For Quick Alerts
  ALLOW NOTIFICATIONS  
  For Daily Alerts

  ಹೈದರಾಬಾದ್‌ನಲ್ಲಿ ನಟ ಯಶ್ ಹಾಗೂ ಆಂಧ್ರ ರಾಜಕೀಯ ಮುಖಂಡ ನಾರಾ ಲೋಕೇಶ್ ಭೇಟಿ

  |

  'KGF' ಸಿನಿಮಾ ನಂತರ ರಾಕಿಂಗ್ ಸ್ಟಾರ್ ಯಶ್ ಎಲ್ಲೇ ಹೋದರು, ಎಲ್ಲೇ ಬಂದರೂ ಸುದ್ದಿಯಾಗುತ್ತದೆ. ಒಂದ್ಕಡೆ ಯಶ್ ಮುಂದಿನ ಚಿತ್ರ ಯಾವುದೇ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಯಶ್ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪುತ್ರ, ಮಾಜಿ ಸಚಿವ ನಾರಾ ಲೋಕೇಶ್ ಅವರನ್ನು ಭೇಟಿ ಮಾಡಿದ್ದಾರೆ. ಆ ಫೋಟೊಗಳು ಈಗ ವೈರಲ್ ಆಗಿದೆ.

  ಇಂದು (ಡಿಸೆಂಬರ್ 15) ಹೈದರಾಬಾದ್‌ಗೆ ಭೇಟಿ ನೀಡಿದ್ದ ಯಶ್ ಹೋಟೆಲ್‌ವೊಂದರಲ್ಲಿ ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಆದರೆ ಯಶ್ ಹಾಗೂ ನಾರಾ ಲೋಕೇಶ್ ಭೇಟಿಗೆ ಕಾರಣ ಏನು? ಈ ವೇಳೆ ಇಬ್ಬರು ಯಾವ ವಿಚಾರದ ಬಗ್ಗೆ ಮಾತನಾಡಿದರು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಇವರಿಬ್ಬರ ಭೇಟಿ ಅತ್ತ ರಾಜಕೀಯರಂಗ ಹಾಗೂ ಇತ್ತ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ.

  "ಯಶ್ ಅವಕಾಶ ಕೇಳಿಕೊಂಡು ಬಂದಾಗ ನಾನು ರಿಜೆಕ್ಟ್ ಮಾಡಿದ್ದೆ": ಕುಮಾರ್ ಗೋವಿಂದ್

  'KGF - 2' ನಂತರ ಯಶ್ ಯಾವುದೇ ಚಿತ್ರಕ್ಕೂ ಗ್ರೀನ್‌ ಸಿಗ್ನಲ್ ಕೊಟ್ಟಿಲ್ಲ. ಸ್ಟಾರ್ ನಟರು ಒಂದು ಸಿನಿಮಾ ಮುಗಿಯೋಕು ಮೊದ್ಲೆ ಮತ್ತೊಂದು ಸಿನಿಮಾ ಲೈನ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಯಶ್ 'KGF - 2' ರಿಲೀಸ್ ಆಗಿ 7 ತಿಂಗಳು ಕಳೆದರೂ ಸೈಲೆಂಟ್ ಆಗಿದ್ದಾರೆ. ನರ್ತನ್ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅದು ಇನ್ನು ಪಕ್ಕಾ ಆಗಿಲ್ಲ.

  KGF Actor Yash Meets former AP Minister Nara Lokesh

  ಯಶ್ ಬಾಲಿವುಡ್‌ಗೆ ಹೋಗುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಸ್ವತಃ ಯಶ್ ಹೇಳಿದ್ದರು. ನನ್ನ ಮುಂದಿನ ಸಿನಿಮಾ ಬಗ್ಗೆ ಯಾವುದೇ ಊಹಾಪೋಹಗಳನ್ನು ನಂಬಬೇಡಿ. ನಾನೇ ಅಧಿಕೃತ ಮಾಹಿತಿ ನೀಡುತ್ತೇನೆ ಎಂದಿದ್ದರು. ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ. ಅದೇ ಸಂಭ್ರಮದಲ್ಲಿ ತಮ್ಮ ಮುಂದಿನ ಸಿನಿಮಾ ಘೋಷಿಸುತ್ತಾರೆ ಎನ್ನಲಾಗುತ್ತಿದೆ. 'KGF - 2' ಸಕ್ಸಸ್ ನಂತರ ಕಥೆಯ ಆಯ್ಕೆ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಬಹಳ ಎಚ್ಚರಿಕೆಯ ಹೆಜ್ಜೆ ಇಟ್ಟಂತೆ ಕಾಣುತ್ತಿದೆ.

  English summary
  KGF Actor Yash Meets former AP Minister Nara Lokesh. The meeting between Yash and a TDP MLC has drawn interest from both the political and cinema worlds. Know more.
  Thursday, December 15, 2022, 20:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X