twitter
    For Quick Alerts
    ALLOW NOTIFICATIONS  
    For Daily Alerts

    RRR ಶೂಟಿಂಗ್‌ಗೆ ಒಂದು ದಿನಕ್ಕೆ ಆಗುತ್ತಿದ್ದ ಖರ್ಚೆಷ್ಟು?

    |

    ತೆಲುಗು ಸಿನಿಮಾ RRR ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದ್ದು ಈ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಜೊತೆಗೆ ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಸಹ ಒಂದು RRR.

    RRR ಸಿನಿಮಾದಲ್ಲಿ ಸ್ಟಾರ್ ನಟರ ದಂಡೇ ಇದೆ. ಜೂ ಎನ್‌ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಶಿರಿನ್ ಹಲವು ವಿದೇಶಿ ನಟರು ಸಿನಿಮಾದಲ್ಲಿದ್ದಾರೆ. ಭಾರಿ ದುಬಾರಿ ಸಂಭಾವನೆಯ ನಟರೇ ಇವರೆಲ್ಲರು.

    RRR ಮೇಲೆ ಜಗನ್ ಅವಕೃಪೆ? ಸಿಎಂ ಮನೆಗೆ ರಾಜಮೌಳಿ ಭೇಟಿRRR ಮೇಲೆ ಜಗನ್ ಅವಕೃಪೆ? ಸಿಎಂ ಮನೆಗೆ ರಾಜಮೌಳಿ ಭೇಟಿ

    ನಟರಿಗೆ ಸಂಭಾವನೆ ಕೊಡುವ ವಿಷಯವಾಗಿ ಮಾತ್ರವೇ ಅಲ್ಲ ಚಿತ್ರೀಕರಣವನ್ನೂ ಅದ್ಧೂರಿಯಾಗಿಯೇ ಮಾಡಲಾಗಿದೆ. ಈಗ ಬಿಡುಗಡೆ ಆಗಿರುವ ಟೀಸರ್, ಟ್ರೇಲರ್‌ಗಳಲ್ಲಿ ಅದು ಸ್ಪಷ್ಟವಾಗಿ ಕಾಣುತ್ತದೆ. ಯಾವುದನ್ನೂ ಚಿಕ್ಕದಾಗಿ ಮಾಡಿ ಮುಗಿಸುವ ನಿರ್ದೇಶಕ ರಾಜಮೌಳಿ ಅಲ್ಲ. ಅವರ ಯೋಚನೆ-ಯೋಜನೆ ಸದಾ ದೊಡ್ಡದಾಗಿಯೇ ಇರುತ್ತದೆ. ಹಾಗಾಗಿ RRR ಚಿತ್ರೀಕರಣವೂ ಬಹಳ ಅದ್ಧೂರಿಯಾಗಿ ನಡೆದಿದೆ. ಚಿತ್ರತಂಡವು ಒಂದು ದಿನದ ಶೂಟಿಂಗ್‌ಗೆ ಖರ್ಚು ಮಾಡಿರುವ ಮೊತ್ತ ಕೇಳಿದರೆ ನೀವು ಹೌಹಾರುವುದು ಪಕ್ಕಾ.

    RRR ಸಿನಿಮಾವು ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದ್ದು ಚಿತ್ರತಂಡ ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದೆ. ಪ್ರಚಾರದ ಅಂಗವಾಗಿ ಹಾಸ್ಯ ಸಂದರ್ಶನವೊಂದರಲ್ಲಿ ರಾಜಮೌಳಿ, ಜೂ ಎನ್‌ಟಿಆರ್ ಹಾಗೂ ರಾಮ್‌ಚರಣ್ ಭಾಗವಹಿಸಿದ್ದಾಗ ರಾಜಮೌಳಿ, ತಾವು ಒಂದು ದಿನದ ಚಿತ್ರೀಕರಣಕ್ಕೆ ಎಷ್ಟು ಮೊತ್ತ ಖರ್ಚು ಮಾಡುತ್ತಿದ್ದೆವು ಎಂಬುದರ ಮಾಹಿತಿ ಹಂಚಿಕೊಂಡಿದ್ದಾರೆ.

    52 ಸಾವಿರ ಚದರ ಅಡಿ LED ಸ್ಕ್ರೀನ್‌ನಲ್ಲಿ RRR ಪ್ರಿ-ರಿಲೀಸ್ ಇವೆಂಟ್: ಸಿಎಂ ಬೊಮ್ಮಾಯಿ, ಶಿವಣ್ಣ ಗೆಸ್ಟ್52 ಸಾವಿರ ಚದರ ಅಡಿ LED ಸ್ಕ್ರೀನ್‌ನಲ್ಲಿ RRR ಪ್ರಿ-ರಿಲೀಸ್ ಇವೆಂಟ್: ಸಿಎಂ ಬೊಮ್ಮಾಯಿ, ಶಿವಣ್ಣ ಗೆಸ್ಟ್

    ಜ್ವರ ಬಂದರೂ ರಜೆ ಕೊಡಲಿಲ್ಲ: ರಾಮ್ ಚರಣ್

    ಜ್ವರ ಬಂದರೂ ರಜೆ ಕೊಡಲಿಲ್ಲ: ರಾಮ್ ಚರಣ್

    ಸಂದರ್ಶನದಲ್ಲಿ ಮಾತನಾಡಿದ ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ರಾಜಮೌಳಿ ಮೇಲೆ ಯಾವಾಗ ಕೋಪ ಬಂತು ಎಂದು ಮಾತನಾಡುತ್ತಾ, ''ಚಿತ್ರೀಕರಣ ಮಾಡುವಾಗ ನನಗೆ ಒಮ್ಮೆ ಬಹಳ ಜ್ವರ ಹಾಗೂ ತಲೆನೋವು ಬಂದಿತ್ತು. ಅದನ್ನು ಕಂಡಾದರು ರಾಜಮೌಳಿ ನನಗೆ ಬ್ರೇಕ್ ಕೊಡುತ್ತಾರೆ ಎಂದುಕೊಂಡೆ ಆದರೆ ಆತ ಬ್ರೇಕ್ ನೀಡಲಿಲ್ಲ'' ಎಂದಿದ್ದಾರೆ ರಾಮ್‌ ಚರಣ್.

