For Quick Alerts
  ALLOW NOTIFICATIONS  
  For Daily Alerts

  16 ಹುಡುಗಿಯರ ಜೊತೆಗೆ ನನ್ನನ್ನು ಬಿಗ್‌ಬಾಸ್ ಮನೆಗೆ ಕಳಿಸಿ: ರಾಮ್ ಗೋಪಾಲ್ ವರ್ಮಾ

  |

  ರಾಮ್ ಗೋಪಾಲ್ ವರ್ಮಾ ಹೆಸರು ಹೇಳಿದರೆ ತೆಲುಗು ಚಿತ್ರರಂಗದಲ್ಲಿ ಕೆಲವರಿಗೆ ಹೆದರಿಕೆಯಾಗುತ್ತದೆ. ಇತ್ತೀಚೆಗೆ ತಮ್ಮ ಬೆಂಕಿಯುಂಡೆಯಂಥಹಾ ಟ್ವೀಟ್‌ಗಳು, ಸಿನಿಮಾಗಳ ಮೂಲಕ ದೊಡ್ಡ ಸ್ಟಾರ್ ನಟರುಗಳನ್ನೇ ಗೋಳಾಡಿಸಿಬಿಟ್ಟಿದ್ದಾರೆ ರಾಮ್ ಗೋಪಾಲ್ ವರ್ಮಾ.

  ಪವನ್ ಕಲ್ಯಾಣ್ ಜೀವನ ಆಧರಿಸಿ ಸಿನಿಮಾ ತೆಗೆದು ವಿವಾದ ಮೈಮೇಲೆ ಎಳೆದುಕೊಂಡ ರಾಮ್ ಗೋಪಾಲ್ ವರ್ಮಾ, ಇದೀಗ ಅರ್ನಬ್ ಗೋಸ್ವಾಮಿ ಕುರಿತು ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

  ರಾಮ್‌ ಗೋಪಾಲ್ ವರ್ಮಾ ತಂಟೆಗೆ ಹೋಗಿ ಪೆಚ್ಚಾದ ರಾಜಮೌಳಿ

  ಕೆಲವು ದಿನಗಳ ಹಿಂದಷ್ಟೆ ತೆಲುಗು ಬಿಗ್‌ಬಾಸ್‌ ಸೀಸನ್ 4 ನಲ್ಲಿನ ಸ್ಪರ್ಧಿಯೊಬ್ಬರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದ ರಾಮ್ ಗೋಪಾಲ್ ವರ್ಮಾ, ಇದೀಗ ತಾವು ಬಿಗ್‌ಬಾಸ್‌ ಗೆ ಹೋಗಲು ತಯಾರು ಆದರೆ ನನ್ನ ಕೆಲವು ಷರತ್ತುಗಳಿವೆ ಎಂದು ಹೇಳಿದ್ದಾರೆ.

  '16 ಯುವತಿಯರ ಜೊತೆಗೆ ಬಿಗ್‌ಬಾಸ್ ಮನೆಗೆ ಹೋಗುವೆ'

  '16 ಯುವತಿಯರ ಜೊತೆಗೆ ಬಿಗ್‌ಬಾಸ್ ಮನೆಗೆ ಹೋಗುವೆ'

  ರಾಮ್ ಗೋಪಾಲ್ ವರ್ಮಾ ಬಿಗ್‌ಬಾಸ್ ಮನೆಗೆ ಹೋಗಬೇಕೆಂದರೆ 16 ಮಂದಿ ಇತರೆ ಸ್ಪರ್ಧಾಳುಗಳು ಸಹ ಸುಂದರ ಯುವತಿಯರೇ ಆಗಿರಬೇಕಂತೆ. 16 ಮಂದಿ ಯುವತಿಯರೊಂದಿಗೆ ಬಿಗ್‌ಬಾಸ್ ಮನೆಯ ಒಳಗೆ ಕಳಿಸುವುದಾದರೆ ನಾನು ಬಿಗ್‌ಬಾಸ್ ಮನೆಗೆ ಹೋಗಲು ತಯಾರು ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

