮೌಳಿ ತುಂಬಾನೇ ಹಳೇ ಪರಿಚಯ. ಎಸ್‌ಎಸ್ ರಾಜಮೌಳಿ 'ಈಗ' ಸಿನಿಮಾ ಮಾಡುವಾಗ ಕಿಚ್ಚ ಸುದೀಪ್ ಸಾಕಷ್ಟು ಸಮಯ ಕಳೆದಿದ್ದಾರೆ. 'ಈಗ'ದಲ್ಲಿ ಖಳನಾಯಕನಾಗಿ ಕಂಡಿದ್ದರೂ, ಸುದೀಪ್ ಪಾತ್ರವೇ ಹೈಲೈಟ್ ಆಗಿತ್ತು. ಆ ಬಳಿಕ ದಾಖಲೆ ಬರೆದ 'ಬಾಹುಬಲಿ' ಸಿನಿಮಾದಲ್ಲಿ ಸುದೀಪ್‌ಗೆ ಅಸ್ಲಾಮ್ ಖಾನ್ ಪಾತ್ರವನ್ನು ನೀಡಿದ್ದರು. ಪಾತ್ರ ಚಿಕ್ಕದಿದ್ದರೂ ಸುದೀಪ್ ಗಮನ ಸೆಳೆದಿದ್ದರು. ಹೀಗಾಗಿ ಇಬ್ಬರೂ ಬಹಳ ದಿನಗಳಿಂದ ಆತ್ಮೀಯರು. ಆದರೂ ವಿಕ್ರಾಂತ್ ರೋಣ ಬಗ್ಗೆ ಕೊನೆ ಘಳಿಗೆಯಲ್ಲಿ ಟ್ವೀಟ್ ಮಾಡಿದ್ದ ಯಾಕೆ? ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

  ಸಿನಿಮಾ ನೋಡುತ್ತಾರಾ ರಾಜಮೌಳಿ

  ಸಿನಿಮಾ ನೋಡುತ್ತಾರಾ ರಾಜಮೌಳಿ

  ಮಹೇಶ್ ಬಾಬು ಸಿನಿಮಾ ರಾಜಮೌಳಿ ಬ್ಯುಸಿಯಾಗಿದ್ದಾರೆ. ಸ್ಕ್ರೀಪ್ಟ್ ಮಾಡುವುದರಲ್ಲಿ ನಿರತರಾಗಿರುವ ರಾಜಮೌಳಿ 'ವಿಕ್ರಾಂತ್ ರೋಣ' ಸಿನಿಮಾವನ್ನು ನೋಡುತ್ತಾರಾ? ಎಂಬ ಪ್ರಶ್ನೆಯಂತೂ ಕಾಡುತ್ತಿದೆ. ಈಗ ರಾಜಮೌಳಿ ಮಾಡಿದ ಟ್ವೀಟ್‌ನಲ್ಲೇ ಸಿನಿಮಾ ನೋಡುವ ಸುಳಿವು ನೀಡಿದ್ದಾರೆ. ಹೀಗಾಗಿ ಜಕ್ಕಣ್ಣ ಸಿನಿಮಾ ನೋಡಿ ಬಂದ ಕೂಡಲೇ ಒಂದು ಅದ್ಭುತ ವಿಮರ್ಶೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕಿಚ್ಚನ ಫ್ಯಾನ್ಸ್ ಇದ್ದಾರೆ.

  English summary
  Finally SS Rajamouli Tweet about Kiccha Sudeep Starrer Vikrant Rona Before Release, Know More.
  Thursday, July 28, 2022, 10:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X