Don't Miss!
- News
ಬೆಂಗಳೂರಿನಿಂದ ಉತ್ತರ ಕನ್ನಡದತ್ತ ಜನತೆ ವಾಪಸ್; ಏರುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ
- Education
Earth Day 2021 Google Doodle: ವಿಶ್ವ ಭೂಮಿ ದಿನದ ಅಂಗವಾಗಿ ಡೂಡಲ್ ರಚಿಸಿದ ಗೂಗಲ್
- Automobiles
ಆರ್15 ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ
- Lifestyle
ಗರ್ಭಿಣಿಯರು ಹಾಗಲಕಾಯಿ ಸೇವಿಸಬಾರದೆನ್ನಲು ಇಲ್ಲಿವೆ ಕಾರಣಗಳು
- Sports
ಬ್ಯಾಟ್ ಮತ್ತು ಗ್ಲೋವ್ಸ್ ಮೇಲೆ ಎಂಎಸ್ ಧೋನಿ ಸಹಿ ಪಡೆದ ಶೆಲ್ಡನ್ ಜಾಕ್ಸನ್
- Finance
ಏಪ್ರಿಲ್ 22ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡತಿ ಕೃತಿ ಶೆಟ್ಟಿ: ಮುಂದಿದೆ ಅವಕಾಶಗಳ ಮೂಟೆ
ಕರ್ನಾಟಕ ಮೂಲದ ನಟ-ನಟಿಯರು ಪರಭಾಷೆಯಲ್ಲಿ ಮಿಂಚುವುದು ಹೊಸದೇನಲ್ಲ. ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ರಜನೀಕಾಂತ್, ರಶ್ಮಿಕಾ ಮಂದಣ್ಣ ಹೀಗೆ ಪಟ್ಟಿ ಉದ್ದವಾಗುತ್ತಾ ಸಾಗುತ್ತದೆ. ಈ ಪಟ್ಟಿಗೆ ಹೊಸ ಹೆಸರೊಂದು ಸೇರಿಕೊಂಡಿದೆ ಅದೇ ಕೃತಿ ಶೆಟ್ಟಿ.
ನಟಿ ಕೃತಿ ಶೆಟ್ಟಿ ಈ ವರೆಗೆ ಮಾಡಿರುವುದು ಕೇವಲ ಒಂದೇ ಸಿನಿಮಾ ಆದರೆ ಆಕೆಯ ಮುಂದೆ ಅವಕಾಶಗಳ ಮೂಟೆಯೇ ಬಂದು ಬಿದ್ದಿದೆ. ಮಂಗಳೂರಿನ ಈ ಕನ್ನಡ ಭಾಷಿಕ ಚೆಲುವೆ ಮಾಡಿದ ಒಂದೇ ಸಿನಿಮಾದಲ್ಲಿ ಮೋಡಿ ಮಾಡಿಬಿಟ್ಟಿದ್ದಾರೆ.
ಕೃತಿ ಶೆಟ್ಟಿ ತೆಲುಗಿನ 'ಉಪ್ಪೆನ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಹು ದೊಡ್ಡ ಹಿಟ್ ಆಗಿ, ಹಲವು ದಾಖಲೆಗಳನ್ನು ಅಳಿಸಿ ಹೊಸ ದಾಖಲೆಯನ್ನು ಬರೆದಿದೆ. ಮಹೇಶ್ ಬಾಬು, ಚಿರಂಜೀವಿ ಅಂಥಹಾ ಸ್ಟಾರ್ ನಟರುಗಳು ಸಿನಿಮಾ ಬಗ್ಗೆ ಬಹು ಹೊಗಳಿಕೆಯ ಮಾತನ್ನಾಡಿದ್ದಾರೆ. ಚಿರಂಜೀವಿ ಅಂತೂ ಕೃತಿ ಶೆಟ್ಟಿಯನ್ನು ಬಹುವಾಗಿ ಹೊಗಳಿದ್ದಾರೆ.

