For Quick Alerts
  ALLOW NOTIFICATIONS  
  For Daily Alerts

  ಸಿಂಗಲ್ ಆಗಿ ಬರ್ತಿದ್ದಾನೆ 'ಸಲಾರ್': 'ದಂಗಲ್', 'ಬಾಹುಬಲಿ', 'KGF - 2' ಬಾಕ್ಸಾಫೀಸ್ ದಾಖಲೆಗಳಿಗೆ ಜೀವಭಯ!

  |

  ಭಾರತೀಯ ಚಿತ್ರರಂಗದಲ್ಲೀಗ ಒಂದಕ್ಕಿಂತ ಒಂದು ದೊಡ್ಡ ಸಿನಿಮಾ ನಿರ್ಮಾಣ ಆಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳು ಎಲ್ಲಾ ಭಾಷೆಗಳಲ್ಲೂ ಸದ್ದು ಮಾಡ್ತಿದೆ. ಫಿಲ್ಮ್ ಮೇಕರ್ಸ್ ಭಾಷೆಯ ಗಡಿ ಮೀರಿ ಬೇರೆ ಬೇರೆ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಇದೀಗ ಸಿನಿಮಾ ಸೋಲೊ ರಿಲೀಸ್ ಕನ್ಫರ್ಮ್ ಆಗಿದೆ.

  KGF ತಂಡದ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾ 'ಸಲಾರ್'. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಡುತ್ತಿದೆ. ಚಿತ್ರದ ಹೊಸ ಶೆಡ್ಯೂಲ್ ಮತ್ತೆ ಶುರುವಾಗಿದ್ದು, ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಕಾಂಬಿನೇಷನ್‌ ಹಾಗೂ ಪೋಸ್ಟರ್‌ಗಳಿಂದಲೇ ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಮಾಫಿಯಾ ಬ್ಯಾಕ್‌ಡ್ರಾಪ್‌ನಲ್ಲಿ ಪ್ರಶಾಂತ್ ನೀಲ್ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಮುಂದಿನ ವರ್ಷ ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ವರ್ಷಕ್ಕೂ ಮೊದಲೇ ಚಿತ್ರತಂಡ ಘೋಷಿಸಿದೆ.

  ಲೇಟ್ ಆದ್ರು ಫ್ಯಾನ್ಸ್ ಮನಗೆದ್ದ 'ಸಲಾರ್' ಟೀಂ: ಮಸಿ ಬಳಸದೇ ಪ್ರಭಾಸ್ ಬರ್ತ್‌ಡೇಗೆ ಸ್ಪೆಷಲ್ ಸರ್‌ಪ್ರೈಸ್!ಲೇಟ್ ಆದ್ರು ಫ್ಯಾನ್ಸ್ ಮನಗೆದ್ದ 'ಸಲಾರ್' ಟೀಂ: ಮಸಿ ಬಳಸದೇ ಪ್ರಭಾಸ್ ಬರ್ತ್‌ಡೇಗೆ ಸ್ಪೆಷಲ್ ಸರ್‌ಪ್ರೈಸ್!

  ಬಾಲಿವುಡ್‌ನ 'ಫೈಟರ್' ಚಿತ್ರವನ್ನು ಕೂಡ ಸೆಪ್ಟೆಂಬರ್ 28ಕ್ಕೆ ರಿಲೀಸ್ ಮಾಡೋದಾಗಿ ಹೇಳಲಾಗಿತ್ತು. ಹಾಗಾಗಿ ಹೃತಿಕ್ ರೋಷನ್ ಹಾಗೂ ಪ್ರಭಾಸ್ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಫೈಟ್ ಗ್ಯಾರೆಂಟಿ ಎನ್ನುವ ಲೆಕ್ಕಾಚಾರ ನಡೆದಿತ್ತು. ಆದರೆ 'ಫೈಟರ್' ದಾರಿ ಬಿಟ್ಟಿದ್ದು 'ಸಲಾರ್' ಒಬ್ಬೊಂಟಿಯಾಗಿ ಬಾಕ್ಸಾಫೀಸ್ ಅಖಾಡಕ್ಕೆ ಇಳಿಯೋದು ಪಕ್ಕಾ ಆಗಿದೆ.

