For Quick Alerts
  ALLOW NOTIFICATIONS  
  For Daily Alerts

  ಶ್ರೀಲೀಲಾ ತೆಲುಗು ಚಿತ್ರಕ್ಕೆ ಸಾಥ್ ನೀಡಿದ ಮಹೇಶ್ ಬಾಬು

  |

  ಭರಾಟೆ, ಕಿಸ್ ಅಂತಹ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದುಕೊಂಡ ನಟಿ ಶ್ರೀಲೀಲಾ ಈಗ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ ಪೆಳ್ಳಿಸಂದD ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್ ಪ್ರವೇಶಿಸಿದ್ದಾರೆ.

  ಪೆಳ್ಳಿಸಂದD ಸಿನಿಮಾದ ಟ್ರೈಲರ್ ಈಗ ಬಿಡುಗಡೆಯಾಗಿದ್ದು, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಾಥ್ ಕೊಟ್ಟಿದ್ದಾರೆ. ಶ್ರೀಲೀಲಾ ಮತ್ತು ರೋಷನ್ ನಟಿಸುತ್ತಿರುವ ಪೆಳ್ಳಿಸಂದD ಚಿತ್ರದ ಟ್ರೈಲರ್ ಲಾಂಚ್ ಮಾಡಿದ ಮಹೇಶ್ ಬಾಬು ಚಿತ್ರತಂಡಕ್ಕೆ ಹಾಗೂ ಕಲಾವಿದರಿಗೆ ಶುಭಕೋರಿದರು.

  ಮತ್ತೊಂದು ತೆಲುಗು ಚಿತ್ರ: ಸ್ಟಾರ್ ನಟನ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ?ಮತ್ತೊಂದು ತೆಲುಗು ಚಿತ್ರ: ಸ್ಟಾರ್ ನಟನ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ?

  ಕೆ ರಾಘವೇಂದ್ರ ರಾವ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಗೌರಿ ರೋಣಂಕಿ ನಿರ್ದೇಶಿಸಿದ್ದಾರೆ. ಶ್ರೀಲೀಲಾ ಜೊತೆ ನಾಯಕನಾಗಿ ನಟಿಸಿರುವುದು ಟಾಲಿವುಡ್ ಸ್ಟಾರ್ ನಟ ಶ್ರೀಕಾಂತ್ ಅವರ ಪುತ್ರ ರೋಷನ್.

  ಪೆಳ್ಳಿಸಂದD ಸಿನಿಮಾ 25 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಪೆಳ್ಳಿಸಂದಡಿ ಚಿತ್ರದ ಮುಂದುವರಿದ ಭಾಗ. 1996 ಜನವರಿ 12 ರಂದು ಪೆಳ್ಳಿಸಂದಡಿ ಸಿನಿಮಾ ತೆರೆಕಂಡಿತ್ತು. ಕೆ ರಾಘವೇಂದ್ರ ರಾವ್ ನಿರ್ದೇಶನದಲ್ಲಿ ತಯಾರಾಗಿದ್ದ ಈ ಚಿತ್ರದಲ್ಲಿ ಶ್ರೀಕಾಂತ್ ನಾಯಕರಾಗಿದ್ದರು. ರವಳಿ ಹಾಗೂ ದೀಪ್ತಿ ಭಟ್ನಾಗರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. 25 ವರ್ಷದ ನಂತರ ಈಗ 'ಪೆಳ್ಳಿಸಂದಡಿ-2' ಬರ್ತಿದೆ.