    RRR ಪ್ರಿ ರಿಲೀಸ್‌ ಇವೆಂಟ್‌ಗೆ ಚಿಕ್ಕಬಳ್ಳಾಪುರ ಬಳಿ ಸ್ಥಳ ನಿಗದಿ, ಸಿದ್ಧತೆ ಆರಂಭRRR ಪ್ರಿ ರಿಲೀಸ್‌ ಇವೆಂಟ್‌ಗೆ ಚಿಕ್ಕಬಳ್ಳಾಪುರ ಬಳಿ ಸ್ಥಳ ನಿಗದಿ, ಸಿದ್ಧತೆ ಆರಂಭ

    ''ಒಂದು ಗಂಟೆ ಮುಂಚೆ ಹೋಗಲು ಅವಕಾಶ ಕೊಟ್ಟಿದ್ದರು''

    ''ಒಂದು ಗಂಟೆ ಮುಂಚೆ ಹೋಗಲು ಅವಕಾಶ ಕೊಟ್ಟಿದ್ದರು''

    ಜೂ ಎನ್‌ಟಿಆರ್ ಮಾತನಾಡಿ, ''ಒಮ್ಮೆ ರೋಪ್‌ ಹಾಕಿಕೊಂಡು ಶೂಟಿಂಗ್ ಮಾಡುವಾಗ ನನಗೆ ಬಹಳ ಸುಸ್ತಾಗಿತ್ತು. ಸುಸ್ತಿನಿಂದ ಬೀಳುವುದು ಮಾತ್ರ ಬಾಕಿ ಇತ್ತು. ರಾಜಮೌಳಿ ನನಗೆ ಬ್ರೇಕ್ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಆತ ಬ್ರೇಕ್ ನೀಡಲಿಲ್ಲ ಬದಲಿಗೆ, ಇಂದು ಒಂದು ಗಂಟೆ ಬೇಗ ಮನೆಗೆ ಹೋಗುವೆಯಂತೆ ಈಗ ಚಿತ್ರೀಕರಣ ಮುಗಿಸು' ಎಂದರು. ಅದನ್ನು ಕೇಳಿ ನನಗೆ ಬಹಳ ಸಂತೋಶವೇ ಆಯಿತು'' ಎಂದಿದ್ದಾರೆ ಜೂ ಎನ್‌ಟಿಆರ್.

    ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತದೆ?

    ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತದೆ?

    ಇಬ್ಬರ ಆರೋಪಗಳಿಗೆ ಉತ್ತರ ನೀಡಿದ ರಾಜಮೌಳಿ, ಹೌದು ನಾನು ನಟರಿಗೆ ರಜೆ, ಬ್ರೇಕ್ ನೀಡುವುದಿಲ್ಲ. ಏಕೆಂದರೆ ನಮ್ಮ ಚಿತ್ರೀಕರಣದ ಸೆಟ್‌ನಲ್ಲಿ ಹಲವು ನಟರು, ತಂತ್ರಜ್ಞರು, ಪೋಷಕ ನಟರು, ಎಕ್‌ಸ್ಟ್ರಾಗಳು ಕೆಲಸ ಮಾಡುತ್ತಿರುತ್ತಾರೆ. ಒಂದು ದಿನದ ಚಿತ್ರೀಕರಣಕ್ಕೆ 50 ಲಕ್ಷ ರುಪಾಯಿ ಖರ್ಚಾಗುತ್ತಿರುತ್ತದೆ. ಹೀಗಿರುವಾಗ ಮುಖ್ಯ ನಟರಿಗೆ ರಜೆ ನೀಡಿದರೆ ಇಡೀ ದಿನ ವ್ಯರ್ಥವಾಗುತ್ತದೆ. ಹಾಗಾಗಿ ನಾನು ನಟರಿಗೆ ಬ್ರೇಕ್ ನೀಡದೆ ಕೆಲಸ ಮಾಡಿಸುತ್ತೇನೆ'' ಎಂದಿದ್ದಾರೆ ರಾಜಮೌಳಿ.

    RRR ಸಿನಿಮಾವು ಮಾರ್ಚ್ 25 ರಂದು ಬಿಡುಗಡೆ

    RRR ಸಿನಿಮಾವು ಮಾರ್ಚ್ 25 ರಂದು ಬಿಡುಗಡೆ

    RRR ಸಿನಿಮಾವು ಮಾರ್ಚ್ 25 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಪ್ರಚಾರ ಕಾರ್ಯ ಈಗಾಗಲೇ ಜೋರಾಗಿ ನಡೆಯುತ್ತಿದ್ದು, RRR ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವು ಕರ್ನಾಟಕದಲ್ಲಿ ನಾಳೆ (ಮಾರ್ಚ್ 19) ರಂದು ನಡೆಯಲಿದೆ. ನಾಳೆ ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ವೇದಿಕೆ ಮೇಲೆ ಕಾರ್ಯಕ್ರಮ ನಡೆಯಲಿದೆ. RRR ಸಿನಿಮಾವು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ.

    English summary
    How much money cost for RRR movie's one day of shooting? Director Rajamouli said it will cost nearly around 50 lakh rs per day shoot.
    Friday, March 18, 2022, 20:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X