Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇವರು ಕಥೆ ಕೇಳಿ ಚೆನ್ನಾಗಿದೆ ಎಂದು ಹೇಳಿದ ಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ ಎಂದ ಶ್ರೀಲೀಲಾ!
ಶ್ರೀಲೀಲಾ ಶೀಘ್ರದಲ್ಲೇ ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯ ಸೆನ್ಸೇಷನಲ್ ನಟಿಯಾಗಿ ರಾರಾಜಿಸುವ ಎಲ್ಲಾ ಸಾಮರ್ಥ್ಯ, ಅರ್ಹತೆ ಹಾಗೂ ಸಾಧ್ಯತೆ ಇರುವ ನಟಿ. ಮೊದಲಿಗೆ ಕನ್ನಡ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಶ್ರೀಲೀಲಾ ಸದ್ಯ ಕನ್ನಡ ಹಾಗೂ ತೆಲುಗು ಸೇರಿದಂತೆ ಸುಮಾರು ನಾಲ್ಕೈದು ಚಿತ್ರಗಳಲ್ಲಿ ನಟಿಸಿದ್ದು, ಏಳೆಂಟು ಚಿತ್ರಗಳನ್ನು ಕೈಯಲ್ಲಿ ಇಟ್ಟುಕೊಂಡಿದ್ದಾರೆ ಹಾಗೂ ಸಾಕಷ್ಟು ಸಿನಿಮಾಗಳ ಆಫರ್ ಶ್ರೀಲೀಲಾರನ್ನು ಹರಸಿ ಬರುತ್ತಿವೆ.
2019ರಲ್ಲಿ ಬಿಡುಗಡೆಗೊಂಡ ಎಪಿ ಅರ್ಜುನ್ ಅಭಿನಯದ ಕನ್ನಡ ಚಿತ್ರ 'ಕಿಸ್' ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಶ್ರೀಲೀಲಾ ಅದೇ ವರ್ಷ ಶ್ರೀಮುರಳಿ ನಟನೆಯ ಭರಾಟೆ ಎಂಬ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸಿದರು. ಹೀಗೆ ಎರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟಿ ಶ್ರೀಲೀಲಾ ಮೂರನೇ ಚಿತ್ರಕ್ಕೆ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ತೆಲುಗಿನ ಹೆಸರಾಂತ ನಿರ್ದೇಶಕ ಕೊವೆಲಮುಡಿ ರಾಘವೇಂದ್ರ ರಾವ್ ಮಾರ್ಗದರ್ಶನದಡಿಯಲ್ಲಿ ಗೌರಿ ರೋಣಂಕಿ ನಿರ್ದೇಶನದ ಚಿತ್ರ 'ಪೆಳ್ಳಿ ಸಂದಡಿ' ಎಂಬ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ ಈ ಚಿತ್ರದ ಮೂಲಕ ತೆಲುಗಿನಲ್ಲೂ ಖ್ಯಾತಿ ಪಡೆದುಕೊಂಡರು.
ಈ ಚಿತ್ರದ ನಂತರ ಶ್ರೀಲೀಲಾ ಮತ್ತೆ 'ಬೈ ಟು ಲವ್' ಎಂಬ ಕನ್ನಡ ಚಿತ್ರದಲ್ಲಿ ನಟಿಸಿದರು. ಇದಾದ ಬಳಿಕ ಶ್ರೀಲೀಲಾ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಈ ಪೈಕಿ ತೆಲುಗಿನ ಮಾಸ್ ಮಹಾರಾಜ ಎಂದೇ ಖ್ಯಾತಿಯನ್ನ ಹೊಂದಿರುವ ನಟ ರವಿತೇಜಾ ನಟನೆಯ 'ಧಮಾಕಾ' ಚಿತ್ರ ಕೂಡ ಒಂದು. ಸದ್ಯ ಈ ಚಿತ್ರ ಇದೇ ತಿಂಗಳು ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರದ ಸಲುವಾಗಿ ಕೆಲ ಸಂದರ್ಶನಗಳಲ್ಲಿ ನಟಿ ಶ್ರೀಲೀಲಾ ಪಾಲ್ಗೊಳ್ಳುತ್ತಿದ್ದಾರೆ. ಗ್ರೇಟ್ ಆಂಧ್ರಾ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ ನಟಿ ಶ್ರೀಲೀಲಾ ಚಿತ್ರದ ಕುರಿತಾಗಿ ಮಾತನಾಡುವುದರ ಜತೆಗೆ ತಾವು ಚಿತ್ರಗಳನ್ನು ಯಾವ ಆಧಾರದ ಮೇಲೆ ಒಪ್ಪಿಕೊಳ್ಳುತ್ತೇನೆ ಎಂಬುದನ್ನೂ ಸಹ ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಇವರು ಕಥೆ ಕೇಳಿ ಒಪ್ಪಿಕೊಳ್ಳಬೇಕು
ಸಂದರ್ಶನದಲ್ಲಿ ನಿಮ್ಮ ಕಾಲ್ ಶೀಟ್ ಅನ್ನು ಯಾರು ನೋಡಿಕೊಳ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ಶ್ರೀಲೀಲಾ ತಮ್ಮ ತಾಯಿ ಎಲ್ಲವನ್ನೂ ನಿಭಾಯಿಸುತ್ತಾರೆ, ಚಿತ್ರದ ಕತೆ ಕೇಳುವುದರಲ್ಲೂ ಸಹ ಪಾಲ್ಗೊಳ್ಳುತ್ತಾರೆ ಎಂದು ಹೇಳಿಕೆ ನೀಡಿದರು. ಇಬ್ಬರೂ ಒಟ್ಟಿಗೆ ಕುಳಿತು ಕತೆ ಕೇಳುತ್ತೇವೆ, ಅಮ್ಮನಿಗೆ ಇಷ್ಟವಾದರೆ ಮಾತ್ರ ನಟಿಸಲು ಒಪ್ಪಿಕೊಳ್ತೇನೆ, ಅಮ್ಮನ ನಿರ್ಧಾರವೇ ಅಂತಿಮ ನಿರ್ಧಾರ ಎಂದೂ ಸಹ ಶ್ರೀಲೀಲಾ ತಿಳಿಸಿದರು.

