For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳೇ ನನ್ನ 'ಗಾಡ್ ಫಾದರ್ಸ್': ಮಳೆಯನ್ನು ಲೆಕ್ಕಿಸದೇ ಮೆಗಾಸ್ಟಾರ್ ಪವರ್‌ಫುಲ್ ಸ್ಪೀಚ್!

  |

  ಮಾಲಿವುಡ್ ಸೂಪರ್ ಹಿಟ್ 'ಲೂಸಿಫರ್' ತೆಲುಗು ರೀಮೆಕ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸಿದ್ದಾರೆ. ಚಿತ್ರದ ಮತ್ತೊಂದು ಸ್ಪೆಷಲ್ ರೋಲ್‌ನಲ್ಲಿ ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಮಿಂಚಿದ್ದಾರೆ. ಅಕ್ಟೋಬರ್ 5ಕ್ಕೆ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗ್ತಿದ್ದು ಅನಂತಪುರದಲ್ಲಿ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನೆರವೇರಿದೆ. ಇನ್ನು ವೇದಿಕೆಯಲ್ಲಿ ಪವರ್‌ಫುಲ್ ಸ್ಪೀಚ್ ಮೂಲಕ 'ಗಾಡ್ ಫಾದರ್' ಚಿರು ಅಭಿಮಾನಿಗಳ ಮನಗೆದ್ದಿದ್ದಾರೆ.

  ತಮಿಳು ನಿರ್ದೇಶಕ ಮೋಹನ್ ರಾಜಾ 'ಗಾಡ್ ಫಾದರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರೀ ರಿಲೀಸ್ ಈವೆಂಟ್ ಸಾವಿರಾರು ಜನ ಅಭಿಮಾನಿಗಳು ಭಾಗಿ ಆಗಿದ್ದರು. ಸುರಿವ ಮಳೆಯ ನಡುವೆಯೂ ಚಿರು ಅಭಿಮಾನಿಗಳನ್ನುದ್ದೇಶಿ 30 ನಿಮಿಷಗಳ ಕಾಲ ಮಾತನಾಡಿದ್ದಾರೆ. ಚಿರಂಜೀವಿ ಜೊತೆಗೆ ಸತ್ಯದೇವ್, ಶಫಿ, ನಿರ್ದೇಶಕ ಮೋಹನ್ ರಾಜಾ, ಗೆಟಪ್ ಶ್ರೀನು ಈವೆಂಟ್‌ಗೆ ಹಾಜರಾಗಿದ್ದರು. ಮಳೆಯ ಕಾರಣ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಇನ್ನು ಚಿರಂಜೀವಿ ವೇದಿಕೆಗೆ ಬರುವುದು ಸಹ ತಡವಾಗಿತ್ತು. ಆದರೆ ಅಭಿಮಾನಿಗಳು ನೆಚ್ಚಿನ ನಟನ ಮಾತುಗಳನ್ನು ಕೇಳಲು ಕಾದು ಕೂತಿದ್ದರು.

  ಹಾಡುಗಳಿಲ್ಲದ ಈ ಸಿನಿಮಾವನ್ನು ಚಿರಂಜೀವಿ ಒಪ್ಪಿದ್ದೇಕೆ? ಗಾಡ್ ಫಾದರ್ ಹೇಳಿದ್ದೇನು?ಹಾಡುಗಳಿಲ್ಲದ ಈ ಸಿನಿಮಾವನ್ನು ಚಿರಂಜೀವಿ ಒಪ್ಪಿದ್ದೇಕೆ? ಗಾಡ್ ಫಾದರ್ ಹೇಳಿದ್ದೇನು?