  ಸಿಂಗಲ್ ಆಗಿ 'ಸಲಾರ್' ಎಂಟ್ರಿ

  ಸಿಂಗಲ್ ಆಗಿ 'ಸಲಾರ್' ಎಂಟ್ರಿ

  ಸಿದ್ದಾರ್ಥ್‌ ಆನಂದ್ ನಿರ್ದೇಶನದ 'ಫೈಟರ್' ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ. ಹೃತಿಕ್ ರೋಷನ್ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸ್ತಿದ್ದಾರೆ. ಸದ್ಯ ಚಿತ್ರದ ರಿಲೀಸ್‌ ಡೇಟ್ 2024ರ ಜನವರಿ 25ಕ್ಕೆ ಪೋಸ್ಟ್‌ಪೋನ್ ಆಗಿದೆ. ಈ ವಿಚಾರವನ್ನು ಖುದ್ದು ಚಿತ್ರತಂಡವೇ ಘೋಷಿಸಿದೆ. ಹಾಗಾಗಿ 'ಸಲಾರ್' ಪ್ರಭಾಸ್ ಹಾದಿ ಸುಗಮವಾಗಿದೆ. ಎರಡು ಸಿನಿಮಾ ಒಟ್ಟಿಗೆ ಬಂದಿದ್ದರೆ ಕೊನೆ ಪಕ್ಷ ಹಿಂದಿ ಬೆಲ್ಟ್‌ನಲ್ಲಿ ಪ್ರಶಾಂತ್ ನೀಲ್ ಚಿತ್ರಕ್ಕೆ ಹಿನ್ನಡೆ ಆಗುತ್ತಿತ್ತು. ಬಾಕ್ಸಾಫೀಸ್‌ನಲ್ಲಿ ಮದಗಜಗಳ ಮಧ್ಯೆ ಕದನ ನಡೀತಿತ್ತು. ಇದೀಗ 'ಸಲಾರ್' ಸೋಲೊ ಎಂಟ್ರಿ ಫಿಕ್ಸ್ ಆದಂತಾಗಿದೆ. ಪ್ರಭಾಸ್ ಸಿನಿಮಾ ಬರ್ತಿರೋದ್ರಿಂದ ಬೇರೆ ಯಾವುದೇ ಸಿನಿಮಾ ಆ ದಿನ ತೆರೆಗೆ ಬರುವ ಧೈರ್ಯ ಮಾಡುವುದಿಲ್ಲ ಎನಿಸುತ್ತೆ.

  ಪಕ್ಕಾ ಮಾಸ್ ಎಂಟರ್‌ಟೈನರ್‌ ಸಿನಿಮಾ

  ಪಕ್ಕಾ ಮಾಸ್ ಎಂಟರ್‌ಟೈನರ್‌ ಸಿನಿಮಾ

  KGF ಸರಣಿ ಸಿನಿಮಾಗಳಲ್ಲಿ ಪ್ರಶಾಂತ್ ನೀಲ್ ಟೇಕಿಂಗ್, ಮೇಕಿಂಗ್, ಎಲಿವೇಷನ್ ಸೀನ್ಸ್ ನೋಡಿದ್ಮೇಲೆ ಸಹಜವಾಗಿಯೇ 'ಸಲಾರ್' ಕುತೂಹಲ ಹೆಚ್ಚುವಂತಾಗಿದೆ. ಬಹುತೇಕ KGF ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಈ ಕಥೆಯನ್ನು ಕಟ್ಟಿಕೊಡುತ್ತಿದೆ. 'ಬಾಹುಬಲಿ'ಯಾಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ ಪ್ರಭಾಸ್ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ್ದಾರೆ. ಇವರಿಬ್ಬರ ಡೆಡ್ಲಿ ಕಾಂಬಿನೇಷನ್‌ ಇನ್ನಿಲ್ಲದ ತೆರೆಮೇಲೆ ಮ್ಯಾಜಿಕ್ ಮಾಡುವ ನಿರೀಕ್ಷೆ ಇದೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬೆಳೆ ತೆಗೆಯುವ ಸುಳಿವು ಸಿಗುತ್ತಿದೆ.

