Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹೇಶ್ ಬಾಬುವನ್ನು ಸ್ಟಾರ್‌ನಿಂದ ಸೂಪರ್ ಸ್ಟಾರ್ ಮಾಡಿದ ಸಿನಿಮಾಕ್ಕೆ 18 ವರ್ಷ
ಸ್ಟಾರ್ ನಟ ಆಗಿದ್ದ ಮಹೇಶ್ ಬಾಬು ಅನ್ನು ಸೂಪರ್ ಸ್ಟಾರ್ ಅನ್ನಾಗಿ ಮಾಡಿದ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಮಹೇಶ್ ಬಾಬು ಗೆ ಉಡುಗೊರೆಯಾಗಿ ಕೊಟ್ಟ ಸಿನಿಮಾ 'ಒಕ್ಕಡು' ಬಿಡುಗಡೆ ಆಗಿ ನಿನ್ನೆಗೆ 18 ವರ್ಷ.
ಹೌದು, ತೆಲುಗು 'ಕಲ್ಟ್ ಸಿನಿಮಾ'ಗಳಲ್ಲಿ ಒಂದು ಎನಿಸಿಕೊಂಡಿರುವ 'ಒಕ್ಕಡು' ಸಿನಿಮಾ ಬರೋಬ್ಬರಿ 18 ವರ್ಷದ ಹಿಂದೆ ಜನವರಿ 15, 2003 ರಂದು ಬಿಡುಗಡೆ ಆಗಿತ್ತು. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆದ ಈ ಸಿನಿಮಾ ತೆಲುಗು ಸಿನಿಮಾ ರಂಗದಲ್ಲಿ ಇತಿಹಾಸ ಸೃಷ್ಟಿಸಿತು.
ಆ ವರೆಗೆ 'ರಾಜಕುಮಾರುಡು', 'ಯುವರಾಜ', 'ಮುರಾರಿ' ಅಂಥವಾ ಕೌಟುಂಬಿಕ ಕತೆಗಳ ಮೂಲಕ ಮಾತ್ರವೇ ಹಿಟ್ ನೋಡಿದ್ದ ಮಹೇಶ್ ಬಾಬು ಗೆ ಮಾಸ್ ಇಮೇಜು ಕೊಟ್ಟ ಜೊತೆಗೆ ದೊಡ್ಡ ಸಂಖ್ಯೆಯ ಮಾಸ್ ಅಭಿಮಾನಿಗಳನ್ನು ಹುಟ್ಟುಹಾಕಿದ ಸಿನಿಮಾ 'ಒಕ್ಕಡು'.

ಫ್ಲಾಪ್ ಸಿನಿಮಾ ನೀಡಿದ್ದ ಗುಣಶೇಖರ್
ಚಿರಂಜೀವಿ ನಾಯಕರಾಗಿದ್ದ 'ಮೃಗರಾಜು' ಸಿನಿಮಾ ನಿರ್ದೇಶಿಸಿ ಕೈಸುಟ್ಟುಕೊಂಡಿದ್ದ ಗುಣಶೇಖರ್ ದೊಡ್ಡ ಹಿಟ್ ಗಾಗಿ ಹುಡುಕುತ್ತಿದ್ದಾಗ. ಕೆಲವು ನಿರ್ಮಾಪಕರು ಬೇಡವೆಂದಿದ್ದ ಕತೆ 'ಒಕ್ಕಡು' ಅನ್ನು ತಾವು ಸಿನಿಮಾ ಮಾಡುವುದಾಗಿ ಒಪ್ಪಿಕೊಂಡವರು ನಿರ್ಮಾಪಕ ಎಂ.ಎಸ್.ರಾಜು.

ಅದ್ಭುತವಾಗಿ ನಟಿಸಿದ್ದ ಪ್ರಕಾಶ್ ರೈ
ಸಿನಿಮಾದಲ್ಲಿ ನಟ ಮಹೇಶ್ ಬಾಬು, ನಟಿ ಭೂಮಿಕಾ ಅಷ್ಟೇ ಗಮನ ಸೆಳೆದಿದ್ದು ಖಳನಾಯಕ ಪಾತ್ರಧಾರಿ ಪ್ರಕಾಶ್ ರೈ. ಭಿನ್ನ ರೀತಿಯ ಫೈಟ್ ಮಾಡುವಲ್ಲಿ ಹೆಸರುವಾಸಿಯಾದ, ಬಹು ಕೋಪಿಷ್ಟ ಹಠದ ಸ್ವಭಾವದ ವ್ಯಕ್ತಿಯಾಗಿ ಪ್ರಕಾಶ್ ರೈ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ.

ದೊಡ್ಡ ಚಾರ್ಮಿನಾರ್ ಸೆಟ್ ಹಾಕಲಾಗಿತ್ತು
ಸಿನಿಮಾಕ್ಕಾಗಿ ದೊಡ್ಡ ಚಾರ್ಮಿನಾರ್ ಸೆಟ್ ಅನ್ನೇ ಹಾಕಲಾಗಿತ್ತು. ಗಾತ್ರದಲ್ಲಿ ಹೆಚ್ಚು-ಕಡಿಮೆ ನಿಜವಾದ ಚಾರ್ಮಿನಾರ್‌ಗೆ ಸಮಾನವಾಗಿತ್ತು ಸಿನಿಮಾಕ್ಕಾಗಿ ಹಾಕಿದ್ದ ಸೆಟ್. ಈ ಸೆಟ್ ಒಂದಕ್ಕಾಗಿಯೇ ಹಲವಾರು ಕೋಟಿ ಖರ್ಚು ಮಾಡಿದ್ದರು ನಿರ್ಮಾಪರು.
Recommended Video

ಎಲ್ಲಾ ಹಾಡುಗಳು ಸೂಪರ್ ಹಿಟ್
ಸಿನಿಮಾದ ಮತ್ತೊಂದು ಪ್ರಮುಖ ಅಂಶ ಸಂಗೀತ. ಆಗ ತೆಲುಗು ಸಿನಿಮಾದ ನಂಬರ್ 1 ಸಂಗೀತ ನಿರ್ದೇಶಕರಾಗಿದ್ದ ಮಣಿಶರ್ಮಾ ಈ ಸಿನಿಮಾಕ್ಕೆ ಸಂಗೀತ ನೀಡಿದ್ದರು. ಸಿನಿಮಾದ ಹಾಡುಗಳು ಬಹಳ ಭಿನ್ನವಾಗಿದ್ದವು. ಅಷ್ಟೇ ಅಲ್ಲ ಹಾಡುಗಳನ್ನು ಚಿತ್ರೀಕರಿಸಿದ ರೀತಿಯು ಸಖತ್ ಭಿನ್ನವಾಗಿತ್ತು. ಒಟ್ಟಾರೆ ಎಲ್ಲವೂ ಸೇರಿ ಸಿನಿಮಾವನ್ನು ಸೂಪರ್-ಡೂಪರ್ ಹಿಟ್ ಮಾಡಿತು.