ತೆಲುಗು ನಟ ಜೂನಿಯರ್ ಎನ್‌ಟಿಆರ್‌ಗೆ ಕೊರೊನಾ ಪಾಸಿಟಿವ್
ತೆಲುಗು ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್‌ಗೆ ಕೊರೊನಾ ಸೋಂಕು ತಗುಲಿದೆ. ಈ ಸುದ್ದಿಯನ್ನು ಸ್ವತಃ ಎನ್‌ಟಿಆರ್ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು, ''ನಾನು ಆರೋಗ್ಯವಾಗಿದ್ದು, ಕ್ವಾರಂಟೈನ್ ಆಗಿದ್ದೇನೆ'' ಎಂದು ತಿಳಿಸಿದ್ದಾರೆ.
''ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಆತಂಕಪಡುವ ಅಗತ್ಯವಿಲ್ಲ. ನಾನು ಆರಾಮಾಗಿದ್ದೇನೆ. ಕೊರೊನಾ ನಿಯಮಗಳನ್ನು ಪಾಲಿಸುತ್ತಿದ್ದು, ನಾನು ಮತ್ತು ನನ್ನ ಕುಟುಂಬ ಐಸೋಲೆಟ್ ಆಗಿದ್ದೇವೆ. ದಯವಿಟ್ಟು ನನ್ನ ಸಂಪರ್ಕಕ್ಕೆ ಬಂದಿದ್ದವರು ಕೂಡಲೇ ಪರೀಕ್ಷಿಸಿಕೊಳ್ಳಿ'' ಎಂದು ಎನ್‌ಟಿಆರ್ ಪೋಸ್ಟ್ ಹಾಕಿದ್ದಾರೆ.
ಎನ್‌ಟಿಆರ್‌ಗೆ ಕೋವಿಡ್ ಪಾಸಿಟಿವ್ ಬಂದ ವಿಚಾರ ತಿಳಿದ ನಂತರ ಅಭಿಮಾನಿಗಳು ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳು 'ಬೇಗ ಗುಣಮುಖರಾಗಿ' ಎಂದು ಹಾರೈಸುತ್ತಿದ್ದಾರೆ.

ಇದಕ್ಕೂ ಮುಂಚೆ ತೆಲುಗು ನಟ ರಾಮ್ ಚರಣ್ ತೇಜ, ಅಲ್ಲು ಅರ್ಜುನ್ ಅವರಿಗೂ ಸೋಂಕು ತಗುಲಿತ್ತು. ನಂತರ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಬಾಲಿವುಡ್‌ನಲ್ಲಿ ಸೋಂಕಿಗೆ ಒಳಪಟ್ಟವರ ಪಟ್ಟಿ ಬಹಳ ದೊಡ್ಡದಿದೆ. ಅಕ್ಷಯ್ ಕುಮಾರ್, ಅಮೀರ್ ಖಾನ್, ಆಲಿಯಾ ಭಟ್, ಕಾರ್ತಿಕ್ ಆರ್ಯನ್, ಆರ್ ಮಾಧವನ್, ಪರೇಶ್ ರಾವಲ್, ಫಾತಿಮಾ ಸನಾ ಶೇಖ್, ರಣ್ಬೀರ್ ಕಪೂರ್ ಸೇರಿದಂತೆ ಹಲವರಿಗೆ ಸೋಂಕು ತಗುಲಿತ್ತು.
ಇನ್ನುಳಿದಂತೆ ಜೂನಿಯರ್ ಎನ್‌ಟಿಆರ್ ಅವರು ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆಯಾಗಬೇಕಿದೆ.


Click it and Unblock the Notifications