For Quick Alerts
  ALLOW NOTIFICATIONS  
  For Daily Alerts

  ನಟಿ ಕಲ್ಯಾಣಿಗಾಗಿ ಕಣ್ಣೀರು ಹಾಕಿದ ಮಾಜಿ ಪತಿ ಸೂರ್ಯ ಕಿರಣ್

  |

  90-2000 ದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದ ನಟಿ ಕಲ್ಯಾಣಿ, ಸಿನಿಮಾದಲ್ಲಿ ಗಳಿಸಿದ ಯಶಸ್ಸನ್ನು ವೈವಾಹಿಕ ಜೀವನದಲ್ಲಿ ಕಾಣಲಿಲ್ಲ.

  ತೆಲುಗಿನ ನಿರ್ದೇಶಕ ಸೂರ್ಯ ಕಿರಣ್ ಅನ್ನು ವಿವಾಹವಾದ ನಟಿ ಕಲ್ಯಾಣಿ, ನಂತರ ಸೂರ್ಯ ಕಿರಣ್ ನಿಂದ ವಿಚ್ಛೇದನ ಪಡೆದು ಒಂಟಿ ಜೀವನ ಸಾಗಿಸುತ್ತಿದ್ದಾರೆ.

  ಕೆಲವು ವರ್ಷಗಳ ಹಿಂದೆ ತೆಲುಗಿನ ಹಿಟ್ ಸಿನಿಮಾ ನಿರ್ದೇಶಕ ಆಗಿದ್ದ ನಟಿ ಕಲ್ಯಾಣಿ ಪತಿ ಕಿರಣ್ ಸೂರ್ಯಾ, ಆ ನಂತರ ನಿಧಾನಕ್ಕೆ ನೇಪತ್ಯಕ್ಕೆ ಸರಿದರು. ತೆಲುಗಿನ ಬಿಗ್‌ಬಾಸ್ 4 ಸೀಸನ್‌ನಲ್ಲಿ ಸ್ಪರ್ಧಾಳುವಾಗಿ ಭಾಗವಹಿಸಿದ್ದ ಕಿರಣ್ ಸೂರ್ಯಾ, ಪತ್ನಿ ಕಲ್ಯಾಣಿ ಬಗ್ಗೆ ಮಾತನಾಡಿದ್ದಾರೆ.

  ಮಾಜಿ ಪತ್ನಿಯ ನೆನೆದು ಕಣ್ಣೀರು ಹಾಕಿದ ಸೂರ್ಯ ಕಿರಣ್

  ಮಾಜಿ ಪತ್ನಿಯ ನೆನೆದು ಕಣ್ಣೀರು ಹಾಕಿದ ಸೂರ್ಯ ಕಿರಣ್

  ತೆಲುಗು ಬಿಗ್‌ಬಾಸ್ 4 ನಲ್ಲಿ ಮೊದಲಿಗೆ ಸ್ಪರ್ಧೆಯಿಂದ ಹೊರಗೆ ಬಂದಿದ್ದು, ಕಲ್ಯಾಣಿ ಮಾಜಿ ಪತಿ ಕಿರಣ್ ಸೂರ್ಯ. ಹೊರಗೆ ಬಂದ ನಂತರ ಹಲವು ಸುದ್ದಿ ವಾಹಿನಗಳಿಗೆ ಸಂದರ್ಶನ ನೀಡಿರುವ ಕಿರಣ್ ಸೂರ್ಯಾ ಪತ್ನಿ ಬಗ್ಗೆ ಮಾತನಾಡಿದ್ದಾರೆ.