ಮಂಗಳೂರಿನ ಚೆಲುವೆ ಕೃತಿ ಶೆಟ್ಟಿ
ನಟಿ ಕೃತಿ ಶೆಟ್ಟಿ ಮಂಗಳೂರಿನಲ್ಲಿ ಜನಿಸಿದರು ಬೆಳೆದಿದ್ದು ಮುಂಬೈ ನಲ್ಲಿ. ಹಲವು ಜಾಹೀರಾತುಗಳಲ್ಲಿ ನಟಿಸಿರುವ ಈ ನಟಿಗೆ 'ಉಪ್ಪೆನ' ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂತು. ಹೀಗೆ ಬಂದ ಅವಕಾಶವನ್ನು ಎರಡೂ ಕೈಯಲ್ಲಿ ಬಾಚಿಕೊಂಡ ಕೃತಿ, ತಮ್ಮ ಪ್ರತಿಭಾ ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ವೈಷ್ಣವ್ ತೇಜ್‌ಗೂ ಇದು ಮೊದಲ ಸಿನಿಮಾ
'ಉಪ್ಪೆನ' ಸಿನಿಮಾದಲ್ಲಿ ಮೆಗಾಸ್ಟಾರ್ ಕುಟುಂಬದ ಕುಡಿಯಾಗಿರುವ ವೈಷ್ಣವ್ ತೇಜ್ ಜೊತೆ ತೆರೆ ಹಂಚಿಕೊಂಡಿದ್ದಾರೆ ಕೃತಿ. ಸಿನಿಮಾವನ್ನು ನಿರ್ಮಾಣ ಮಾಡಿರುವುದು ಪ್ರತಿಷ್ಠಿತ ಮೈತ್ರೀ ಮೂವೀಸ್. ನಟ ವೈಷ್ಣವ್ ತೇಜ್ ಗೂ ಸಹ ಇದು ಮೊದಲ ಸಿನಿಮಾ.

ಕೃತಿ ಶೆಟ್ಟಿಗೆ ಇನ್ನೂ 17 ವರ್ಷ ವಯಸ್ಸು
ಕೇವಲ 17 ವರ್ಷ ವಯಸ್ಸಿನ ಕೃತಿ ಶೆಟ್ಟಿಗೆ ಈಗ ಅವಕಾಶಗಳ ಮೇಲೆ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಶ್ಯಾಮ್ ಸಿಂಗ್ ರಾಯ್ ಸಿನಿಮಾದಲ್ಲಿ ಪಾತ್ರವೊಂದನ್ನು ಮಾಡುತ್ತಿದ್ದಾರೆ ಕೃತಿ. ಇದಾದ ಬಳಿಕ ಸುಧೀರ್ ಬಾಬು ನಾಯಕರಾಗಿರುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಒಮ್ಮೆಲೆ ಸಂಭಾವನೆ ಏರಿಸಿಕೊಂಡಿರುವ ಕೃತಿ ಈಗ ಸಿನಿಮಾವೊಂದಕ್ಕೆ 85 ಲಕ್ಷ ಡಿಮಾಂಡ್ ಮಾಡುತ್ತಿದ್ದಾರಂತೆ.

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗುತ್ತಿದೆ 'ಉಪ್ಪೆನ'
'ಉಪ್ಪೆನ' ಸಿನಿಮಾ ಒಂದು ಸುಂದರ ಪ್ರೇಮಕತೆಯಾಗಿದ್ದು. ನಾಯಕ, ನಾಯಕಿ ಹಾಗೂ ನಿರ್ದೇಶಕ ಮೂವರಿಗೂ ಉಪ್ಪೆನ ಮೊದಲ ಸಿನಿಮಾ. ಸಿನಿಮಾವು ಏಪ್ರಿಲ್ ತಿಂಗಳಿನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ಚಿತ್ರಮಂದಿರಗಳಲ್ಲಿ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿರುವ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ.