For Quick Alerts
  ALLOW NOTIFICATIONS  
  For Daily Alerts

  ನಾನು ಎಲ್ಲಾ ಭಾಷೆಯನ್ನು ಪ್ರೀತಿಸುತ್ತೇನೆ: ಯೂಟರ್ನ್ ಹೊಡೆದ ಮಹೇಶ್ ಬಾಬು

  |

  'ಪುಷ್ಪ', 'ಆರ್‌ಆರ್‌ಆರ್‌', 'ಕೆಜಿಎಫ್ 2' ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿವೆ. ಬಾಲಿವುಡ್‌ ಮಂದಿ ದಕ್ಷಿಣ ಭಾರತದ ಸಿನಿಮಾಗಳ ಕಡೆ ತಿರುಗಿ ನೋಡುವಂತೆ ಮಾಡಿವೆ. ಹೀಗಾಗಿ ಬಾಲಿವುಡ್, ದಕ್ಷಿಣ ಭಾರತದ ನಾಯಕರಿಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವಂತೆ ಆಫರ್ ನೀಡುತ್ತಿವೆ.

  ಯಶ್‌ ಅಭಿನಯದ 'ಕೆಜಿಎಫ್‌ 2' ಸಿನಿಮಾ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿ 410 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿಕೊಂಡಿತ್ತು. ಇದರಿಂದ ಬಾಲಿವುಡ್ ಸ್ಟಾರ್‌ ಸಿನಿಮಾಗಳೇ ಥಿಯೇಟರ್‌ನಲ್ಲಿ ಜನ ಇಲ್ಲದೇ ಖಾಲಿ ಹೊಡೆಯುತ್ತಿದ್ದವು. ಅಷ್ಟರ ಮಟ್ಟಿಗೆ ದಕ್ಷಿಣ ಭಾರತದ ಸಿನಿಮಾಗಳ ಹವಾ ಜೋರಾಗಿತ್ತು.

  ಬಾಲಿವುಡ್‌ಗೆ ನನ್ನನ್ನು ನಿಭಾಯಿಸುವ ಅರ್ಹತೆ ಇಲ್ಲ: ಮತ್ತೆ ಟಾಂಗ್ ಕೊಟ್ಟ ಮಹೇಶ್ ಬಾಬುಬಾಲಿವುಡ್‌ಗೆ ನನ್ನನ್ನು ನಿಭಾಯಿಸುವ ಅರ್ಹತೆ ಇಲ್ಲ: ಮತ್ತೆ ಟಾಂಗ್ ಕೊಟ್ಟ ಮಹೇಶ್ ಬಾಬು

  ಬಾಲಿವುಡ್ ಸಿನಿಮಾಗಳನ್ನು ಯಾರು ಸೆಡ್ಡು ಹೊಡೆಯಲು ಸಾಧ್ಯವಿಲ್ಲ ಎಂದು ಬೀಗುತ್ತಿತ್ತು. ಒಂದರ ಹಿಂದೆ ಒಂದಂತೆ ರಿಲೀಸ್ ಆದ ದಕ್ಷಿಣ ಭಾರತದ ಸಿನಿಮಾಗಳು, ಬಾಲಿವುಡ್‌ ಉಳಿದ ಸ್ಟಾರ್‌ ಸಿನಿಮಾಗಳನ್ನೇ ಮಕಾಡೆ ಮಲಗಿಸಿತ್ತು. ಹೀಗಾಗಿ ಬಾಲಿವುಡ್‌ ದಕ್ಷಿಣ ಭಾರತದ ನಾಯಕರಿಗೆ ಬಾಲಿವುಡ್‌ನಲ್ಲಿ ನಟಿಸಲು ಆಫರ್ ನೀಡುತ್ತಿದೆ. ಸದ್ಯ ಇದೇ ವಿಚಾರವಾಗಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಕೂಡ ಬಾಲಿವುಡ್‌ಗೆ ಎಂಟ್ರಿ ಮಾಡ್ತಾರಾ ಎಂಬ ಪ್ರಶ್ನೆಗೆ ಅಚ್ಚರಿಯ ಹೇಳಿಕೆ ನೀಡಿದ್ದರು. ಆದರೆ ಹೇಳಿಕೆ ವಿರುದ್ದ ಮಹೇಶ್ ಬಾಬು ಯೂಟರ್ನ್ ಹೊಡೆದಿದ್ದಾರೆ.