  ಅಭಿಮಾನಿಗಳನ್ನು ಹುರುದುಂಬಿಸುಬ ಭಾಷಣದ ಮೂಲಕ ಚಿರಂಜೀವಿ ಗಮನ ಸೆಳೆದರು. ಚಿತ್ರಕ್ಕೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ಧನ್ಯವಾದ ತಿಳಿಸಿದರು. ಈ ಸಿನಿಮಾ ನಿರ್ಮಾಣವಾಗಲು ರಾಮ್‌ಚರಣ್ ಮುಖ್ಯ ಕಾರಣ. ಆತನಿಂದಲೇ 'ಗಾಡ್ ಫಾದರ್' ಸಿನಿಮಾ ಇಷ್ಟು ಅದ್ಧೂರಿಯಾಗಿ ಮೂಡಿಬಂದಿದೆ ಎಂದರು. ಇನ್ನು ಅಕ್ಟೋಬರ್ 5ಕ್ಕೆ ನಮ್ಮ ಸಿನಿಮಾ ಜೊತೆಗೆ ನಾಗಾರ್ಜುನ ನಟನೆಯ 'ದಿ ಘೋಷ್ಟ್' ಸಿನಿಮಾ ರಿಲೀಸ್ ಆಗ್ತಿದೆ. ಅದನ್ನು ನೋಡಿ ಗೆಲ್ಲಿಸಿ ಎಂದರು. ಮಳೆ ಎಂದು ಹಿಡಿದ ಕೊಡೆಯನ್ನು ಪಕ್ಕಕ್ಕೆ ತಳ್ಳಿ ಮಳೆ ನೆನೆಯುತ್ತಲೇ ಚಿರು ಮಾತನಾಡಿದರು. ಮೆಗಾಸ್ಟಾರ್ ಮಾತುಗಳನ್ನು ಕೇಳಿ ಅಭಿಮಾನಿಗಳು ಹುಚ್ಚೆದ್ದು ಕುಣಿದರು.

  ರಾಯಲಸೀಮೆಯ ಬಗ್ಗೆ ಚಿರು ಮಾತುಗಳು ಸಖತ್ ಸದ್ದು ಮಾಡ್ತಿದೆ. "ನಾನು ಯಾವಾಗ ಬಂದರೂ ರಾಯಲಸೀಮೆ ಪುಳಕಗೊಳ್ಳುತ್ತದೆ. ಇಲ್ಲಿಂದಲೇ ನನ್ನ ರಾಜಕೀಯ ಪಕ್ಷವನ್ನು ಆರಂಭಿಸಿದ್ದೆ. ಅಂದು ಮಳೆ ಬಂದಿತ್ತು. ಮತ್ತೆ ಈಗ 'ಗಾಡ್ ಫಾದರ್' ಕಾರ್ಯಕ್ರಮಕ್ಕೂ ಮಳೆ ಬಂದಿದೆ. 'ಇಂದ್ರ' ಚಿತ್ರದ ಸಂದರ್ಭದಲ್ಲೂ ವರುಣದ ಆಶೀರ್ವಾದ ನಮಗೆ ಸಿಕ್ಕಿತ್ತು. ಈ ವೇದಿಕೆಯ ಪರವಾಗಿ ಆ ವರುಣನಿಗೆ ಧನ್ಯವಾದ ತಿಳಿಸುತ್ತೇನೆ ಎನ್ನುತ್ತಾ ಭಾವುಕರಾಗಿದ್ದಾರೆ. ವರುಣ ದೇವನ ಆಶೀರ್ವಾದದಿಂದ 'ಗಾಡ್ ಫಾದರ್' ಸಿನಿಮಾ ಕೂಡ ಸಕ್ಸಸ್ ಆಗುತ್ತದೆ ಎನ್ನುವ ನಿರೀಕ್ಷೆ ಎಂದರು.

  Megastar Chiranjeevi Powerful Speech At GodFather Grand Pre Release Event

  ವಿಜಯದಶಮಿಯಂದು 'ಗಾಡ್‌ಫಾದರ್' ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಸಿನಿಮಾ ಪ್ರಮೋಷನ್ ಭರದಿಂದ ಸಾಗಿದ್ದು, ಸದ್ಯ ಪ್ರೀ ರಿಲೀಸ್ ಈವೆಂಟ್‌ನಲ್ಲೇ ಜಬರ್ದಸ್ತ್ ಟ್ರೈಲರ್ ಕೂಡ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಥಾರ್ ಮಾರ್ ಥಕ್ಕರ್ ಮಾರ್' ನಂತರ 'ನಜಭಜ' ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಮತ್ತು ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ತಮನ್ ಸಂಗೀತ ಚಿತ್ರಕ್ಕಿದೆ. 'ಲೂಸಿಫರ್' ಚಿತ್ರದಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರದಲ್ಲಿ ಚಿರು ನಟಿಸಿದ್ದು, ಪೃಥ್ವಿರಾಜ್ ಪಾತ್ರದಲ್ಲಿ ಸಲ್ಲು ಮಿಂಚಿದ್ದಾರೆ.

  English summary
  Megastar Chiranjeevi Powerful Speech At GodFather Grand Pre Release Event. Know More.
  Thursday, September 29, 2022, 6:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X