For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ರಂಗಕ್ಕೆ ಮಾಸ್ಟರ್ ಆನಂದ್ ಮಗಳು ವಂಶಿಕಾ ಎಂಟ್ರಿ!

  |

  ಕನ್ನಡ ಕಿರುತೆರೆ ಮತ್ತು ಹಿರಿ ತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮಾಸ್ಟರ್ ಆನಂದ್ ಯಾರಿಗೆ ತಾನೇ ಗೊತ್ತಿಲ್ಲ. ಆದರೆ ಈಗ ಮಾಸ್ಟರ್ ಆನಂದ ಎಂದಾಕ್ಷಣ ನೆನಪಾಗುವುದು ಅವರ ಮಗಳು ವಂಶಿಕಾ. ಮಾಸ್ಟರ್ ಆನಂದ್ ಬಾಲನಟನಾಗಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ ಅವರ ಮಗಳ ಸರದಿ.

  ವಂಶಿಕಾ ಮಾಸ್ಟರ್ ಆನಂದ್ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾಳೆ. ಅಪ್ಪನಂತೆಯೇ ಸಾಧನೆ ಮಾಡಲು ಪುಟ್ಟ ವಯಸ್ಸಿಗೆ ಬಣ್ಣ ಹಚ್ಚಿ ಜನರನ್ನು ರಂಜಿಸುವ ಕಾರ್ಯಕ್ಕೆ ಇಳಿದು ಬಿಟ್ಟಿದ್ದಾಳೆ. ನಮ್ಮಮ್ಮ ಸೂಪರ್ ಸ್ಟಾರ್ ಮೂಲಕ ವಂಶಿಕ ಕರುನಾಡಿನ ಜನರ ಮುಂದೆ ಬಂದಳು.

  ಪುಟ್ಟಕ್ಕನ ಮಕ್ಕಳು: ಕ್ಯಾರೆಕ್ಟರ್‌ಗೆ ಕ್ಯಾರೆಟ್ ಎಂದು ಬರೆದ ದೊರೆ, ಮುಂಗುಸಿಯಿಂದ ಸಿಕ್ಕಿ ಬೀಳುತ್ತಾನಾ?ಪುಟ್ಟಕ್ಕನ ಮಕ್ಕಳು: ಕ್ಯಾರೆಕ್ಟರ್‌ಗೆ ಕ್ಯಾರೆಟ್ ಎಂದು ಬರೆದ ದೊರೆ, ಮುಂಗುಸಿಯಿಂದ ಸಿಕ್ಕಿ ಬೀಳುತ್ತಾನಾ?

  ವಂಶಿಕಾ ಸಿಕ್ಕಾಪಟ್ಟೆ ಕ್ಯೂಟ್, ಸಿಕ್ಕಾಪಟ್ಟೆ ಸೂಪರ್ ಎನ್ನುತ್ತಾರೆ ಕರುನಾಡ ಜನ. ರಿಯಾಲಿಟಿ ಕಾರ್ಯಕ್ರಮ ಮೂಲಕ ಟಿವಿ ಪರದೆ ಮೇಲೆ ಕಾಣಿಸಿಕೊಂಡ ವಂಶಿಕಾ ಈಗ ಕರುನಾಡ ಜನರ ಮನೆ ಮಗಳೆ ಆಗಿಬಿಟ್ಟಿದ್ದಾಳೆ.

  ವಂಶಿಕಾಗೆ ಸಿಕ್ಕಾ ಪಟ್ಟೆ ಡಿಮ್ಯಾಂಡು!

  ವಂಶಿಕಾಗೆ ಸಿಕ್ಕಾ ಪಟ್ಟೆ ಡಿಮ್ಯಾಂಡು!

  ಯಾವುದೇ ಕಾರ್ಯಕ್ರಮದಲ್ಲಿ ವಂಶಿಕಾ ಬರ್ತಾಳೆ ಅಂದರೆ ಸಾಕು, ಅವಳ ತುಂಟಾಟವನ್ನು ನೋಡಲು ಜನರು ಕಾಯುತ್ತಿರುತ್ತಾರೆ. ಈ ಪುಟ್ಟ ವಯಸ್ಸಿಗೆ ವಂಶಿಕಾಗೆ ಆಗಾಧವಾದ ಕಲೆ, ಪ್ರತಿಭೆ ಎಲ್ಲವೂ ಇದೆ. ಇದು ಪದೇ ಪದೇ ಸಾಬೀತು ಆಗುತ್ತಲೇ ಇದೆ. ಈಗ ವಂಶಿಕ ಕಿರುತೆರೆಯಿಂದ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾಳೆ. ಇನ್ನು ಮುಂದೆ ವಂಶಿಕಾ ಸಿನಿಮಾಗಳ ಮೂಲಕವೂ ಬಣ್ಣ ಹಚ್ಚಲಿದ್ದಾಳೆ.

  ಗಣೇಶನ ಹಬ್ಬಕ್ಕೆ ತವರಿಗೆ ಹೋಗುವ ತವಕದಲ್ಲಿ ಸತ್ಯ: ಅತ್ತೆ ಬಿಡ್ತಾರಾ?ಗಣೇಶನ ಹಬ್ಬಕ್ಕೆ ತವರಿಗೆ ಹೋಗುವ ತವಕದಲ್ಲಿ ಸತ್ಯ: ಅತ್ತೆ ಬಿಡ್ತಾರಾ?