  ಕಲ್ಯಾಣಿ ಬಿಟ್ಟರೆ ಮತ್ತೊಬ್ಬ ಮಹಿಳೆಗೆ ಸ್ಥಾನವಿಲ್ಲ: ಕಿರಣ್

  ಕಲ್ಯಾಣಿ ಬಿಟ್ಟರೆ ಮತ್ತೊಬ್ಬ ಮಹಿಳೆಗೆ ಸ್ಥಾನವಿಲ್ಲ: ಕಿರಣ್

  'ಕಲ್ಯಾಣಿ ಬಿಟ್ಟರೆ ನನ್ನ ಜೀವನದಲ್ಲಿ ಮತ್ತೊಬ್ಬ ಮಹಿಳೆಯನ್ನು ಪತ್ನಿ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಅಮ್ಮ-ಸಹೋದರಿ ಆದ ನಂತರ ನನ್ನ ಜೀವನವನ್ನು ಬೆಳಗಿದ ಮಹಿಳೆ ಕಲ್ಯಾಣಿ, ಆಕೆ ಈಗಲೂ ವಾಪಸ್ ಬಂದರೆ ಕಾಲಿಗೆ ನಮಸ್ಕರಿಸಿ ಒಳಗೆ ಕರೆದುಕೊಳ್ಳುತ್ತೇನೆ' ಎಂದು ಭಾವುಕರಾಗಿ ನುಡಿದಿದ್ದಾರೆ ಕಿರಣ್ ಸೂರ್ಯಾ.

  ಕಲ್ಯಾಣಿ ಬಿಟ್ಟುಹೋಗಿದ್ದಕ್ಕೆ ಕಾರಣ ನೀಡಿದ ಸೂರ್ಯ ಕಿರಣ್

  ಕಲ್ಯಾಣಿ ಬಿಟ್ಟುಹೋಗಿದ್ದಕ್ಕೆ ಕಾರಣ ನೀಡಿದ ಸೂರ್ಯ ಕಿರಣ್

  ಮತ್ತೊಂದು ಸಂದರ್ಶನದಲ್ಲಿ ಕಲ್ಯಾಣಿ ತಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕಾರಣ ನೀಡಿದ ಕಿರಣ್ ಸೂರ್ಯಾ, 'ಒಂದು ಸಿನಿಮಾ ನನ್ನ ಜೀವನವನ್ನೇ ಬದಲಾಯಿಸಿಬಿಟ್ಟಿತು. ಸಿನಿಮಾ ಒಂದನ್ನು ನಿರ್ಮಾಣ ಮಾಡಿ ಇದ್ದುದ್ದೆಲ್ಲವನ್ನೂ ಕಳೆದುಕೊಂಡೆ, ಕಾರುಗಳನ್ನೆಲ್ಲಾ ಮಾರಿದೆ, ನನ್ನ ಡ್ರೈವರ್ ಬೈಕ್ ನಲ್ಲಿ ಓಡಾಡುತ್ತಿದ್ದೆ. ಕಲ್ಯಾಣಿ ನನ್ನ ಬಿಟ್ಟು ಹೋಗಲು ಸಹ ಇದೇ ಕಾರಣವಿರಬಹುದು' ಎಂದಿದ್ದಾರೆ ಸೂರ್ಯ ಕಿರಣ್.

  ಶೂಟಿಂಗ್ ಬಿಟ್ಟು Rashmika ಏನ್ಮಾಡ್ತಿದ್ದಾರೆ ನೋಡಿ |Filmibeat Kannada
  ದೊಡ್ಡ ನಟಿಗೆ ಇದೆಲ್ಲಾ ಬೇಸರ ತಂದಿತ್ತು: ಕಿರಣ್

  ದೊಡ್ಡ ನಟಿಗೆ ಇದೆಲ್ಲಾ ಬೇಸರ ತಂದಿತ್ತು: ಕಿರಣ್

  'ಸಾಲ ಕೊಟ್ಟಿದ್ದ ಸಾಲಗಾರರು ಹಲವರು ಮನೆಗೆ ಬರಲು ಪ್ರಾರಂಭಿಸಿದರು. ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸಿದರು. ಕಲ್ಯಾಣಿ ಅವರಿಗೆ ಅದೆಲ್ಲಾ ಹಿಡಿಸಲಿಲ್ಲ. ದೊಡ್ಡ ನಟಿಯಾಗಿದ್ದವರು ಅವರು, ಅವರಿಗೆ ಇವೆಲ್ಲಾ ಸರಿ ಬರಲಿಲ್ಲ, ಹಾಗಾಗಿ ಬಹುಷಃ ಅವರು ನನ್ನನ್ನು ಬಿಟ್ಟು ಹೋದರು' ಎಂದಿದ್ದಾರೆ ಸೂರ್ಯ ಕಿರಣ್.

  English summary
  Actress Kalyani's ex husband Surya Kiran get emotional while talking about Kalyani. He said i am still waiting for Kalyani to come back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X