ಪರೀಕ್ಷೆ ಇದ್ದಾಗ ಅಮ್ಮನೇ ಕಥೆ ಕೇಳ್ತಾರೆ
ಇನ್ನೂ ಮುಂದುವರಿದು ಮಾತನಾಡಿದ ಶ್ರೀಲೀಲಾ ಪರೀಕ್ಷೆ ಇದ್ದ ಸಮಯದಲ್ಲಿ ಅಮ್ಮನೇ ಕತೆಯನ್ನು ಕೇಳಿ ನಂತರ ಸಾರಾಂಶವನ್ನು ನನ್ನ ಬಳಿ ಹಂಚಿಕೊಳ್ತಾರೆ ಎಂದೂ ಸಹ ತಿಳಿಸಿದರು. ಸದ್ಯ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿರುವ ನಟಿ ಶ್ರೀಲೀಲಾ ನಟನೆಯ ಜತೆಗೆ ಎಂಬಿಬಿಎಸ್‌ಗೆ ಸಂಬಂಧಿಸಿದ ಹಲವಾರು ಪರೀಕ್ಷೆಗಳನ್ನು ಬರೆದು ಉತ್ತೀರ್ಣಳಾಗಿದ್ದೇನೆ ಎಂದೂ ಸಹ ತಿಳಿಸಿದರು.

ಶಾಲಾ ಸಮಯದಲ್ಲೇ ಆಫರ್ ಬಂದಿತ್ತು
ಇನ್ನು ತಾನು ಹೈಸ್ಕೂಲ್‌ನಲ್ಲಿರುವಾಗಲೇ ಚಿತ್ರದಲ್ಲಿ ನಟಿಸುವ ಅವಕಾಶ ಒದಗಿಬಂದಿತ್ತು ಎಂಬ ವಿಷಯವನ್ನು ನಟಿ ಶ್ರೀಲೀಲಾ ಬಿಚ್ಚಿಟ್ಟಿದ್ದಾರೆ. ಆದರೆ ಆ ಸಂದರ್ಭದಲ್ಲಿ ಓದಿನ ಕಡೆ ಗಮನ ಕೊಡುವ ಸಲುವಾಗಿ ನಟಿಸಲು ಒಪ್ಪಿರಲಿಲ್ಲ, ಬಳಿಕ ಮತ್ತೊಮ್ಮೆ ಆಫರ್ ಬಂದಾಗ ಓದು ಹಾಗೂ ನಟನೆ ಎರಡನ್ನೂ ನಿಭಾಯಿಸಬಲ್ಲೆ ಎಂದು ನಾನೇ ಸ್ವತಃ ಒಪ್ಪಿಕೊಂಡೆ ಎಂದು ನಟಿ ಶ್ರೀಲೀಲಾ ತಿಳಿಸಿದರು.

ಬರೋಬ್ಬರಿ ಏಳು ತೆಲುಗು ಚಿತ್ರಗಳಿಗೆ ಸಹಿ ಹಾಕಿದ ಶ್ರೀಲೀಲಾ
ಇನ್ನು ನಟಿ ಶ್ರೀಲೀಲಾ ನಟನೆಯ ಒಂದೇ ಒಂದು ತೆಲುಗು ಚಿತ್ರ ರಿಲೀಸ್ ಆಗಿದ್ದರೂ ಸಹ ಸದ್ಯ ಏಳು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಸುಮಾರು ಎರಡು - ಮೂರು ವರ್ಷಗಳು ಶ್ರೀಲೀಲಾ ಬ್ಯುಸಿಯಾಗುವುದು ಖಚಿತ ಎನ್ನಬಹುದು. ಶ್ರೀಲೀಲಾ ಸಹಿ ಹಾಕಿರುವ ತೆಲುಗು ಚಿತ್ರಗಳೆಂದರೆ: ಧಮಾಕಾ, ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಚಿತ್ರ, ಬೋಯಾಪತಿ ಶ್ರೀನಿವಾಸ್ ಹಾಗೂ ರಾಮ್ ಪೋತಿನೇನಿ ಕಾಂಬಿನೇಶನ್‌ನ ಚಿತ್ರ, ನಿತಿನ್ ಅಭಿನಯದ 32ನೇ ಚಿತ್ರ, ವೈಷ್ಣವ್ ತೇಜಾ ಅಭಿನಯದ 4ನೇ ಚಿತ್ರ, ಅನಗನಗಾ ಒಕ ರೋಜು, ನಂದಮೂರಿ ಬಾಲಕೃಷ್ಣ ನಟನೆಯ 108ನೇ ಚಿತ್ರ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಚಿತ್ರದಲ್ಲಿ ನಟಿ ಶ್ರೀಲೀಲಾ ಎರಡನೇ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.