Don't Miss!
- Finance
ಷೇರು ಮಾರಾಟದಲ್ಲಿ ಭಾರೀ ನಷ್ಟ: ದುರ್ಬಲಗೊಳ್ಳಲಿವೆಯೇ ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್?
- Automobiles
ಶೀಘ್ರ ವೈಯಕ್ತಿಕ ಬಳಕೆಗೆ ಸಿಗಲಿದೆ ಬಜಾಜ್ ಕ್ಯೂಟ್: ಅದು ಬೈಕ್ ದರದಲ್ಲಿಯೇ...!
- Sports
ಆಸ್ಟ್ರೇಲಿಯನ್ ಓಪನ್: ಫೈನಲ್ಗೆ ಪ್ರವೇಶಿಸಿದ ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಜೋಡಿ
- News
ಬಿಜೆಪಿ, ಜೆಡಿಎಸ್ ತಂತ್ರ, ಕುರುಬ ಸಂಘದ ಭಿನ್ನಾಭಿಪ್ರಾಯ ಮೀರಿ ಸಿದ್ದರಾಮಯ್ಯಗೆ ಕೋಲಾರದಲ್ಲಿ ಗೆಲುವು ದಕ್ಕುವುದೇ?
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮರು ಬಿಡುಗಡೆಯಲ್ಲೂ ದಾಖಲೆ ಬರೆದ ಮಹೇಶ್ ಬಾಬು ಸಿನಿಮಾ
ತೆಲುಗಿನಲ್ಲಿ ಸ್ಟಾರ್ ನಟರ ಸೂಪರ್ ಹಿಟ್ ಸಿನಿಮಾಗಳ ರೀ ರಿಲೀಸ್ ಟ್ರೆಂಡ್ ಜೋರಾಗಿ ನಡೆಯುತ್ತಿದೆ. ಚಿತ್ರಮಂದಿರಗಳ ಮಾಲೀಕರಿಗೆ, ಸಿನಿಮಾ ನಿರ್ಮಾಪಕರಿಗೆ ಈ ಟ್ರೆಂಡ್ ದೊಡ್ಡ ಲಾಭವನ್ನೇ ತಂದುಕೊಡುತ್ತಿದೆ. ಕಲೆಕ್ಷನ್ ಆದ ಹಣ ಫ್ಯಾನ್ಸ್ ಅಸೋಸಿಯೇಷನ್ ಸೇರಿದಂತೆ ಕೆಲವು ಸಾಮಾಜಿಕ ಕಾರ್ಯಕ್ಕೂ ಬಳಕೆ ಮಾಡಲಾಗುತ್ತಿದೆ.
ತೆಲುಗಿನಲ್ಲಿ ಇತ್ತೀಚೆಗೆ ರೀ ರಿಲೀಸ್ ಟ್ರೆಂಡ್ ಪ್ರಾರಂಭವಾಗಿದ್ದೇ ಮಹೇಶ್ ಬಾಬು ನಟನೆಯ 'ಪೋಕಿರಿ' ಸಿನಿಮಾದ ರಿ-ರಿಲೀಸ್ ಮೂಲಕ. ಈ ಸಿನಿಮಾ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿತು. ಅದರ ಬೆನ್ನಲ್ಲೆ ಹಲವು ಸ್ಟಾರ್ ನಟರ ಮೆಗಾ ಹಿಟ್ ಸಿನಿಮಾಗಳು ಒಂದರ ಹಿಂದೊಂದರಂತೆ ತೆರೆಗೆ ಬಂದವು.
ಆದರೆ ಮಹೇಶ್ ಬಾಬು ನಟನೆಯ 'ಒಕ್ಕಡು' ಸಿನಿಮಾ ಮಾಡಿದ ದಾಖಲೆಯನ್ನು ಇನ್ಯಾವ ಸಿನಿಮಾವೂ ಮಾಡಲಿಲ್ಲ ಎಂದೇ ಹೇಳಬೇಕು. ರಿ ರಿಲೀಸ್‌ನಲ್ಲೂ ಮೊದಲ ದಿನವೇ ಕೋಟ್ಯಂತರ ಹಣವನ್ನು ಈ ಸಿನಿಮಾ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಇಪ್ಪತ್ತು ವರ್ಷದ ಹಿಂದಿನ ಸಿನಿಮಾ
ಬರೋಬ್ಬರಿ ಇಪ್ಪತ್ತು ವರ್ಷದ ಹಿಂದೆ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಿದ್ದ 'ಒಕ್ಕಡು' ಸಿನಿಮಾ ಮಹೇಶ್ ಬಾಬು ವೃತ್ತಿ ಜೀವನದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಸಿನಿಮಾ. 'ಒಕ್ಕಡು' ಅಬ್ಬರಕ್ಕೆ ತೆಲುಗು ಬಾಕ್ಸ್ ಆಫೀಸ್ ಸಿಡಿದು ಹೋಗಿತ್ತು. ಅಷ್ಟು ದೊಡ್ಡ ಹಿಟ್ ಆಗಿತ್ತು 'ಒಕ್ಕಡು' ಇದೀಗ ರಿ ರಿಲೀಸ್‌ನಲ್ಲೂ ಮ್ಯಾಜಿಕ್ ಮುಂದುವರೆಸಿರುವ ಒಕ್ಕಡು, ಮೊದಲ ದಿನವೇ ಐದು ಕೋಟಿ ಕಲೆಕ್ಷನ್ ಮಾಡಿ ಆಶ್ಚರ್ಯ ಹುಟ್ಟಿಸಿದೆ.