   'ನನ್ನ ಸಮಯ ವ್ಯರ್ಥ ಮಾಡಲ್ಲ' ಎಂದಿದ್ದ ಮಹೇಶ್ ಬಾಬು

  'ನನ್ನ ಸಮಯ ವ್ಯರ್ಥ ಮಾಡಲ್ಲ' ಎಂದಿದ್ದ ಮಹೇಶ್ ಬಾಬು

  ಟಾಲಿವುಡ್‌ನ ಸೂಪರ್ ಸ್ಟಾರ್ ಮಹೇಶ್‌ ಬಾಬುಗೆ ಬಾಲಿವುಡ್‌ ಎಂಟ್ರಿ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆ ವೇಳೆ ಮಹೇಶ್ ಬಾಬು ಅಚ್ಚರಿಯ ಹೇಳಿಕೆ ನೀಡಿದ್ದರು. ಬಾಲಿವುಡ್‌ ನನ್ನನ್ನು ಕೊಂಡು ಕೊಳ್ಳಲು ಸಾಧ್ಯವಿಲ್ಲ. ನನಗೆ ಹಿಂದಿಯಲ್ಲಿ ಸಾಕಷ್ಟು ಆಫರ್‌ಗಳು ಬಂದಿವೆ. ಆದರೆ ಅವರು ನನಗೆ ಸಾಕಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನನ್ನನ್ನು ಖರೀದಿಸಲು ಸಾಧ್ಯವಾಗದ ಉದ್ಯಮದಲ್ಲಿ ಕೆಲಸ ಮಾಡುತ್ತಾ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನನಗೆ ಇಲ್ಲಿ ಸಿಗುವ ಸ್ಟಾರ್‌ ಢಮ್ ಮತ್ತು ಗೌರವ ದೊಡ್ಡದಾಗಿದೆ. ಹಾಗಾಗಿ ನನ್ನ ಇಂಡಸ್ಟ್ರಿ ಬಿಟ್ಟು ಬೇರೆ ಇಂಡಸ್ಟ್ರಿಗೆ ಹೋಗುವ ಬಗ್ಗೆ ನಾನು ಯೋಚಿಸಿಲ್ಲ." ಎಂದು ಹೇಳಿದ್ದರು.

  ಅಲ್ಲು ಅರ್ಜುನ್ ನಿರಾಕರಿಸಿದ್ದ 'ಸರ್ಕಾರು ವಾರಿ ಪಾಟ' ಮಹೇಶ್ ಬಾಬು ಪಾಲು?ಅಲ್ಲು ಅರ್ಜುನ್ ನಿರಾಕರಿಸಿದ್ದ 'ಸರ್ಕಾರು ವಾರಿ ಪಾಟ' ಮಹೇಶ್ ಬಾಬು ಪಾಲು?

   ಬಾಲಿವುಡ್‌ ಮಂದಿಯ ಕೆಂಗಣ್ಣಿಗೆ ಗುರಿಯಾದ ಪ್ರಿನ್ಸ್‌

  ಬಾಲಿವುಡ್‌ ಮಂದಿಯ ಕೆಂಗಣ್ಣಿಗೆ ಗುರಿಯಾದ ಪ್ರಿನ್ಸ್‌

  ಬಾಲಿವುಡ್ ನನ್ನನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಮಹೇಶ್‌ ಬಾಬು ವಿರುದ್ದ ಹಿಂದಿ ಚಿತ್ರೋದ್ಯಮ ಆಕ್ರೋಶ ವ್ಯಕ್ತಪಡಿಸಿದೆ. ಮಹೇಶ್‌ ಬಾಬು ಅವರ ಈ ಹೇಳಿಕೆ ಬಾಲಿವುಡ್ ಸಿನಿಮೋದ್ಯಮಕ್ಕೆ ಅಗೌರವ ತಂದಿದೆ. ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಬಾಲಿವುಡ್‌ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಮಹೇಶ್ ಬಾಬು ಈ ಹೇಳಿಕೆ ಭಾರತೀಯ ಚಿತ್ರರಂಗದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿತ್ತು.

