Just In
Don't Miss!
- Sports
ಕೊಹ್ಲಿ-ಸ್ಟೋಕ್ಸ್ ಮಧ್ಯೆ ಮಾತಿನ ಚಕಮಕಿ, ಅಂಪೈರ್ಗಳ ಮಧ್ಯ ಪ್ರವೇಶ: ವಿಡಿಯೋ
- News
ಪಶ್ಚಿಮ ಬಂಗಾಳ ಚುನಾವಣೆ; ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಬದಲಾವಣೆ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Education
IIMB Recruitment 2021: ಅಕಾಡೆಮಿಕ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಭಾಸ್ ಮದುವೆ ಯಾವಾಗ? ದೊಡ್ಡಪ್ಪ ಕೃಷ್ಣಂರಾಜು ಹೇಳಿದ್ದು ಹೀಗೆ
ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್‌ಗಳಲ್ಲಿ ಮೊದಲಿಗರು ನಟ ಪ್ರಭಾಸ್. ಇವರ ಸಿನಿಮಾಗಳ ಬಗ್ಗೆ ನಡೆವ ಚರ್ಚೆಗಳಿಗಿಂತಲೂ ಹೆಚ್ಚಾಗಿ ಪ್ರಭಾಸ್ ಮದುವೆ ಬಗ್ಗೆ ನಡೆಯುತ್ತಿರುತ್ತದೆ.
41 ವರ್ಷದ ನಟ ಪ್ರಭಾಸ್ ಗೆ ಮದುವೆ ಯಾವಾಗ ಎಂಬುದು ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆ ಯಾಗಿಬಿಟ್ಟಿದೆ. ಬಾಲಿವುಡ್ ನ ಸಲ್ಮಾನ್ ಖಾನ್ ನಂತೆ 'ಫಾರ್‌ಎವರ್ ಬ್ಯಾಚ್ಯುಲರ್' ಆಗಿಬಿಡುತ್ತಾರಾ ಪ್ರಭಾಸ್ ಎಂಬ ಆತಂಕವೂ ಅವರ ಅಭಿಮಾನಿಗಳಿಗಿದೆ.
ಬಾಹುಬಲಿ ನಂತರ ಪ್ರಭಾಸ್ ಮದುವೆ ಇನ್ನೇನು ಆಗಿಯೇ ಬಿಟ್ಟಿತು ಎನ್ನಲಾಗಿತ್ತು. ಆದರೆ ಹಾಗಾಗಲಿಲ್ಲ. ಇದೀಗ ಪ್ರಭಾಸ್ ದೊಡ್ಡಪ್ಪ, ನಟ, ರಾಜಕಾರಣಿ ಕೃಷ್ಣಂರಾಜು ತಮ್ಮ ಮಗನ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಪ್ರಭಾಸ್ ಮದುವೆ ಬಗ್ಗೆ ಕೃಷ್ಣಂರಾಜು ಗೆ ಪ್ರಶ್ನೆ
ಕೃಷ್ಣಂರಾಜು ಹುಟ್ಟುಹಬ್ಬ ಜನವರಿ 20 ರಂದಿತ್ತು. ಅದೇ ದಿನ ತೆಲುಗಿನ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು ಕೃಷ್ಣಂರಾಜು. ತಮ್ಮ ಸಿನಿ ವೃತ್ತಿ, ರಾಜಕಾರಣ ಜೀವನ, ಕುಟುಂಬ, ತಮ್ಮನ ಮಗ ಪ್ರಭಾಸ್, ಅವರ ಸಿನಿಮಾಗಳು ಎಲ್ಲವನ್ನೂ ಮಾತನಾಡಿದ ಕೃಷ್ಣಂರಾಜುಗೆ ಅಂತಿಮವಾಗಿ ಪ್ರಭಾಸ್ ಮದುವೆ ಬಗ್ಗೆ ಪ್ರಶ್ನೆಯೂ ಎದುರಾಯಿತು.

ಪ್ರಭಾಸ್ ಮದುವೆ ಬಗ್ಗೆ ದೊಡ್ಡಪ್ಪನ ಮಾತು
ಪ್ರಭಾಸ್ ಮದುವೆ ಯಾವಾಗ? ಎಂದು ನಿರೂಪಕಿ ಕೇಳಿದ ಪ್ರಶ್ನೆಗೆ ಜೋರಾಗಿ ನಕ್ಕು ಉತ್ತರಿಸಿದ ಕೃಷ್ಣಂರಾಜು, 'ಪ್ರಭಾಸ್ ಮದುವೆ ಯಾವಾಗ ಆಗಬೇಕೋ ಆವಾಗ ಆಗಿಯೇ ತೀರುತ್ತದೆ. ಪ್ರಭಾಸ್ ಮದುವೆಗಾಗಿ ನೀವೆಷ್ಟು ಕಾತರದಿಂದ ಕಾಯುತ್ತಿದ್ದೀರೋ ನಾವೂ ಸಹ ಅಷ್ಟೇ ಕಾತರದಿಂದ ಕಾಯುತ್ತಿದ್ದೀವಿ' ಎಂದಿದ್ದಾರೆ ಕೃಷ್ಣಂರಾಜು.

ಪ್ರಭಾಸ್-ಅನುಷ್ಕಾ ಶೆಟ್ಟಿ ಬಗ್ಗೆ ಗಾಳಿ ಸುದ್ದಿ
ಬಾಹುಬಲಿ ಸಿನಿಮಾದ ನಂತರ ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಾರೆ ಎನ್ನಲಾಗಿತ್ತು. ಪ್ರಭಾಸ್-ಅನುಷ್ಕಾ ಶೆಟ್ಟಿ ಬಗ್ಗೆ ಆಗಾಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಲೇ ಇತ್ತು. ಆದರೆ ಈ ಗಾಳಿ ಸುದ್ದಿಯನ್ನು ಅನುಷ್ಕಾ ತಳ್ಳಿ ಹಾಕಿದರು. ಇಬ್ಬರೂ ಕೇವಲ ಒಳ್ಳೆ ಗೆಳೆಯರಷ್ಟೆ ಎಂದು ಹೇಳಿದರು.

ಭಾರಿ ಬೇಡಿಕೆಯ ನಟ ಪ್ರಭಾಸ್
ನಟ ಪ್ರಭಾಸ್ ಭಾರತದ ಭಾರಿ ಬೇಡಿಕೆಯ ನಟರಲ್ಲಿ ಒಬ್ಬರು. ಈಗಷ್ಟೆ ರಾಧೆ-ಶ್ಯಾಂ ಸಿನಿಮಾ ಮುಗಿಸಿರುವ ಪ್ರಭಾಸ್. ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಹಾಗೂ ಓಂ ರಾವತ್ ನಿರ್ದೇಶಿಸಲಿರುವ ಭಾರತದ ಅತಿ ಹೆಚ್ಚು ಬಜೆಟ್‌ನ ಸಿನಿಮಾ 'ಆದಿಪುರುಷ್' ನಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಲಿದ್ದಾರೆ.