420 ಶೋಗಳನ್ನು ಸಿನಿಮಾಕ್ಕೆ ನೀಡಲಾಗಿತ್ತು
ಒಕ್ಕಡು ಸಿನಿಮಾದ ಮರು ಬಿಡುಗಡೆಗೆ ಸುಮಾರು 420 ಶೋಗಳನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ನೀಡಲಾಗಿತ್ತು. ಸರಾಸರಿ 70% ಗಿಂತಲೂ ಹೆಚ್ಚು ತುಂಬಿದ ಗೃಹಗಳಲ್ಲಿ ಸಿನಿಮಾದ ಪ್ರದರ್ಶನವಾಗಿದೆ. ಮಹೇಶ್ ಬಾಬು ಅಭಿಮಾನಿಗಳು ಮಾತ್ರವೇ ಅಲ್ಲದೆ, ಈ ಸಿನಿಮಾದ ಅಭಿಮಾನಿಗಳು ತಂಡೋಪ ತಂಡವಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಹಾಗಾಗಿಯೇ ಮೊದಲ ದಿನ ಈ ಸಿನಿಮಾ ಐದು ಕೋಟಿ ಕಲೆಕ್ಷನ್ ಮಾಡಿದೆ.

2003 ರಲ್ಲಿ ಬಿಡುಗಡೆ ಆಗಿದ್ದ ಸಿನಿಮಾ
ಒಕ್ಕಡು ಸಿನಿಮಾ 2003 ರ ಜನವರಿ 15 ರಂದು ಬಿಡುಗಡೆ ಆಗಿತ್ತು. ಭೂಮಿಕಾ ಚಾವ್ಲಾ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಪ್ರಕಾಶ್ ರೈ ವಿಲನ್. ಕಬಡ್ಡಿ ಆಟಗಾರನೊಬ್ಬ ವಿಲನ್ ಕಪಿಮುಷ್ಠಿಯಿಂದ ನಾಯಕಿಯನ್ನು ಹೈದರಾಬಾದ್‌ಗೆ ಓಡಿಸಿಕೊಂಡು ಬಂದು ಆಕೆಯನ್ನು ಕಾಪಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಗುಣಶೇಖರ್. ಮಣಿಶರ್ಮಾ ನೀಡಿದ್ದ ಸಂಗೀತ ಭಾರಿ ಹಿಟ್ ಆಗಿತ್ತು. ಸಿನಿಮಾದ ಫೈಟ್‌ಗಳು, ಡೈಲಾಗ್‌ಗಳು ಭಾರಿ ಜನಪ್ರಿಯತೆ ಗಳಿಸಿದ್ದವು.

ಹಲವು ನಟರ ಸಿನಿಮಾಗಳು ರೀ ರಿಲೀಸ್
'ಪೋಕಿರಿ' ಸಿನಿಮಾದ ರೀ ರಿಲೀಸ್ ಬಳಿಕ ಆಂಧ್ರ-ತೆಲಂಗಾಣಗಳಲ್ಲಿ ರೀ ರಿಲೀಸ್ ಟ್ರೆಂಡ್ ಹೆಚ್ಚಾಗಿದೆ. 'ಪೋಕಿರಿ' ಬಳಿಕ ಪ್ರಭಾಸ್ ನಟನೆಯ 'ವರ್ಷಂ', 'ಬಿಲ್ಲಾ', ಪವನ್ ಕಲ್ಯಾಣ್ ನಟನೆಯ 'ಖುಷಿ', 'ಜಲ್ಸಾ', ಅಲ್ಲು ಅರ್ಜುನ್ ನಟನೆಯ 'ಆರ್ಯ', ಜೂ ಎನ್‌ಟಿಆರ್ ನಟನೆಯ 'ಯಮದೊಂಗ', 'ಸಿಂಹಾದ್ರಿ' ಇನ್ನೂ ಹಲವು ಸ್ಟಾರ್ ನಟರ ಭರ್ಜರಿ ಹಿಟ್ ಸಿನಿಮಾಗಳು ರಿ ರಿಲೀಸ್ ಆಗಿವೆ. ದೊಡ್ಡ ಮೊತ್ತದ ಹಣವನ್ನೂ ಗಳಿಸಿವೆ. ಆದರೆ 'ಒಕ್ಕಡು' ರೀತಿಯಲ್ಲಿ ಮೊದಲ ದಿನವೇ ಐದು ಕೋಟಿ ಹಣವನ್ನು ಯಾವ ರಿ ರಿಲೀಸ್ ಸಿನಿಮಾ ಸಹ ಗಳಿಸಿಲ್ಲ.