For Quick Alerts
  ALLOW NOTIFICATIONS  
  For Daily Alerts

  ನಟ ನಾಗಾರ್ಜುನರ 'ಅನ್ನಪೂರ್ಣ ಸ್ಟುಡಿಯೋ'ದಲ್ಲಿ ಬೆಂಕಿ ಅವಘಡ

  |

  ತೆಲುಗು ನಟ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಸ್ಟುಡಿಯೋದಲ್ಲಿ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಾರ್ವಜನಿಕರಿಗೆ ಭಯ ಹುಟ್ಟಿಸಿದೆ.

  ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಅವಘಡ ಉಂಟಾಗಿದೆ, ಯಾವುದೇ ಪ್ರಾಣಾಪಾಯವೂ ಆಗಿಲ್ಲ. ಇದು ಸಣ್ಣ ಪ್ರಮಾದ ಎಂದು ಅನ್ನಪೂರ್ಣ ಸ್ಟುಡಿಯೋ ಸ್ಪಷ್ಟನೆ ನೀಡಿದೆ. ಆದರೂ, ಈ ಬೆಂಕಿ ಅವಘಡದ ಬಗ್ಗೆ ಅನುಮಾನಗಳು, ಅಂತೆ-ಕಂತೆಗಳು ಜೋರಾಗಿ ಗಿರಕಿ ಹೊಡೆಯುತ್ತಿದೆ. ಮುಂದೆ ಓದಿ....

  ಸಂತೋಷದಲ್ಲಿದ್ದ ನಾಗ್ ಕುಟುಂಬಕ್ಕೆ ದುಃಖ; ಹೊತ್ತಿ ಉರಿದ ಸ್ಟುಡಿಯೋ.!

  ಶೂಟಿಂಗ್ ಸೆಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್

  ಶೂಟಿಂಗ್ ಸೆಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್

  ಅಕ್ಕಿನೇನಿ ನಾಗೇಶ್ವರ್ ರಾವ್ ಸ್ಥಾಪಿಸಿರುವ ಅನ್ನಪೂರ್ಣ ಸ್ಟುಡಿಯೋ ಹೈದರಾಬಾದ್‌ನಲ್ಲಿರುವ ದೊಡ್ಡ ಸಂಸ್ಥೆಗಳ ಪೈಕಿ ಪ್ರಮುಖವಾದದು. ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ನಿರ್ಮಿಸಲಾಗಿದ್ದ ಸೆಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಅವಘಡ ಸಂಭವಿಸಿದೆ. ಆದರೆ, ಯಾರಿಗೂ ಅಪಾಯ ಆಗಿಲ್ಲ ಎಂದು ವಿವರಣೆ ನೀಡಿದ್ದಾರೆ.

  ಬಿಗ್ ಬಾಸ್ ಸೆಟ್‌ನಲ್ಲಿ ಏನಾದರೂ ಆಯ್ತಾ?

  ಬಿಗ್ ಬಾಸ್ ಸೆಟ್‌ನಲ್ಲಿ ಏನಾದರೂ ಆಯ್ತಾ?

  ಸದ್ಯ ಬೆಂಕಿ ಅವಘಡ ಸಂಭವಿಸಿದ ಸ್ವಲ್ಪ ದೂರದಲ್ಲಿಯೇ ಬಿಗ್ ಬಾಸ್ ಮನೆ ನಿರ್ಮಿಸಲಾಗಿದೆ. ಈ ಬೆಂಕಿ ಅನಾಹುತದಿಂದ ಬಿಗ್ ಬಾಸ್‌ ಮನೆಗೆ ಏನಾದರೂ ಸಮಸ್ಯೆ ಆಯಿತಾ ಎಂಬ ಅನುಮಾನ ಕಾಡಿತ್ತು. ಬಿಗ್ ಬಾಸ್ ಮನೆಗೆ ಯಾವುದೇ ತೊಂದರೆ ಆಗಿಲ್ಲ ಎಂದು ಅನ್ನಪೂರ್ಣ ಸ್ಟುಡಿಯೋ ನಿರ್ವಹಕರು ಸ್ಪಷ್ಟನೆ ನೀಡಿದ್ದಾರೆ.

  ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ ನಾಗಾರ್ಜುನ

  ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ ನಾಗಾರ್ಜುನ

  ಇನ್ನು ಅನ್ನಪೂರ್ಣ ಸ್ಟುಡಿಯೋದಲ್ಲಿ ಬೆಂಕಿ ಅನಾಹುತ ಸಂಭವಿಸಿದ ಕಾರಣ, ತೆಲುಗು ನಟ ನಾಗಾರ್ಜುನ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ''ಇಂದು ಬೆಳಿಗ್ಗೆ ಅನ್ನಪೂರ್ಣ ಸ್ಟುಡಿಯೋದಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಚಿಂತಿಸುವ ಅವಶ್ಯಕತೆ ಇಲ್ಲ, ಇದು ತಪ್ಪು ಸುದ್ದಿ ಮತ್ತು ಎಲ್ಲವೂ ಉತ್ತಮವಾಗಿದೆ'' ಎಂದಿದ್ದಾರೆ.

  ಸರ್ಜಾ ಕುಟುಂಬಕ್ಕೆ ನಾಳೆ ಮಹತ್ವದ ದಿನ | Chiranjeevi Sarja Family | Filmibeat Kannada
  ಮೂರು ವರ್ಷದ ಹಿಂದೆ ಬೆಂಕಿ ಅವಘಡ

  ಮೂರು ವರ್ಷದ ಹಿಂದೆ ಬೆಂಕಿ ಅವಘಡ

  ಅನ್ನಪೂರ್ಣ ಸ್ಟುಡಿಯೋದಲ್ಲಿ ಮೂರು ವರ್ಷದ ಹಿಂದೆ ದೊಡ್ಡದಾಗಿ ಬೆಂಕಿ ಅವಘಡ ಸಂಭವಿಸಿತ್ತು. ಆ ಸಮಯದಲ್ಲಿ ನಾಗಾರ್ಜುನ ಕುಟುಂಬ ಸಮಂತಾ ಮತ್ತು ನಾಗಚೈತನ್ಯ ಮದುವೆ ಸಮಾರಂಭದಲ್ಲಿದ್ದರು. ಸ್ಡುಡಿಯೋದಲ್ಲಿ ಬಹುಪಾಲು ಆಸ್ತಿ ನಷ್ಟ ಆಗಿತ್ತು.

  English summary
  The Fire Mishap happened at Annapurna Studios is under Control Now. Actor nagarjuna Clarified about Fire incident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X