  ನಮ್ಮಮ್ಮ ಸೂಪರ್‌ ಸ್ಟಾರ್ ವಂಶಿಕಾ ಹವಾ!

  ನಮ್ಮಮ್ಮ ಸೂಪರ್‌ ಸ್ಟಾರ್ ವಂಶಿಕಾ ಹವಾ!

  ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ವಂಶಿಕಾ ಮೊದಲ ಬಾರಿಗೆ ಕಿರುತೆರೆಯ ರಿಯಾಲಿಟಿ ಶೋನಲ್ಲಿ ಭಾಗಿಯಾದಳು. ಈ ಕಾರ್ಯಕ್ರಮದಲ್ಲಿ ವಂಶಿಕಾ ತುಂಟಾಟಕ್ಕೆ ಪ್ರತಿಯೊಬ್ಬರು ಮನಸೋತಿದ್ದಾರೆ. ಅಲ್ಲಿಂದ ಶುರುವಾದ ವಂಶಿಕಾ ಕಿರುತೆರೆ ಜರ್ನಿ ಹಲವು ಕಾರ್ಯಕ್ರಮಗಳಲ್ಲಿ ಹಾಗೆಯೇ ಮುಂದುವರೆದಿದೆ. ಮಕ್ಕಳಿಗಾಗಿ ಮಾಡುವ ರಿಯಾಲಿಟಿ ಶೋ ಮಾತ್ರವಲ್ಲ ದೊಡ್ಡವರ ರಿಯಾಲಿಟಿ ಶೋನಲ್ಲಿ ವಿಶೇಷವಾಗಿದೆ. ಹಾಗಾಗಿಯೇ ಈಗಲೂ ಕೂಡ ವಂಶಿಕಾ ಒಂದಾದ ಬಳಿಕ ಒಂದು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾಳೆ ಹಾಗೆಯೇ ವಂಶಿಕಾ ಇರುವ ಕಾರ್ಯಕ್ರಮವೆಂದರೆ ಪ್ರೇಕ್ಷಕರಿಗೂ ಕೂಡ ಬಹಳ ಅಚ್ಚುಮೆಚ್ಚು.

  'ಲವ್ ಲಿ' ಚಿತ್ರದಲ್ಲಿ ವಂಶಿಕ!

  'ಲವ್ ಲಿ' ಚಿತ್ರದಲ್ಲಿ ವಂಶಿಕ!

  ಇದೀಗ ವಂಶಿಕಾ ಸಿನಿಮಾಗಳಲ್ಲಿ ಕೂಡ ನಟಿಸೋಕೆ ಶುರು ಮಾಡಿಬಿಟ್ಟಿದ್ದಾಳೆ. ಇದು ವಂಶಿಕಾಳನ್ನು ಇಷ್ಟ ಪಡುವವರಿಗೆ ಖುಷಿಯ ವಿಚಾರ. ಇನ್ನು ಮುಂದೆ ಬಾಲನಟಿಯಾಗಿ ವಂಶಿಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲಿದ್ದಾಳೆ. ವಂಶಿಕಾ ನಡನೆಯ ಮೊದಲ ಸಿನಿಮಾ 'ಲವ್ ಲಿ'. ನಟ ವಸಿಷ್ಠ ಸಿಂಹ ಅಭಿನಯದ ಈ ಚಿತ್ರದಲ್ಲಿ ವಂಶಿಕ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಗಣೇಶ ಹಬ್ಬದ ಪ್ರಯುಕ್ತ ವಂಶಿಕ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಹಾಗಾಗಿ ಇನ್ನು ಮುಂದೆ ಕಿರುತೆರೆಯಲ್ಲಿ ಮಾತ್ರವಲ್ಲ ವಂಶಿಕಾಗಳನ್ನು ದೊಡ್ಡ ಪರದೆಯ ಮೇಲೆ ನೋಡಬಹುದು.

  ಪುಟ್ಟ ವಯಸ್ಸಿಗೆ ಬೆಟ್ಟದಷ್ಟು ಪ್ರತಿಭೆ!

  ಪುಟ್ಟ ವಯಸ್ಸಿಗೆ ಬೆಟ್ಟದಷ್ಟು ಪ್ರತಿಭೆ!

  ಇನ್ನು ವಂಶಿಕ ಕೇವಲ ಕಿರುತೆರೆ ಹಿರಿತೆರೆಯಲ್ಲಿ ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟಿವ್. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾಳೆ. ಹಲವು ವಿಡಿಯೋಗಳನ್ನು ಮಾಡುತ್ತಾ ಜನರನ್ನು ನಕ್ಕು ನಗಿಸುತ್ತಾಳೆ. ಯಾವ ನಟ, ನಟಿಗೂ ಕಡಿಮೆ ಇಲ್ಲದಷ್ಟು ಕ್ರೇಜ್ ವಂಶಿಕಾಗೆ ಇದೆ. ಈ ಪುಟ್ಟ ಪೋರಿಯ ಪ್ರತಿಭೆಯನ್ನು ಜನ ಮಸಾರೆ ಒಪ್ಪಿದ್ದಾರೆ.

  English summary
  Master Anand's daughter Vanshika marks her sandalwood debut in Vasishta Simha starrer Love Li movie, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X