   ಎಲ್ಲಾ ಚಿತ್ರರಂಗದ ಮೇಲೆ ಗೌರವವಿದೆ ಎಂದ ಮಹೇಶ್ ಬಾಬು

  ಎಲ್ಲಾ ಚಿತ್ರರಂಗದ ಮೇಲೆ ಗೌರವವಿದೆ ಎಂದ ಮಹೇಶ್ ಬಾಬು

  ಬುಧವಾರ ಮಹೇಶ್‌ ಬಾಬು ತಮ್ಮ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತವಾದ ಹಿನ್ನಲೆ ತಾವು ನೀಡಿದ್ದ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ನಾನು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ಪ್ರೀತಿಸುತ್ತೇನೆ. ಯಾವ ಭಾಷೆಯನ್ನು ತುಚ್ಚವಾಗಿ ಕಾಣುವುದಿಲ್ಲ" ಎಂದು ಹೇಳಿದ್ದಾರೆ. ಈ ಬಗ್ಗೆ 'ಮೇಜೆರ್' ಸಿನಿಮಾದ ಚಿತ್ರತಂಡವೂ ಕೂಡ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಎಲ್ಲಾ ಭಾಷೆ ಚಿತ್ರರಂಗಕ್ಕೂ ಗೌರವ ಕೊಡ್ತೇವೆ ಎಂದು ಹೇಳಿದೆ. ತೆಲುಗು ಚಿತ್ರರಂಗದಲ್ಲೇ ನಾನು ಚೆನ್ನಾಗಿ ಇದ್ದೇನೆ. ಇಲ್ಲಿಯೇ ಇರಲು ಇಷ್ಟ ಪಡುತ್ತೇನೆ ಎಂಬ ಅರ್ಥದಲ್ಲಿ ನಾನು ಆ ಹೇಳಿಕೆಯನ್ನ ನೀಡಿದ್ದೇ ಆದರೆ ಈ ಹೇಳಿಕೆಯನ್ನು ಕೆಲ ಮಾಧ್ಯಮಗಳು ತಪ್ಪಾಗಿ ಬಿಂಬಿಸಿದೆ ಎಂದು ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ.

   ಬಾಲಿವುಡ್‌ನಲ್ಲಿ ಬಣ್ಣ ಹಚ್ಚಿದ ದಕ್ಷಿಣ ಭಾರತದ ನಟ-ನಟಿಯರು

  ಬಾಲಿವುಡ್‌ನಲ್ಲಿ ಬಣ್ಣ ಹಚ್ಚಿದ ದಕ್ಷಿಣ ಭಾರತದ ನಟ-ನಟಿಯರು

  ದಕ್ಷಿಣ ಭಾರತದ ಹಲವು ನಾಯಕ ನಾಯಕಿಯರು ಬಾಲಿವುಡ್‌ನಲ್ಲೂ ಬಣ್ಣ ಹಚ್ಚಿದ್ದಾರೆ. 'ಪುಷ್ಪ' ಸಿನಿಮಾ ವಿಶ್ವದಾದ್ಯಂತ ಸಕ್ಸಸ್ ಆದ ಬಳಿಕ ನಟ ಅಲ್ಲು ಅರ್ಜುನ್‌ಗೆ ಬಾಲಿವುಡ್‌ ಸಿನಿಮಾಗಳಲ್ಲಿ ಆಫರ್‌ಗಳು ಕೇಳಿ ಬರುತ್ತಿದೆ. ಈಗಾಗಲೇ ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ವಿಜಯ ದೇವರಕೊಂಡ ಸಹ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ. ಧನುಷ್ ಕೂಡ ಬಾಲಿವುಡ್‌ನಲ್ಲಿ ಮಿಂಚಿದ್ದಾರೆ.

  English summary
  Mahesh has clarified that he loves cinema and respects all languages. He said he is comfortable doing the film where he has been working.
  Thursday, May 12, 2022, 8:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X