  ಜೋರಾಗಿದೆ 'ಸಲಾರ್' ಬ್ಯುಸಿನೆಸ್

  ಜೋರಾಗಿದೆ 'ಸಲಾರ್' ಬ್ಯುಸಿನೆಸ್

  ಕ್ರೇಜ್‌ಗೆ ತಕ್ಕಂತೆ 'ಸಲಾರ್' ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಜೋರಾಗಿ ನಡೀತಿದೆ. ಆಂಧ್ರ ಮತ್ತು ತೆಲಂಗಾಣದ ಡಿಸ್ಟ್ರಿಬ್ಯೂಷನ್ ರೈಟ್ಸ್ ಅನ್ನು ಪ್ರಭಾಸ್ ಸಹಭಾಗಿತ್ವದ ಯುವಿ ಕ್ರಿಯೇಷನ್ಸ್ ಸಂಸ್ಥೆ ಕೊಂಡುಕೊಂಡಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡಲಿದೆ. ಚಿತ್ರದಲ್ಲಿ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಮುಖ್ಯವಾದ ಪಾತ್ರದಲ್ಲಿ ನಟಿಸ್ತಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದು, ಜಗಪತಿ ಬಾಬು, ಮಧು ಗುರುಸ್ವಾಮಿ, ಈಶ್ವರಿ ರಾವ್, ಶ್ರಿಯಾ ರೆಡ್ಡಿ ತಾರಾಗಣದಲ್ಲಿ ಇದ್ದಾರೆ. ಲಾಂಗ್ ವೀಕೆಂಡ್‌ನಲ್ಲಿ 'ಸಲಾರ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯಲಿದೆ.

  ಬಾಕ್ಸಾಫೀಸ್‌ನಲ್ಲಿ 'ಸಲಾರ್' ಹೊಸ ದಾಖಲೆ?

  ಬಾಕ್ಸಾಫೀಸ್‌ನಲ್ಲಿ 'ಸಲಾರ್' ಹೊಸ ದಾಖಲೆ?

  ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ದಂಗಲ್, ಬಾಹುಬಲಿ-2, KGF- 2 ಸಿನಿಮಾಗಳು ಮೊದಲ 3 ಸ್ಥಾನದಲ್ಲಿವೆ. 'ಸಲಾರ್' ಕ್ರೇಜ್ ನೋಡುತ್ತಿದ್ದರೆ ಈ ಎಲ್ಲಾ ಸಿನಿಮಾಗಳ ದಾಖಲೆ ಮುರಿಯುವ ಲೆಕ್ಕಾಚಾರ ನಡೀತಿದೆ. ಆಮೀರ್ ಖಾನ್ ನಟನೆಯ ದಂಗಲ್ ಸಿನಿಮಾ ವಿಶ್ವದಾದ್ಯಂತ 2000ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿತ್ತು. ರಾಜಮೌಳಿ ನಿರ್ದೇಶನದ ಬಾಹುಬಲಿ- 2 1800 ಕೋಟಿ ದೋಚಿದ್ರೆ, ಯಶ್ ನಟನೆಯ KGF- 2 ಸಿನಿಮಾ 1300 ಕೋಟಿ ರೂ,ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.

  English summary
  Hrithik Roshan starrer Fighter postponed Prabhas Starrer Salaar will have solo release on 28th September 2023. Hrithik Roshan’s ‘Fighter’ Avoids Clash With Prabhas’ Salaar. Know more.
  Friday, October 28, 2022, 22:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X