For Quick Alerts
  ALLOW NOTIFICATIONS  
  For Daily Alerts

  'ಉಪ್ಪೇನಾ' ನಟಿ ಕೃತಿ ಶೆಟ್ಟಿಯ ಎರಡನೇ ಸಿನಿಮಾ ಆರಂಭ

  |

  ತೆಲುಗಿನ 'ಉಪ್ಪೇನಾ' ಚಿತ್ರದ ಮೂಲಕ ಸೋಶಿಯಲ್ ಮೀಡಿಯಾ ಕ್ರಶ್ ಎನಿಸಿಕೊಂಡ ಕೃತಿ ಶೆಟ್ಟಿ ಚೊಚ್ಚಲ ಚಿತ್ರದಲ್ಲೇ ಗಮನ ಸೆಳೆದರು. ಅದು ಯಾವ ಮಟ್ಟಿಗೆ ಅಂದ್ರೆ ಫೇಸ್‌ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್, ವಾಟ್ಸಾಪ್ ಎಲ್ಲೇ ನೋಡಿದರೂ ಕೃತಿ ಶೆಟ್ಟಿನೇ ಕಾಣ್ತಿದ್ರು.

  ಮೊದಲ ನೋಟದಲ್ಲೇ ಅಪಾರ ಅಭಿಮಾನಿಗಳನ್ನ ಗಳಿಸಿಕೊಂಡ ಕೃತಿ ಶೆಟ್ಟಿಯ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಹಜವಾಗಿ ಕಾಡ್ತಿತ್ತು. 'ಉಪ್ಪೇನಾ' ಹುಡುಗಿಯ ಹೊಸ ಸಿನಿಮಾ ಇಂದು (ಜುಲೈ 7) ಅರಂಭವಾಗಿದೆ.

  ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡತಿ ಕೃತಿ ಶೆಟ್ಟಿ: ಮುಂದಿದೆ ಅವಕಾಶಗಳ ಮೂಟೆತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡತಿ ಕೃತಿ ಶೆಟ್ಟಿ: ಮುಂದಿದೆ ಅವಕಾಶಗಳ ಮೂಟೆ

  ತಮಿಳಿನ ಸ್ಟಾರ್ ನಿರ್ದೇಶಕ ಲಿಂಗಸ್ವಾಮಿ ಮತ್ತು ತೆಲುಗು ನಟ ರಾಮ್ ಪೊಥಿನೆನಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 'RAP019' ಹೆಸರಿನಲ್ಲಿ ಸಿನಿಮಾಗೆ ಚಾಲನೆ ಸಿಕ್ಕಿದೆ. ಮುಂದೆ ಓದಿ...

  ಜುಲೈ 12 ರಿಂದ ಶೂಟಿಂಗ್

  ಜುಲೈ 12 ರಿಂದ ಶೂಟಿಂಗ್

  ಶ್ರೀನಿವಾಸ್ ಚಿತ್ತುರಿ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದು, ಜುಲೈ 12ರಿಂದ ಶೂಟಿಂಗ್ ಆರಂಭವಾಗಲಿದೆ ಎಂಬ ಮಾಹಿತಿ ಇದೆ. ಅದಕ್ಕೂ ಮುಂಚೆ ಜುಲೈ 7 ರಂದು ಅಧಿಕೃತವಾಗಿ ಸಿನಿಮಾ ಕುರಿತು ಘೋಷಣೆ ಮಾಡಲಾಗಿದೆ. ನಿರ್ದೇಶಕ ಲಿಂಗಸ್ವಾಮಿ, ನಟ ರಾಮ್, ನಟಿ ಕೃತಿ ಹಾಗೂ ನಿರ್ಮಾಪಕರು ಭೇಟಿ ಮಾಡಿ ಸಿನಿಮಾಗೆ ಚಾಲನೆ ಕೊಟ್ಟಿದ್ದಾರೆ.

  ಎರಡು ಭಾಷೆಯಲ್ಲಿ ಸಿನಿಮಾ

  ಎರಡು ಭಾಷೆಯಲ್ಲಿ ಸಿನಿಮಾ

  ತೆಲುಗು ಮತ್ತು ತಮಿಳಿನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಸದ್ಯಕ್ಕೆ ಚಿತ್ರದ ಹೆಸರು ಬಹಿರಂಗವಾಗಿಲ್ಲ. ಇನ್ನುಳಿದಂತೆ ಕೃತಿ ಶೆಟ್ಟಿ ನಾಯಕಿ ಎನ್ನುವುದು ಮಾತ್ರ ಹೊರಬಿದ್ದಿದ್ದು, ಉಳಿದ ಕಲಾವಿದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದ್ದಾರೆ.

  ಮೆಗಾ ಫ್ಯಾಮಿಲಿ ನಟನ ಸಿನಿಮಾಕ್ಕೆ ಒಲ್ಲೆ ಎಂದ ಕನ್ನಡತಿ ಕೃತಿ ಶೆಟ್ಟಿಮೆಗಾ ಫ್ಯಾಮಿಲಿ ನಟನ ಸಿನಿಮಾಕ್ಕೆ ಒಲ್ಲೆ ಎಂದ ಕನ್ನಡತಿ ಕೃತಿ ಶೆಟ್ಟಿ

  ಲಿಂಗಸ್ವಾಮಿ ಕುರಿತು

  ಲಿಂಗಸ್ವಾಮಿ ಕುರಿತು

  ನಿರ್ದೇಶಕ ಲಿಂಗಸ್ವಾಮಿ ಕುರಿತು ಹೇಳುವುದಾದರೆ 2001ರಲ್ಲಿ ಆನಂದಂ ಎಂಬ ಸಿನಿಮಾ ಮೂಲಕ ಡೈರೆಕ್ಷನ್ ಶುರು ಮಾಡಿದರು. ನಂತರ ರನ್, ಜಿ, ಸಂಡೈಕೋಳಿ, ಭೀಮ, ಪೈಯಾ, ವೇಟೈ, ಅಂಜನ್, ಸಂಡೈಕೋಳಿ 2 ಸಿನಿಮಾಗಳನ್ನು ನಿರ್ದೇಶಿಸಿದ್ದರು.

  ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಟ ನಟಿಯಾದ ಹರಿಪ್ರಿಯಾ | Filmibeat Kannada
  ಕೃತಿ ಶೆಟ್ಟಿ ಮುಂದಿನ ಸಿನಿಮಾಗಳು

  ಕೃತಿ ಶೆಟ್ಟಿ ಮುಂದಿನ ಸಿನಿಮಾಗಳು

  ರಾಮ್ ಪೊಥಿನೆನಿ ಜೊತೆಗಿನ ಸಿನಿಮಾ ಬಿಟ್ಟು ಇನ್ನು ಎರಡು ಪ್ರಾಜೆಕ್ಟ್‌ಗಳಲ್ಲಿ ಕೃತಿ ನಟಿಸುತ್ತಿದ್ದಾರೆ. ನಾನಿ ಜೊತೆ ಒಂದು ಸಿನಿಮಾ, ಸುಧೀರ್ ಬಾಬು ಜೊತೆ ಮತ್ತೊಂದು ಸಿನಿಮಾ. ಸದ್ಯಕ್ಕೆ ಮೂರು ಚಿತ್ರಗಳಿಗೆ ಮಾತ್ರ ಸಹಿ ಮಾಡಿದ್ದೇನೆ ಸ್ವತಃ ಕೃತಿ ಪೋಸ್ಟ್ ಹಾಕಿದ್ದರು.

  English summary
  Telugu actor Ram Pothineni and Krithi Shetty starrer RAMPO19 film shooting starts from 12th July.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X