  25 ವರ್ಷದ ಹಿಂದೆ ಅಪ್ಪನಿಗೆ ಸಕ್ಸಸ್ ತಂದುಕೊಟ್ಟಿದ್ದ ಚಿತ್ರದ ಮುಂದುವರಿದ ಭಾಗದಲ್ಲಿ ಈಗ ಮಗ ನಾಯಕನಾಗಿ ಇಂಡಸ್ಟ್ರಿ ಪ್ರವೇಶಿಸುತ್ತಿದ್ದು, ಇಂತಹ ವಿಶೇಷ ಪ್ರಾಜೆಕ್ಟ್‌ನಲ್ಲಿ ಶ್ರೀಲೀಲಾ ನಟಿಸಿರುವುದು ಗಮನಾರ್ಹ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಸದ್ದು ಮಾಡ್ತಿರುವ ಪೆಳ್ಳಿಸಂದD ಚಿತ್ರ ಹೆಚ್ಚು ನಿರೀಕ್ಷೆ ಮೂಡಿಸಿದೆ. ಎಂಎಂ ಕೀರವಾಣಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರೋಷನ್ ಮತ್ತು ಶ್ರೀಲೀಲಾ ಇಬ್ಬರಿಗೂ ಇದು ಚೊಚ್ಚಲ ತೆಲುಗು ಸಿನಿಮಾ ಆಗಿದ್ದು, ಬಹುಭಾಷೆ ನಟ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ಟಾಲಿವುಡ್‌ಗೆ 'ಕಿಸ್' ನಟಿ: ತೆಲುಗಿನ ಬಹುದೊಡ್ಡ ನಿರ್ದೇಶಕನ ಚಿತ್ರಕ್ಕೆ ಶ್ರೀಲೀಲಾ ನಾಯಕಿಟಾಲಿವುಡ್‌ಗೆ 'ಕಿಸ್' ನಟಿ: ತೆಲುಗಿನ ಬಹುದೊಡ್ಡ ನಿರ್ದೇಶಕನ ಚಿತ್ರಕ್ಕೆ ಶ್ರೀಲೀಲಾ ನಾಯಕಿ

  ಇನ್ನು ಚೊಚ್ಚಲ ತೆಲುಗು ಸಿನಿಮಾ ತೆರೆಕಾಣುವ ಮೊದಲೇ ಶ್ರೀಲೀಲಾಗೆ ಟಾಲಿವುಡ್‌ನಿಂದ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬರ್ತಿದೆ ಎಂದು ಹೇಳಲಾಗಿದೆ. ಮಾಸ್ ಮಹಾರಾಜ ರವಿತೇಜ ಅವರ ಹೊಸ ಪ್ರಾಜೆಕ್ಟ್‌ನಲ್ಲಿ ಶ್ರೀಲೀಲಾ ನಾಯಕಿಯಾಗುವ ಆಫರ್ ಬಂದಿದೆಯಂತೆ. ತ್ರಿನಾಧ್ ರಾವ್ ನಕ್ಕಿನಾ ನಿರ್ದೇಶನದ ಮಾಡಲಿರುವ ಚಿತ್ರದಲ್ಲಿ ರವಿತೇಜ ಇಬ್ಬರು ನಾಯಕಿಯರಿದ್ದು, ಅದರಲ್ಲಿ ಕನ್ನಡ ನಟಿ ಶ್ರೀಲೀಲಾ ಸಹ ಇರಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  Mahesh babu launched PelliSandaD Trailer

  ಪ್ರಸನ್ನ ಕುಮಾರ್ ಬೆಜವಾಡ ಈ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದು, ರವಿತೇಜಗೆ ಜೊತೆ ಶ್ರೀಲೀಲಾ ಮತ್ತು ಈಶ್ವರ್ಯ ಮೆನನ್ ನಟಿಸುವ ಸಾಧ್ಯತೆ ಇದೆಯಯಂತೆ. ಇಬ್ಬರದ್ದು ಪ್ರಮುಖ ಪಾತ್ರಗಳಾಗಿದ್ದು, ಚಿತ್ರಕ್ಕೆ ಟ್ವಿಸ್ಟ್ ಮತ್ತು ಕುತೂಹಲ ಹೆಚ್ಚಿಸುವ ನಾಯಕಿಯರು.

  ಹರಿ ಸಂತೋಷ್ ನಿರ್ದೇಶನದ ಬೈ ಟು ಲವ್ ಚಿತ್ರ ಶೂಟಿಂಗ್ ಮುಕ್ತಾಯಗೊಂಡಿದೆ. ಬಜಾರ್ ಖ್ಯಾತಿಯ ಧನ್ವೀರ್ ಈ ಚಿತ್ರದ ನಾಯಕನಾಗಿದ್ದು, ಶ್ರೀಲೀಲಾ ನಾಯಕಿಯಾಗಿದ್ದಾರೆ.

  English summary
  Tollywood Bollywood Prince Mahesh Babu Launched SreeLeela Starrer Telugu Film PelliSandaD Trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X