  ಎಷ್ಟಾದರೂ ಕ್ಯಾಮೆರಾ ಇಟ್ಟುಕೊಳ್ಳಲಿ ಡೋಂಟ್ ಕೇರ್: ವರ್ಮಾ

  ಎಷ್ಟಾದರೂ ಕ್ಯಾಮೆರಾ ಇಟ್ಟುಕೊಳ್ಳಲಿ ಡೋಂಟ್ ಕೇರ್: ವರ್ಮಾ

  ಮುಂದುವರೆದು, ಬಿಗ್‌ಬಾಸ್ ಮನೆಯಲ್ಲಿ ಎಷ್ಟಾದರೂ ಕ್ಯಾಮೆರಾಗಳು ಇಟ್ಟುಕೊಳ್ಳಲಿ ನಾನೇನು ಕೇರ್ ಮಾಡುವುದಿಲ್ಲ, ನನಗೆ ಬೇಕಾದ್ದನ್ನು ನಾನು ಮಾಡುತ್ತೇನೆ. ನೈಟ್ ವಿಷನ್ ಕ್ಯಾಮೆರಾಗಳಿಗೂ ನಾನು ಕೇರ್ ಮಾಡುವುದಿಲ್ಲ' ಎಂದು ಪರೋಕ್ಷವಾಗಿ ತಾನು ಬಿಗ್‌ಬಾಸ್ ಮನೆಗೆ ಹೋದರೆ ಏನು ಮಾಡಲಿದ್ದೇನೆ ಎಂಬುದನ್ನು ಹೇಳಿದ್ದಾರೆ.

  ಪ್ರಜಾಕೀಯ ಪಕ್ಷವನ್ನು ಮೆಚ್ಚಿ ಕೊಂಡಾಡಿದ ಖ್ಯಾತ ನಿರ್ದೇಶಕ: ಧನ್ಯವಾದ ಹೇಳಿದ ಉಪ್ಪಿ

  ಸನ್ನಿ ಲಿಯೋನ್‌ಗಾಗಿ ಶೋ ನೋಡಿದ್ದರಂತೆ ವರ್ಮಾ

  ಸನ್ನಿ ಲಿಯೋನ್‌ಗಾಗಿ ಶೋ ನೋಡಿದ್ದರಂತೆ ವರ್ಮಾ

  ರಾಮ್ ಗೋಪಾಲ್ ವರ್ಮಾ ಹೆಚ್ಚಾಗಿ ಬಿಗ್‌ಬಾಸ್ ಶೋ ನೋಡುವುದಿಲ್ಲವಂತೆ. ಅದರಲ್ಲೂ ತೆಲುಗು ಬಿಗ್‌ಬಾಸ್ ನೋಡುವುದೇ ಇಲ್ಲವಂತೆ. ಆದರೆ ನಟಿ ಸನ್ನಿ ಲಿಯೋನ್ ಹಿಂದಿ ಬಿಗ್‌ಬಾಸ್‌ಗೆ ಬಂದಿದ್ದಾಗ ಶೋ ನೋಡಿದ್ದರಂತೆ. ಸನ್ನಿ ಲಿಯೋನ್‌ಗಾಗಿ ಮಾತ್ರವೇ ಆ ಶೋ ನೋಡಿದ್ದೆ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

  ಸಮಂತಾ ಜೊತೆ ತನ್ನ ಆಸೆ ಹೇಳಿಕೊಂಡ ತಮನ್ನಾ | Filmibeat Kannada
  ಅರಿಯಾನಾಳನ್ನು ಗೆಲ್ಲಿಸಿ ಎಂದಿದ್ದ ರಾಮ್ ಗೋಪಾಲ್ ವರ್ಮಾ

  ಅರಿಯಾನಾಳನ್ನು ಗೆಲ್ಲಿಸಿ ಎಂದಿದ್ದ ರಾಮ್ ಗೋಪಾಲ್ ವರ್ಮಾ

  ತೆಲುಗು ಬಿಗ್‌ಬಾಸ್ ಅಂತಿಮ ಹಂತಕ್ಕೆ ಬಂದಿದ್ದು, ಕೆಲವು ಸ್ಪರ್ಧಿಗಳು ಮಾತ್ರವೇ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ಅದರಲ್ಲಿ, ಅರಿಯಾನ ಗ್ಲೋರಿ ಎಂಬ ಸ್ಪರ್ಧಾಳುವಿದ್ದು, ಆಕೆಯನ್ನು ಗೆಲ್ಲಿಸಿ ಎಂದು ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

  ಅಮ್ಮನಿಗೆ ವೋಡ್ಕಾ ಕುಡಿಸಲು ಪ್ರಯತ್ನಿಸಿದ ರಾಮ್ ಗೋಪಾಲ್ ವರ್ಮಾ

  English summary
  Ram Gopal Varma said he wish to go in Bigg Boss house with 16 young girls. He said i do not care about the cameras inside the house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X