For Quick Alerts
  ALLOW NOTIFICATIONS  
  For Daily Alerts

  ನಟಿಯ ಆತ್ಮಹತ್ಯೆ ಪ್ರಕರಣ: ಇಬ್ಬರನ್ನು ಬಂಧಿಸಿದ ಪೊಲೀಸರು

  |

  ತೆಲುಗಿನ ಯುವ ನಟಿ, ಟಿವಿ ನಿರೂಪಕಿ ಕೊಂಡಪಲ್ಲಿ ಶ್ರಾವಣಿ ಸೆಪ್ಟೆಂಬರ್ 8 ರಂದು ಹೈದರಾಬಾದ್‌ನ ಮಧುರಾನಗರದ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

  ಕೆಲವರ ಕಿರುಕುಳದಿಂದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶ್ರಾವಣಿ ಪೋಷಕರು ಆರೋಪಿಸಿದ್ದರು. ನಿರ್ಮಾಪಕರೊಬ್ಬರ ಹೆಸರು ಸಹ ಪ್ರಕರಣದಲ್ಲಿ ಕೇಳಿಬಂದಿತ್ತು, ಹಾಗಾಗಿ ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸಿದೆ.

  ಗೆಳೆಯನ ಕಿರುಕುಳ: ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆಗೆ ಶರಣು

  ಪ್ರಕರಣದ ತನಿಖೆ ನಡೆಸುತ್ತಿರುವ ಹೈದರಾಬಾದ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.

  ನಟಿ ಶ್ರಾವಣಿಯ ಪ್ರಿಯಕರನಾದ ದೇವರಾಜ್ ರೆಡ್ಡಿ ಹಾಗೂ ಶ್ರಾವಣಿಯ ಮಾಜಿ ಪ್ರಿಯಕರ ಸಾಯಿಕೃಷ್ಣ ರೆಡ್ಡಿ ಎಂಬ ಇಬ್ಬರನ್ನು ಬಂಧಿಸಿರುವ ಪೊಲೀಸರು, ನಿರ್ಮಾಪಕ ಅಶೋಕ್ ರೆಡ್ಡಿ ಎಂಬಾತನ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಶ್ರಾವಣಿ, ಸಾಯಿಕೃಷ್ಣ ಪ್ರೀತಿಸುತ್ತಿದ್ದರು

  ಶ್ರಾವಣಿ, ಸಾಯಿಕೃಷ್ಣ ಪ್ರೀತಿಸುತ್ತಿದ್ದರು

  ಪೊಲೀಸರು ಹೇಳಿರುವಂತೆ, ನಟಿ ಶ್ರಾವಣಿಯು ಮೊದಲಿಗೆ ಸಾಯಿಕೃಷ್ಣ ರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದರು. ಆತ ಶ್ರಾವಣಿಯ ಮನೆಯವರಿಗೆ ಹಣಕಾಸು ನೆರವನ್ನೂ ಒದಗಿಸುತ್ತಿದ್ದ. ಆದರೆ ನಂತರ ಶ್ರಾವಣಿ ಟಿಕ್‌-ಟಾಕ್‌ನಲ್ಲಿ ಪರಿಚಯವಾದ ದೇವರಾಜ್ ರೆಡ್ಡಿ ಎಂಬಾತನನ್ನು ಪ್ರೀತಿಸಲು ಪ್ರಾರಂಭಿಸಿದಳು.

  ಶ್ರಾವಣಿ ಮೇಲೆ ಹಲ್ಲೆ ಮಾಡಿದ್ದ ಸಾಯಿಕೃಷ್ಣ

  ಶ್ರಾವಣಿ ಮೇಲೆ ಹಲ್ಲೆ ಮಾಡಿದ್ದ ಸಾಯಿಕೃಷ್ಣ

  ಇಬ್ಬರೂ ಹೋಟೆಲ್‌ನಲ್ಲಿ ಜೊತೆಗಿರುವುದನ್ನು ಕಂಡ ಸಾಯಿಕೃಷ್ಣ ರೆಡ್ಡಿ ಶ್ರಾವಣಿ ಕುಟುಂಬದವರನ್ನು ಕರೆಸಿ ಗಲಾಟೆ ಮಾಡಿದ್ದ. ಶ್ರಾವಣಿಗೆ ಸಹ ಹೊಡೆದಿದ್ದ. ಮನೆಯಲ್ಲಿಯೂ ಶ್ರಾವಣಿಯ ಮೇಲೆ ಪೋಷಕರು ಹಲ್ಲೆ ಮಾಡಿದ್ದರು. ಇದೆಲ್ಲಾ ಆದ ಮೇಲೆ ದೇವರಾಜ್ ಸಹ ಶ್ರಾವಣಿಯಿಂದ ದೂರವಾದ.

  ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಜಯಪ್ರಕಾಶ್ ರೆಡ್ಡಿ ನಿಧನ

  ಅಶೋಕ್ ರೆಡ್ಡಿ ಸಹ ದೂರು ಹೇಳಿದ್ದ

  ಅಶೋಕ್ ರೆಡ್ಡಿ ಸಹ ದೂರು ಹೇಳಿದ್ದ

  ಈ ನಡುವೆ ನಿರ್ಮಾಪಕ ಅಶೋಕ್ ರೆಡ್ಡಿ ಜೊತೆಗೂ ಶ್ರಾವಣಿ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಆತನೂ ಸಹ ದೇವರಾಜ್ ವಿರುದ್ಧ ಶ್ರಾವಣಿ ಕುಟುಂಬಕ್ಕೆ ದೂರುಗಳನ್ನು ಹೇಳಿದ್ದನು. ದೇವರಾಜ್ ಅನ್ನು ಬೆದರಿಸಿದ್ದನು ಸಹ.

  ಸಾಯುವ ದಿನ ದೇವರಾಜ್ ಗೆ ಶ್ರಾವಣಿ ಕರೆ

  ಸಾಯುವ ದಿನ ದೇವರಾಜ್ ಗೆ ಶ್ರಾವಣಿ ಕರೆ

  ಶ್ರಾವಣಿ ಸಾಯುವ ದಿನ ದೇವರಾಜ್ ಗೆ ಕರೆ ಮಾಡಿ, ತನ್ನನ್ನು ಮದುವೆ ಆಗುವಂತೆ ಒತ್ತಾಯಿಸಿದ್ದಾಳೆ. ಆದರೆ ದೇವರಾಜ್ ಮದುವೆ ಆಗುವುದಿಲ್ಲ ಎಂದಿದ್ದಾನೆ. ದೇವರಾಜ್ ತಾಯಿ ಬಳಿ ಸಹ ಶ್ರಾವಣಿ ಮಾತನಾಡಿದ್ದಾಳೆ. ಆದರೆ ಅವರೂ ಸಹ ಮದುವೆ ಸಾಧ್ಯವಿಲ್ಲವೆಂದಿದ್ದಾರೆ. ಕೊನೆಗೆ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
  ಪರಸ್ಪರರ ಮೇಲೆ ದೂರು ಕೊಟ್ಟಿಕೊಂಡಿದ್ದರು

  ಪರಸ್ಪರರ ಮೇಲೆ ದೂರು ಕೊಟ್ಟಿಕೊಂಡಿದ್ದರು

  ಶ್ರಾವಣಿ ಸಾವಿಗೆ ದೇವರಾಜ್ ಕಾರಣ ಎಂದು ಶ್ರಾವಣಿ ಕುಟುಂಬದವರು ಹೇಳುತ್ತಿದ್ದು, ದೇವರಾಜ್, ಕೆಲವು ವಿಡಿಯೋಗಳನ್ನು ಇಟ್ಟುಕೊಂಡು ಶ್ರಾವಣಿಯನ್ನು ಹಣಕ್ಕಾಗಿ ಬೆದರಿಸುತ್ತಿದ್ದ ಎಂದಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೆ, ಶ್ರಾವಣಿ ಮತ್ತು ದೇವರಾಜ್ ಪರಸ್ಪರ ಒಬ್ಬರಮೇಲೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿಕೊಂಡಿದ್ದರು.

  English summary
  Devaraj Reddy and Saikrishna Reddy arrested in actress Kondapalli Sravani Suicide Case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X